Advertisement

3,000 ಕೆಜಿ ಡ್ರಗ್ಸ್‌ ಹಿಂದೆ ಉಗ್ರರ ಕೈವಾಡ?

11:38 PM Sep 21, 2021 | Team Udayavani |

ಅಹ್ಮದಾಬಾದ್‌: ಇತ್ತೀಚೆಗಷ್ಟೇ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 3,000 ಕೆಜಿ ಹೆರಾಯಿನ್‌ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇದರ ಹಿಂದೆ ಪಾಕ್‌ ಐಎಸ್‌ಐ ಕೈವಾಡವಿರುವ ಶಂಕೆ ಇದೆ.

Advertisement

ಇರಾನ್‌ನ ಅಬ್ಟಾಸ್‌ ಬಂದರಿನಿಂದ ಮುಂದ್ರಾ ಬಂದರಿಗೆ ಎರಡು ದೊಡ್ಡ ಕಂಟೇನರ್‌ಗಳಲ್ಲಿ ಡ್ರಗ್ಸ್‌ ಸಾಗಾಟ ಮಾಡಲಾಗುತ್ತಿತ್ತು. ಅಫ್ಘಾನ್‌ನಿಂದ ಆಂಧ್ರದ ವಿಜಯವಾಡದ ಆಶಿ ಟ್ರೇಡಿಂಗ್‌ ಕಂಪೆ ನಿಗೆ ಅದನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಅದರ ಬೆಲೆ ಬರೋಬ್ಬರಿ 21,000 ಕೋಟಿ ರೂ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಭಾರತದಲ್ಲಿರುವ ಕೆಲವು ಅಫ್ಘಾನ್‌ ಪ್ರಜೆಗಳನ್ನೂ ಬಂಧಿಸಲಾಗಿದೆ. ಅವರು ಐಎಸ್‌ಐ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಇದು ಭಾರತದಲ್ಲಿ ಉಗ್ರರಿಗೆ ನೆರವಾಗಲು ಪಾಕ್‌ ಐಎಸ್‌ಐ  ಮಾಡಿರುವ ತಂತ್ರ ಎಂದು ಅನುಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next