Advertisement
ಜ. 19ರ ಅನಂತರ ನೆಗೆಟಿವ್ಈವರೆಗೆ ಜಿಲ್ಲೆಯಲ್ಲಿ ಪತ್ತೆಯಾದ ಮಂಗಗಳ ಶವಗಳ ಪೈಕಿ 59ನ್ನು ಪರೀಕ್ಷೆ ಮಾಡಲಾಗಿದ್ದು 52ರ ಫಲಿತಾಂಶ ದೊರೆತಿದೆ. 12 ಮಂಗಗಳ ಶವಗಳಲ್ಲಿ ಮಾತ್ರ ವೈರಸ್ ಪತ್ತೆಯಾಗಿದೆ. ಜ. 19ರ ಅನಂತರ ಪತ್ತೆಯಾದ ಯಾವುದೇ ಮಂಗನ ಶವದಲ್ಲಿ ಕೂಡ ಮಂಗನ ಕಾಯಿಲೆಯ ವೈರಸ್‌ಗಳು ಪತ್ತೆಯಾಗಿಲ್ಲ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಸಿದ್ಧಾಪುರದ ಹೊಸಂಗಡಿ, ಹೆಬ್ರಿಯ ಮಂಡಾಡಿಜೆಡ್ಡು, ಬೈಲೂರು, ಉಪ್ಪೂರು ಮತ್ತು ಹೆಗ್ಗುಂಜೆಯಲ್ಲಿ ತಲಾ ಒಂದೊಂದು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 5 ಮಂಗಗಳ ಶವಗಳು ಪತ್ತೆಯಾಗಿವೆ. ಬುಧವಾರ ಚಾಂತಾರು, ಹೆಗ್ಗುಂಜೆ, ಶೀರೂರು, ನಾಲ್ಕೂರು ಮೊದಲಾದೆಡೆ ಮಂಗನ ಕಾಯಿಲೆ ಜಾಗೃತಿ ವಿಶೇಷ ಗ್ರಾಮಸಭೆ ಹಾಗೂ ಇತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕೆಎಂಸಿಯಲ್ಲಿ 30 ಮಂದಿಗೆ ಚಿಕಿತ್ಸೆ
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗೆ ದಾಖಲಾಗಿರುವ ಶಿವಮೊಗ್ಗದ ಸಾಗರ ಮತ್ತು ಆಸುಪಾಸಿನ ಸುಮಾರು 188 ಮಂದಿಯ ಪೈಕಿ 71 ಮಂದಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಹಾಗೂ 124 ಮಂದಿಗೆ ಮಂಗನ ಕಾಯಿಲೆ ಇರದಿರುವ ಬಗ್ಗೆ ವೈದ್ಯಕೀಯ ವರದಿಗಳು ಬಂದಿವೆ. 30 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊನ್ನಾವರದ ರೋಗಿಯೊಬ್ಬರಲ್ಲಿ ಪೊಸಿಟಿವ್ ಕಂಡುಬಂದಿದೆ.