Advertisement

31ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಚಾಲನೆ

06:07 PM Jan 06, 2020 | Suhan S |

ಮುಂಬಯಿ, ಜ. 5: ತುಳು ಸಂಘ ಬರೋಡಾ ಇದರ 31ನೇ ವಾರ್ಷಿಕೋತ್ಸವ ಸಮಾರಂಭವು ಜ. 5 ರಂದು ಅಪರಾಹ್ನ ಬರೋಡಾದ ಗುಜರಾತ್‌ ರಿಫೈನರಿ ಕಮ್ಯುನಿಟಿ ಸಭಾಗೃಹದಲ್ಲಿ ತುಳು ಸಂಘದ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಗುರುವಾಯನಕೆರೆ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಜರಗಿತು.

Advertisement

ಗುಜರಾತ್‌ನ ಹಿರಿಯ ಉದ್ಯಮಿ, ಸಂಘಟಕ, ಸಮಾಜ ಸೇವಕ ಜಯರಾಮ ಶೆಟ್ಟಿ ಸುರತ್ಕಲ್‌ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ವಿಧ್ಯುಕ್ತವಾಗಿಚಾಲನೆ ನೀಡಿ ಶುಭ ಹಾರೈಸಿದರು. ಸಮಾರಂಭದಲ್ಲಿ ಅತಿಥಿ-ಅಭ್ಯಾಗತರಾಗಿ ತುಳು ಸಂಘ ಅಹ್ಮದಾ ಬಾದ್‌ ಇದರ ಗೌರವ ಅಧ್ಯಕ್ಷ ಮೋಹನ್‌ ಸಿ.ಪೂಜಾರಿ, ತುಳುನಾಡ ಐಸಿರಿ ವಾಪಿ ಅಧ್ಯಕ್ಷ ಬಾಲ ಕೃಷ್ಣ ಶೆಟ್ಟಿ, ಕರ್ನಾಟಕ ಸಮಾಜ ಸೂರತ್‌ ಅಧ್ಯಕ್ಷದಿನೇಶ್‌ ಶೆಟ್ಟಿ, ಗೌರವಾನ್ವಿತ ಅತಿಥಿಗಳಾಗಿ ಸೂರತ್‌ನ ಉದ್ಯಮಿ, ಸಮಾಜ ಕಾರ್ಯಕರ್ತ ರಾಧಾಕೃಷ್ಣ ಶೆಟ್ಟಿ, ತುಳು ಸಂಘ ಅಂಕಲೇಶ್ವರ ಗೌರವ ಅಧ್ಯಕ್ಷ ರವಿನಾಥ್‌ ಶೆಟ್ಟಿ, ತುಳು ಸಂಘ ಅಹ್ಮದಾಬಾದ್‌ ಅಧ್ಯಕ್ಷ ಅಪ್ಪು ಎಲ್‌. ಶೆಟ್ಟಿ, ಪಟ್ಲ ಫೌಂಡೇಶನ್‌ ಗುಜರಾತ್‌ ಘಟಕದ ಅಧ್ಯಕ್ಷ ಅಜಿತ್‌ ಶೆಟ್ಟಿ, ತುಳು ಸಂಘ ಅಂಕ್ಲೇಶ್ವರ ಅಧ್ಯಕ್ಷ ಶಂಕರ್‌ ಶೆಟ್ಟಿ, ಬಂಟರ ಸಂಘ ಅಹ್ಮದಾಬಾದ್‌ ಅಧ್ಯಕ್ಷ ನಿತೇಶ್‌ ಶೆಟ್ಟಿ, ಬಿಲ್ಲವ ಸಂಘ ಗುಜರಾತ್‌ ಅಧ್ಯಕ್ಷ ಮನೋಜ್‌ ಸಿ. ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ತುಳು ಸಂಘ ಬರೋಡಾ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ. ಶೆಟ್ಟಿ, ಕೋಶಾಧಿಕಾರಿ ವಾಸು ಪೂಜಾರಿ, ಮಹಿಳಾಧ್ಯಕ್ಷೆ ಡಾ| ಶರ್ಮಿಳಾ ಎಂ. ಜೈನ್‌, ಮಹಿಳಾ ಕಾರ್ಯದರ್ಶಿ ಮಂಜುಳಾ ಬಿ. ಗೌಡ ಸೇರಿದಂತೆ ಇತರ ಪದಾಧಿಕಾರಿಗಳು, ಸದಸ್ಯರು ವೇದಿಕೆಯಲ್ಲಿದ್ದು, ಜಯರಾಮ ಶೆಟ್ಟಿ ಅವರಿಗೆ ತುಳುರತ್ನ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ತುಳು ಸಂಘದ ಸದಸ್ಯರು ಮತ್ತು ಮತ್ತು ಮಕ್ಕಳು ವೈವಿಧ್ಯಮಯ ನೃತ್ಯಾವಳಿ, ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಕಲಾವಿದರಿಂದ “ಬೇಡರ ಕಣ್ಣಪ್ಪ’ ಯಕ್ಷಗಾನ ಪ್ರದರ್ಶನಗೊಂಡಿತು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

Advertisement

ಚಿತ್ರ – ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next