ಮುಂಬಯಿ: ತುಳು-ಕನ್ನಡಿಗರ ಪ್ರತಿಷ್ಠಿತ ಬಿಪಿನ್ ಫುಟ್ಬಾಲ್ ಅಕಾಡೆಮಿಯ 30 ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಫುಟ್ಬಾಲ್ ಪಂದ್ಯಾಟವು ಮೇ 13 ರಂದು ಕಾಂದಿವಲಿ ಪಶ್ಚಿಮದ ಪೊಯಾÕರ್ ಜಿಮಾVನದ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಫುಟ್ಬಾಲ್ ಪಂದ್ಯಾಟವನ್ನು ಅಂತಾರಾಷ್ಟ್ರೀಯ ಮಾಜಿ ಫುಟ್ಬಾಲ್ ಆಟಗಾರ ಹಾಗೂ ಬಿಪಿನ್ ಸಂಸ್ಥೆಯ ಮಾಜಿ ಆಟಗಾರ ಖಲೀನ್ ಸಿದ್ದಿಖೀ ಇವರು ಫುಟ್ಬಾಲ್ ಆಡುವುದರ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಪಶ್ಚಿಮ ರೈಲ್ವೇ ಮಾಜಿ ಆಟಗಾರ ಮೋನಪ್ಪ ಮೂಲ್ಯ, ಮಾಜಿ ಮಾಫತ್‌ಲಾಲ್ ಆಟಗಾರ ಸುರೇಶ್ ರಾವುಲ್, ಮಾಜಿ ಜೆಕೆಡಬ್ಲ್ಯು ಪ್ರಕಾಶ್ ಕೋಯೆx ಮೊದಲಾದವರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಆ್ಯತ್ಲೆಟಿಕ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಿಪಿನ್ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಸತೀಶ್ ಉಚ್ಚಿಲ್ ಅವರನ್ನು ಸಂಸದ ಗೋಪಾಲ್ ಶೆಟ್ಟಿ ಇವರು ಸಮ್ಮಾನಿಸಿದರು. ಅಲ್ಲದೆ ಇತ್ತೀಚೆಗೆ ಮಹಾರಾಷ್ಟÅ ರಾಜ್ಯ ಫುಟ್ಬಾಲ್ ತಂಡದ ಮ್ಯಾನೇಜರ್ ಆಗಿ ಆಯ್ಕೆಯಾದ ಬಿಪಿನ್ ಫುಟ್ಬಾಲ್ ಕೊಲಬಾ ಶಿಬಿರದ ನಿರ್ದೇಶಕ ಹಾಗೂ ಮುಂಬಯಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ಸುಧಾಕರ್ ರಾಣೆ, ಜೆಮ್‌ಶೆಡು³ರ ಎಫ್‌ಸಿಐಎಸ್‌ಎಲ್ ತಂಡಕ್ಕೆ ಆಯ್ಕೆಯಾದ ಮಾಜಿ ಬಿಪಿನ್ ಆಟಗಾರ ಕರಣ್ ಅಮೀನ್ ಅವರ ಸಮ್ಮಾನವನ್ನು ಅವರ ಸಹೋದರ ಕುನಾಲ್ ಮತ್ತು ಗೋಪಾಲ್ ಶೆಟ್ಟಿ ಅವರು ನೆರವೇರಿಸಿದರು.
ಕಾಂದಿವಲಿ ನಗರ ಸೇವಕಿ ಪ್ರಿಯಾಂಕಾ ಮೋರೆ, ಬಿಪಿನ್ ಸಂಸ್ಥೆಯ ಟ್ರಸ್ಟಿ ನ್ಯಾಯವಾದಿ ಮಂಜುಳಾ ರಾವ್ ಅವರು ಉಪಸ್ಥಿತರಿದ್ದರು. ಸಂಸ್ಥೆಯ ವತಿಯಿಂದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಂಸದ ಗೋಪಾಲ್ ಶೆಟ್ಟಿ ಅವರನ್ನು ಬಿಪಿನ್ ಅಕಾಡೆಮಿಯ ತರಬೇತುದಾರ ಹರೀಶ್ ರಾವ್ ಅವರು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಪಂದ್ಯಾಟದಲ್ಲಿ ಬಿಪಿನ್ ಶಿಬಿರದ ತಂಡಗಳಾದ ಬಿಎಂಸಿ, ಕಾಂದಿವಲಿ, ಅಂಧೇರಿ, ಕೊಲಬಾ, ಚರ್ಚ್ ಗೇಟ್, ಕಲ್ಯಾಣ್, ವಿರಾರ್, ಉಲ್ಲಾಸ್‌ನಗರ ತಂಡಗಳು ಉತ್ಸಾಹದಿಂದ ಪಾಲ್ಗೊಂಡಿದ್ದವು. ಬೆಳಗ್ಗೆ 8 ರಿಂದ ಪ್ರಾರಂಭಗೊಂಡ ಪಂದ್ಯಾವಳಿಯು ಸಂಜೆ ಸಮಾರೋಪ ಕಂಡಿತು. ವಿಜೇತ ತಂಡಗಳಿಗೆ ಗಣ್ಯರು ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿ ಗೌರವಿಸಿದರು.