Advertisement
ಶನಿವಾರ ಪೇಜಾವರ ಮಠದ ಸಭಾಭವನದಲ್ಲಿ ನಡೆದ ಸ್ವಾಗತ ಸಮಿತಿ ಸಭೆಯಲ್ಲಿ ಮಾತನಾಡಿದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು, ವಿಶ್ವ ಹಿಂದೂ ಪರಿಷತ್ತಿನಿಂದಾಗಿ ಜಾತಿ ಮತ ಮೀರಿ ನಾವೆಲ್ಲ ಹಿಂದೂಗಳು ಎಂಬ ಭಾವನೆ ವ್ಯಕ್ತವಾಗಿದೆ. ಆದರೆ ಈಗ ಸಣ್ಣಪುಟ್ಟ ಉತ್ತಮ ಅಥವಾ ಕೆಟ್ಟ ಘಟನೆಗಳು ನಡೆದರೂ ಅದನ್ನು ಜಾತಿ ಆಧಾರದಲ್ಲಿ ನೋಡುವ ಜಾತೀವಾದ ದೃಷ್ಟಿಕೋನ ಬೆಳೆದಿದೆ. ಇದರ ಬದಲು ಇದು ಸಮಗ್ರ ಸಮಾಜದ ಒಂದು ಭಾಗವಾಗಿ ಕಾಣುವಂತಾಗಬೇಕು. ಸಣ್ಣಪುಟ್ಟ ಸಂಗತಿ ಗಳನ್ನು ದೂರವಿಟ್ಟು ಏಕತೆ, ಸಂಘಟನೆಗೆ ಒತ್ತು ನೀಡಬೇಕಾ ಗಿದೆ ಎಂದರು.
ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗವತ್ ಮೊದಲ ದಿನ ಪಾಲ್ಗೊಳ್ಳುವರು. ಕೊನೆಯ ದಿನ ಸಂಜೆ ಆಕರ್ಷಕ ಶೋಭಾಯಾತ್ರೆ, ಬಳಿಕ ಒಂದು ಲಕ್ಷ ಜನರು ಸೇರುವ ಸಾರ್ವಜನಿಕ ಸಭೆ ನಡೆಯಲಿದೆ ಎಂದು ವಿಹಿಂಪ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಚಂಪತ್‌ರಾಯ್, ಮಂಗಳೂರು ವಿಭಾಗಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ತಿಳಿಸಿ ಪದಾಧಿಕಾರಿಗಳ ಪಟ್ಟಿ ವಾಚಿಸಿದರು. ವಿಹಿಂಪ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಗೋಪಾಲ್ ಪ್ರಸ್ತಾವನೆ ಗೈದರು. ಪ್ರಾಂತ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಕಾರ್ಯಕ್ರಮ ನಿರ್ವಹಿಸಿ ಟಿ.ಎ.ಪಿ. ಶೆಣೈ ವಂದಿಸಿದರು.
Related Articles
Advertisement
ಸ್ವಾಗತ ಸಮಿತಿ ಕೋಶಾಧ್ಯಕ್ಷ ಪಿ. ವಿಲಾಸ ನಾಯಕ್ ಅಡುಗೆ, ಸಂತರ ಪ್ರಯಾಣ, ಪೆಂಡಾಲು, ವಸತಿ, ಮುದ್ರಣ, ಸ್ಮರಣ ಸಂಚಿಕೆ, ವಿದ್ಯುತ್, ಧ್ವನಿವರ್ಧಕ ಇತ್ಯಾದಿಗಳ ಅಂದಾಜು ಖರ್ಚು ಮಂಡಿಸಿ ಸುಮಾರು 5 ಕೋ.ರೂ. ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದರು. ಸ್ಮರಣ ಸಂಚಿಕೆ ಪ್ರಧಾನ ಸಂಪಾ ದಕಿ ಡಾ| ಸಂಧ್ಯಾ ಎಸ್. ಪೈ, ವಿವಿಧ ಪದಾಧಿಕಾರಿಗಳಾದ ಮೂಡಬಿದಿರೆಯ ಡಾ| ಮೋಹನ ಆಳ್ವ, ಗೋಪಾಲ್ ಹೊಸೂರು, ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪತ್ರಿಕೋದ್ಯಮಿ ವಿಜಯ ಸಂಕೇಶ್ವರ, ಡಾ| ರಾಮನ ಗೌಡರ್, ಮನೋಹರ ಶೆಟ್ಟಿ, ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷೆ ಡಾ| ವಿಜಯಲಕ್ಷ್ಮೀ ದೇಶಮಾನೆ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕದ ಎಲ್ಲ ಜಿಲ್ಲೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಚುನಾವಣೆ ಬರುತ್ತಿದೆ-ಅಪಾಯವೂ ಇದೆಮುಂದಿನ ದಿನಗಳಲ್ಲಿ ಚುನಾವಣೆ ಬರುತ್ತಿದೆ. ಧರ್ಮ ಸಂಸತ್ ಚಟುವಟಿಕೆಗಳಿಗೆ ರಾಜಕೀಯ ಬಣ್ಣ ಬರುವ ಅಪಾಯವಿದೆ. ಆದ್ದರಿಂದ ರಾಜಕೀಯಾತೀತವಾಗಿ ಅಧಿವೇಶನ ನಡೆಯುವಂತೆ, ಹಿಂದೂ ಸಮಾಜದ ಏಕತೆಗಾಗಿ ದುಡಿಯುವಂತೆ ನೋಡಿಕೊಳ್ಳಬೇಕಾಗಿದೆ.
ಡಾ| ಹೆಗ್ಗಡೆ