Advertisement

ಏರಿಂಡಿಯಾಕ್ಕೆ 3 ಸಾವಿರ ಕೋಟಿ ತುರ್ತು ಸಾಲ!

08:25 AM Sep 14, 2017 | Team Udayavani |

ನವದೆಹಲಿ: ಈಗಾಗಲೇ 50 ಸಾವಿರ ಕೋಟಿ ರೂ.ಸಾಲದ ಸುಳಿಯಲ್ಲಿ ಸಿಕ್ಕಿದೆ ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ. ಇದೀಗ ತುರ್ತು ಅಗತ್ಯಗಳಿಗಾಗಿ 3,250 ಕೋಟಿ ರೂ.ಸಾಲ ಪಡೆಯಲು ಮುಂದಾಗಿದೆ. ಈ ಬಗ್ಗೆ ಟೆಂಡರ್‌ ದಾಖಲೆಯೊಂದರಿಂದ ಬಹಿರಂಗವಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅದನ್ನು ವಿಭಾಗಗಳನ್ನಾಗಿ ಮಾಡಿ ಖಾಸಗಿಯವರಿಗೆ ಮಾರುವ ಪ್ರಸ್ತಾಪದ ಬಗ್ಗೆ ಚಿಂತನೆ ನಡೆಸುತ್ತಿದೆ. ಜತೆಗೆ ಅದರಿಂದ ಬಂಡವಾಳ ಹಿಂದಕ್ಕೆ ಪಡೆದುಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ. ಗಮನಾರ್ಹ ಅಂಶವೆಂದರೆ ಈ ಸಾಲ ಪಡೆಯುವ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರದಿಂದ ಖಾತರಿಯೂ ಸಿಗಲಿದೆ ಎಂದು ಹೇಳಲಾಗಿದೆ.

Advertisement

ಈ ತಿಂಗಳ 25ರ ಒಳಗಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ 3,250 ಕೋಟಿ ರೂ. ಬೇಕಾಗಿದೆ ಎಂದು ಆ ಟೆಂಡರ್‌ ದಾಖಲೆಯಲ್ಲಿ ಹೇಳಲಾಗಿದೆ. ಇದೊಂದು ಒಂದು ವರ್ಷ ಅವಧಿಯ ಸಾಲವಾಗಿದೆ. ಈ ಹಿಂದಿನ ಯುಪಿಎ ಸರ್ಕಾರ ಮಂಜೂರು ಮಾಡಿದ್ದ 30,231 ಕೋಟಿ ರೂ.ಸಾಲವನ್ನು ಶೀಘ್ರವೇ ಪಡೆದುಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ನವದೆಹಲಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next