ಚಾಮರಾಜನಗರ: 1 ವರ್ಷದ ಎರಡು ಶಿಶುಗಳೂ ಸೇರಿದಂತೆ, ಜಿಲ್ಲೆಯಲ್ಲಿ ಇಂದು 31 ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಐದು ನೂರರ ಗಡಿ ದಾಟಿದೆ. ಇಂದಿನ ಪ್ರಕರಣಗಳಲ್ಲಿ ನಾಲ್ವರು ಮೈಸೂರು ಜಿಲ್ಲೆಯವರು.
ಇದುವರೆಗೆ ಜಿಲ್ಲೆಯಲ್ಲಿ 506 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ 288 ಮಂದಿ ಗುಣಮುಖರಾಗಿದ್ದು, 212 ಸಕ್ರಿಯ ಪ್ರಕರಣಗಳಿವೆ.
ಇಂದು ನಡೆಸಿದ 494 ಪರೀಕ್ಷಾ ಮಾದರಿಗಳಲ್ಲಿ 31 ಪ್ರಕರಣಗಳು ಪಾಸಿಟಿವ್ ಆಗಿದ್ದು, 463 ನೆಗೆಟಿವ್ ಆಗಿವೆ. ಇಂದು 17 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪ್ರಕರಣಗಳ ವಿವರ ಇಂತಿದೆ: 42 ವರ್ಷದ ಪುರುಷ ಭೀಮನಗರ ಕೊಳ್ಳೇಗಾಲ. 55 ವರ್ಷದ ಪುರುಷ ಬಳೆಪೇಟೆ ಯಳಂದೂರು. 4 ವರ್ಷದ ಮಗು, ಗೌತಮ ಬೀದಿ ಯಳಂದೂರು. 33 ವರ್ಷದ ಯುವಕ, ನ್ಯಾಯಾಲಯ ರಸ್ತೆ, ಚಾಮರಾಜನಗರ. 30 ವರ್ಷದ ಯುವತಿ, ಮೂಗೂರು, ತಿ. ನರಸೀಪುರ ತಾಲೂಕು, ಮೈಸೂರು ಜಿಲ್ಲೆ. 1 ವರ್ಷದ ಹೆಣ್ಣು ಮಗು, ಕಾಗಲವಾಡಿ, ಚಾಮರಾಜನಗರ ತಾ. 30 ವರ್ಷದ ಯುವಕ, ರೈಲ್ವೆ ಬಡಾವಣೆ ಚಾ.ನಗರ. 35 ವರ್ಷದ ಪುರುಷ 14ನೇ ವಾರ್ಡ್, ಚಾ.ನಗರ. 67 ವರ್ಷದ ವೃದ್ಧ, ಪರಮೇಶ್ವರಿ ದೇವಸ್ಥಾನ, ಕೊಳ್ಳೇಗಾಲ. 30 ವರ್ಷದ ಯುವಕ ಕುರುಬರ ಬೀದಿ, ಕೊಳ್ಳೇಗಾಲ, 32 ಷರ್ವದ ಯುವತಿ, ಬೆಂಗಳೂರು ರಸ್ತೆ, ಕೊಳ್ಳೇಗಾಲ. 18 ವರ್ಷದ ಯುವತಿ, ಕೆ.ಪಿ. ಮೊಹಲ್ಲಾ ಚಾ.ನಗರ. 1 ವರ್ಷದ ಗಂಡು ಮಗು, ಮಧುವನಹಳ್ಳಿ, ಕೊಳ್ಳೇಗಾಲ ತಾ. 51 ವರ್ಷದ ಪುರುಷ, ಧನಗೆರೆ, ಕೊಳ್ಳೇಗಾಲ ತಾ. 50 ವರ್ಷದ ಮಹಿಳೆ, 48 ವರ್ಷದ ಮಹಿಳೆ, ಮಾನಸ ಕಾಲೇಜು ರಸ್ತೆ, ಕೊಳ್ಳೇಗಾಲ. 22 ವರ್ಷದ ಯುವಕ ಮಾಂಬಳ್ಳಿ, ಯಳಂದೂರು. 48 ವರ್ಷದ ಪುರುಷ ಲಿಂಗನಪುರ ರಸ್ತೆ, ಕೊಳ್ಳೇಗಾಲ. 33 ವರ್ಷದ ಯುವಕ ಮಹದೇಶ್ವರ ಬೆಟ್ಟದ ರಸ್ತೆ, ಹನೂರು. 55 ವರ್ಷದ ಮಹಿಳೆ 9ನೇ ವಾರ್ಡ್ ಕೊಳ್ಳೇಗಾಲ. 32 ವರ್ಷದ ಯುವಕ ಜನತಾ ಕಾಲೋನಿ ಗುಂಡ್ಲುಪೇಟೆ.28 ವರ್ಷದ ಯುವತಿ, ಕೆಎಸ್‌ಎನ್ ಲೇಔಟ್, ಗುಂಡ್ಲುಪೇಟೆ. 25 ವರ್ಷದ ಯುವತಿ ಮಧುವನಹಳ್ಳಿ ಕೊಳ್ಳೇಗಾಲ. 47 ವರ್ಷದ ಪುರುಷ ಪಂಜನಹಳ್ಳಿ, ಗುಂಡ್ಲುಪೇಟೆ ತಾ. 25 ವರ್ಷದ ಯುವಕ ಸಿಂಗಾನಲ್ಲೂರು, ಕೊಳ್ಳೇಗಾಲ ತಾ. 39 ವರ್ಷದ ಪುರುಷ, ಜನತಾ ಕಾಲೋನಿ, ಗುಂಡ್ಲುಪೇಟೆ. 7 ವರ್ಷದ ಬಾಲಕಿ ಕೆಎಸ್‌ಎನ್ ಲೇಔಟ್, ಗುಂಡ್ಲುಪೇಟೆ. 42 ವರ್ಷದ ಮಹಿಳೆ ಐಬಿ ರಸ್ತೆ ಕೊಳ್ಳೇಗಾಲ, 30 ವರ್ಷದ ಮಹಿಳೆ, 10 ವರ್ಷದ ಬಾಲಕ, 4 ವರ್ಷದ ಬಾಲಕಿ ನಾಯ್ಡು ನಗರ ಮೈಸೂರು.