Advertisement

ಕೋವಿಡ್: ರಾಜ್ಯದಲ್ಲಿಂದು 4992 ಸೋಂಕಿತರು ಗುಣಮುಖ; 3104 ಹೊಸ ಪ್ರಕರಣ ಪತ್ತೆ

08:06 PM Jul 06, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿಂದು 3104 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಹಾಗೂ ಸೋಂಕಿನಿಂದ 92 ಮಂದಿ ಮೃತಪಟ್ಟಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 4992 ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಒಟ್ಟು ಸಂಖ್ಯೆ 2784030ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-5, ಬಳ್ಳಾರಿ-24, ಬೆಳಗಾವಿ-157, ಬೆಂಗಳೂರು ಗ್ರಾಮಾಂತರ-67, ಬೆಂಗಳೂರು ನಗರ-715, ಬೀದರ್-6, ಚಾಮರಾಜನಗರ-68, ಚಿಕ್ಕಬಳ್ಳಾಪುರ-29, ಚಿಕ್ಕಮಗಳೂರು-109, ಚಿತ್ರದುರ್ಗ-64, ದಕ್ಷಿಣ ಕನ್ನಡ-216, ದಾವಣಗೆರೆ-60, ಧಾರವಾಡ-29, ಗದಗ-7, ಹಾಸನ-270, ಹಾವೇರಿ-14, ಕಲಬುರಗಿ-15, ಕೊಡಗು-140,  ಕೋಲಾರ-108, ಕೊಪ್ಪಳ-15, ಮಂಡ್ಯ-113, ಮೈಸೂರು-389, ರಾಯಚೂರು-4, ರಾಮನಗರ-32, ಶಿವಮೊಗ್ಗ-119, ತುಮಕೂರು-138, ಉಡುಪಿ-114, ಉತ್ತರ ಕನ್ನಡ-72,ವಿಜಯಪುರ-2, ಯಾದಗಿರಿ-3.

Advertisement

Udayavani is now on Telegram. Click here to join our channel and stay updated with the latest news.

Next