ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 314 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು,2 ಮಂದಿ ಮೃತಪಟ್ಟಿದ್ದಾರೆ.
ಪತ್ತೆಯಾದ ಒಟ್ಟು ಪ್ರಕರಣದಲ್ಲಿ ಶೇ.84ರಷ್ಟು ಪ್ರಕರಣಗಳು ಬೆಂಗಳೂರು, ದ.ಕ., ಮೈಸೂರು, ಚಿಕ್ಕಮಗಳೂರು, ಕೊಡುಗು ಜಿಲ್ಲೆಯಿಂದ ದಾಖಲಾಗಿದೆ.
ಬೆಂಗಳೂರು ನಗರದಲಿ179, ದ.ಕ. 26, ಕೊಡಗು 26, ಚಿಕ್ಕಮಗಳೂರು 19, ಮೈಸೂರು ಜಿಲ್ಲೆಯಲ್ಲಿ 16 ಪ್ರಕರಣ ದಾಖಲಾಗಿದ್ದು, ಉಳಿದಂತೆ ಬಳ್ಳಾರಿ, ಬೆಳಗಾವಿ, ಬೆ.ಗ್ರಾಮಾಂತರ, ಚಾಮರಾಜ ನಗರ, ಚಿತ್ರದುರ್ಗಾ, ದಾವಣಗೆರೆ, ಧಾರವಾಡ, ಹಾಸನ, ಕಲಬುರಗಿ, ಕೋಲಾರ, ಮಂಡ್ಯ, ಶಿವಮೊಗ್ಗ, ತಮಕೂರು, ಉಡುಪಿ, ಉ.ಕ., ಜಿಲ್ಲೆಯಲ್ಲಿ ಬೆರಳೆಣಿಕೆ ಪ್ರಕರಣಗಳು ವರದಿಯಾಗಿದೆ.
ಇದನ್ನೂ ಓದಿ:ನೆರವಿಗೆ ಬಂದ ಭಾರತೀಯ ವಿಕಾಸ ಟ್ರಸ್ಟ್; ಯಕ್ಷ ಕಲಾವಿದನ ಬದುಕಲ್ಲಿ ಬೆಳಕು!
ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ರಾಮನಗರ, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಗರ 2 ಮರಣ ಪ್ರಕರಣ ದಾಖಲಾಗಿದೆ. ರಾಜ್ಯಾದ್ಯಂತ ಒಟ್ಟು 7305 ಸಕ್ರಿಯ ಪ್ರಕರಣಗಳಿವೆ. 339 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.