Advertisement

30 ವರ್ಷ 100 ಸಿನಿಮಾ, ಮಾಸದ ಮುಗುಳ್ನಗು

05:55 PM Oct 19, 2017 | |

ಅದೇ ಮನೆ, ಅದೇ ಸೋಫಾ …
ಅಲ್ಲೇ ಕೂತು ರಮೇಶ್‌, “ರೂಪತಾರಾ’ದೊಂದಿಗೆ ಸಾಕಷ್ಟು ಮಾತಾಡಿದ್ದಾರೆ. ಎರಡು ವರ್ಷಗಳ ಕಾಲ ತಮ್ಮ ಅಂಕಣದ ಮೂಲಕ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಈಗಿನ ಸಂದರ್ಭವೇ ಬೇರೆ. ರಮೇಶ್‌ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ಅಭಿನಯಿಸಿದ ಚಿತ್ರಗಳ ಸಂಖ್ಯೆ ನೂರು ದಾಟಿದೆ. ಆದರೆ, ಕನ್ನಡದ್ದೇ ಲೆಕ್ಕ ತೆಗೆದುಕೊಂಡರೆ, ಅವರ ಹೊಸ ಚಿತ್ರ “ಪುಷ್ಪಕ ವಿಮಾನ’, ನೂರನೆಯ ಚಿತ್ರವಾಗಿದೆ. 30 ವರ್ಷ, 100 ಚಿತ್ರಗಳು, ಸಾವಿರ ಅನುಭವಗಳು … ಇವನ್ನೆಲ್ಲಾ  ರಮೇಶ್‌ ಹೇಗೆ ನೋಡುತ್ತಾರೆ ಎಂಬ ಕುತೂಹಲ ಸಹಜ. ಅದೇ ಪ್ರಶ್ನೆಯೊಂದಿಗೆ ಈ ಬಾರಿ ಅವರೆದುರು ಕುಳಿತಿದ್ದಾಯಿತು. ಅದೇ ಮನೆ, ಅದೇ ಸೋಫಾ, ಅವರದೇ ಮಾತುಗಳು .

Advertisement

ಒಂದನ್ನು ನೋಡಿ ಇನ್ನೊಂದು
ನನಗೆ ಸಿನಿಮಾ ಹುಚ್ಚೇನಲ್ಲ. ಸಿನಿಮಾ ಖುಷಿ ಕೊಡೋದು. ನಾವು ಚಿಕ್ಕವರಿದ್ದಾಗ, ಅಪ್ಪ-ಅಮ್ಮ ಪ್ರತಿ ಸಂಡೆ ಒಂದು ಪಿಕ್ಚರ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಮೊದಲ ಚಿತ್ರ ಬಹುಶಃ “ಭೂತಯ್ಯನ ಮಗ ಅಯ್ಯು’. ಆಮೇಲೆ ಅದೆಷ್ಟೋ ಸಿನಿಮಾಗಳನ್ನು ನೋಡಿದ್ದೀನಿ. ಇನ್ನೊಂದು ಕಡೆ ಆಗೆಲ್ಲಾ ತಮಿಳು ಡ್ರಾಮಾಗಳ ಪ್ರದರ್ಶನವಾಗ್ತಿತ್ತು. ಸಖತ್‌ ಕಾಮಿಡಿ ನಾಟಕಗಳು ಅವು. ಇವೆಲ್ಲಾ ಬೇಸಿಕ್‌ ಮೆಟ್ಟಿಲುಗಳು. ನಂತರ ನಾವೇ ಒಂದು ಟ್ರೂಪ್‌ ಕಟ್ಟಿಕೊಂಡು ಪ್ರಯೋಗ ಮಾಡುವುದಕ್ಕೆ ಹೊರಟೆವು. ರೇಡಿಯೋ ಕಾರ್ಯಕ್ರಮ ಆಯ್ತು. ಡಿಡಿಯಲ್ಲಿ “ಪರಿಚಯ’ ಎಂಬ ಕಾರ್ಯಕ್ರಮ ಮಾಡಿದ್ದಾಯ್ತು. ಹೀಗೆ ಸ್ಟೆಪ್‌ ಬೈ ಸ್ಟೆಪ್‌ ಏರುತ್ತಾ ಹೋದೆ. ಇವತ್ತೂ ನಿಜಕ್ಕೂ ಆಶ್ಚರ್ಯ ಆಗತ್ತೆ. ನಾನು ಇದುವರೆಗೂ ಒಂದು ದಿನಾನೂ ಯಾರಲ್ಲೂ ಅವಕಾಶ ಕೇಳಿಲ್ಲ. ಫೋಟೋಗಳನ್ನು ಕೊಟ್ಟಿಲ್ಲ. ನನ್ನ ಒಂದು ಕೆಲಸ ನೋಡಿ ಇನ್ನೊಂದು ಕೆಲಸ ಸಿಕ್ಕಿದೆ. ಕನ್ನಡ ಸಿನಿಮಾಗಳಲ್ಲಿ ನನ್ನ ನೋಡಿ ತಮಿಳಿಗೆ ಕರೊಕೋಂಡು ಹೋದರು. ಅಲ್ಲಿಂದ ತೆಲುಗು. ಹೀಗೆ ಒಂದನ್ನು ನೋಡಿ ಇನ್ನೊಂದು. ಇನ್ನೊಂದನ್ನು ನೋಡಿ ಮತ್ತೂಂದು … ಕೆಲಸ ಸಿಗ್ತಾನೇ ಹೋಯ್ತು.

ತೊಂದರೆ ಕೊಡೋ ಜಾಯಮಾನವೇ ಅಲ್ಲ
ನಾನು ಹೀಗೆ 30 ವರ್ಷ ಇರೋಕೆ ಹೇಗೆ ಸಾಧ್ಯ ಅಂತ ಆಶ್ಚರ್ಯ ಆಗತ್ತೆ. ಬಹುಶಃ ನನ್ನ ಗುಣ ಇರಬೇಕು. ಅದೇ ಕಾರಣಕ್ಕೆ ಕೆಲವು ನಿರ್ದೇಶಕರ ಜೊತೆಗೆ ಐದಾರು ಸಿನಿಮಾ ಮಾಡಿದ್ದೂ ಇದೆ. ನಾನು ಯಾರಿಗೂ ತೊಂದರೆ ಕೊಡ್ತಿರಲಿಲ್ಲ. ಯಾವತ್ತೂ ಯಾವ ವಿಷಯದ ಬಗ್ಗೆಯೂ ಕಿರಿಕ್‌ ಮಾಡಿಲ್ಲ. ಯಾವ ಕಾಸ್ಟೂéಮ್‌ ಕೊಟ್ಟರೂ ತಲೆ ಕೆಡಿಸಿಕೊಂಡಿಲ್ಲ. ಸಿನಿಮಾದ ಹೀರೋಯಿನ್‌ ಯಾರು ಅಂತ ಸೆಟ್‌ಗೆ ಹೋಗೋವರೆಗೂ ಗೊತ್ತಾಗ್ತಾ ಇರಲಿಲ್ಲ. ನಾನು ಯೋಚಿಸಿದ್ದು ಎರಡೇ ವಿಷಯ. ನನ್ನ ಪಾತ್ರ ಮತ್ತು ಅದನ್ನ ಹೇಗೆ ನಿಭಾಯಿಸೋದು ಅಂತ. ನನ್ನ ಸ್ಥಾನದಲ್ಲಿ ಯಾರೇ ಇದ್ರೂ, ಸುಲಭವಾಗಿ ತೊಂದರೆ ಕೊಡಬಹುದು. ಬಟ್‌ ಅನಾವಶ್ಯಕವಾಗಿ ಸಮಸ್ಯೆ ಮಾಡೋದು, ಒತ್ತಡ ಹಾಕೋಡು ನನ್ನ ಜಾಯಮಾನ ಅಲ್ಲ. ಎಲ್ಲರಿಗೂ ಸಾವಿರ ಗೋಳು ಇರುತ್ತೆ. ಅದರ ಮೇಲೆ ನಾನೂ ಟೆನ್ಶನ್‌ ಕೊಟ್ಟರೆ, ನನ್ನ ನೆಮ್ಮದೀನೂ ಹಾಳು, ಬೇರೆಯವರ ನೆಮ್ಮದೀನೂ ಹಾಳು. ಹಾಗಾಗಿ ಟೆನ್ಶನ್‌ ಕಡಿಮೆ ಮಾಡ್ತಿದ್ದೆ. ಅದು ನನ್ನ ನೇಚರ್‌. ನಮ್ಮಮ್ಮನೂ ಅದೇ ತರಹ ಇದ್ರು. ನಾನೂ ಹಾಗೇ. ಯಾವುದೋ ಒಂದು ಸಂದರ್ಶನದಲ್ಲಿ ರವಿಚಂದ್ರನ್‌ ಅವರಿಗೆ ನನ್ನ ಬಗ್ಗೆ ಅಭಿಪ್ರಾಯ ಕೇಳಿದಾಗ, harmless ಅಂತ ಹೇಳಿದ್ದರು. ಅದು ನನ್ನ ಗುಣ. ಸಣ್ಣಸಣ್ಣ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಹೋದರೆ, ಅರ್ಧ ಕೆಲಸ ಸ್ಮೂಥ್‌ ಆಗಿರುತ್ತೆ.

Advertisement

ಬಹುಶಃ ಈ ಗುಣ ನನಗೆ ತುಂಬಾ ಹೆಲ್ಪ್ ಆಯ್ತು ಅಂದರೆ ತಪ್ಪಿಲ್ಲ. ಇನ್ನು ನಾನು ಸಂಭಾಷಣೆ ಮರೆಯೋದು ಎಲ್ಲಾ ಆಗಲೇ ಇಲ್ಲ. ಅದಕ್ಕೆ ಮುಖ್ಯವಾಗಿ ಗ್ರಹಿಕೆ ಬೇಕು. ಏನು ಹೇಳ್ತಾರೆ ಅಂತ ಗ್ರಹಿಕೆ ಇದ್ದರೆ ಆಗ ಕೆಲಸ ಸುಲಭ. ನಾನು ಮಾತಾಡ್ತಾ ಇರಿ¤àನಿ. ಕೇಳ್ಳೋರು ಇನ್ನೇನೋ ಯೋಚನೆ ಮಾಡ್ತಾ ಇದ್ದರೆ, ಆಗ ಸಮಸ್ಯೆ ಸಹಜ. ಸರಿಯಾಗಿ ಫೋಕಸ್‌ ಮಾಡಿದ್ರೆ, ಮೂರು ದಿನಗಳಲ್ಲಿ ಮಾಡಸೋ ಕೆಲಸಾನಾ ಒಂದೇ ದಿನದಲ್ಲಿ ಮಾಡಬಹುದು. ಇವತ್ತು ಸಂಜೆ ಶೂಟಿಂಗ್‌ ಇದೆ ಅಂತ ಬೆಳಿಗ್ಗೇನೇ ಯೋಚನೆ ಮಾಡ್ತಾ ಇದ್ದರೆ, ಸಂಜೆ ಕೆಲಸವೂ ಹಾಳು, ಆಗ ಮಾಡುತ್ತಿರುವ ಕೆಲಸವೂ ಹಾಳು. ಈ ಕ್ರಿಕೆಟ್‌ನಲ್ಲಿ ಯಾರು ಎಷ್ಟೇ ಹೇಳಿಕೊಟ್ಟರೂ, ಸ್ಪಾಂಟೇನಿಟಿ ಬಹಳ ಮುಖ್ಯ. ಆ ಕ್ಷಣ ಬಹಳ ಮುಖ್ಯ. ನಾವು ಮುಂಚೆಯೇ ಎಲ್ಲಾ ತಯಾರಿ ಮಾಡಿಕೊಂಡಿದ್ದರೆ, ಯಾವಯದೇ ಕೆಲಸ ಇದ್ದರೂ ಸುಲಭವಾಗಿ ಮಾಡಬಹುದು. ಜೊತೆಗೆ ಕೂಲ್‌ ಆಗಿದ್ದರಂತೂ ಕೆಲಸ ಬಹಳ ಸುಲಭ ಆಗುತ್ತೆ. ನಿನ್ನೆ ಬೆಳಿಗ್ಗೆಯಿಂದ ಸಂಜೆಯವರೆಗೂ “ವೀಕೆಂಡ್‌ ವಿಥ್‌ ರಮೇಶ್‌’ ಇತ್ತು. ಸಾಯಂಕಾಲ “ಗಂಡು ಎಂದರೆ ಗಂಡು’ ಚಿತ್ರದ ನಿರ್ದೇಶನ. ಅವೆರಡನ್ನೂ ಮುಗಿಸಿ ರಾತ್ರಿ ಮನೆಗೆ ಬರುವಾಗ ಫ್ರೆಶ್‌ ಆಗಿಯೇ ಬಂದೆ. ಇದೆಲ್ಲಾ ಸಾಧ್ಯ ಆಗೋದು ಆ ಕ್ಷಣವನ್ನು ಬದುಕಿದಾಗ ಮಾತ್ರ.

ಅವತ್ತು ಹೇಳಿದ್ದೆ ಅನ್ಸುತ್ತೆ. ಅವಕಾಶದ ಮೌಲ್ಯ ನನಗೆ ಈಗ ಗೊತ್ತಾಗ್ತಿದೆ. ಒಂದು ಅವಕಾಶಕ್ಕೆ ಜನ ಕಾಯುತ್ತಾ ಇರ್ತಾರೆ. “ಉತ್ತಮ ವಿಲನ್‌’ ಮಾಡುವಾಗ ಚೆನ್ನೈಗೆ ಹೋಗಬೇಕಿತ್ತು. ಏರ್‌ಪೋರ್ಟ್‌ನಲ್ಲಿ ಕೂತಿದ್ದೆ. ಆಗ ಒಬ್ಬ ಮಹಿಳೆ ಬಂದರು. can i talk to you ಅಂತ ಮಾತಿಗೆ ಕುಳಿತರು. ಅವರಿಗೆ ನಾನ್ಯಾರು ಅಂತ ಗೊತ್ತಿಲ್ಲ. ಸುಮ್ಮನೆ ಮಾತಾಡ್ತಾ, ನಿಮ್ಮ ಆಸೆ ಏನು ಅಂತ ಕೇಳಿದೆ. ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲಿ ಒಮ್ಮೆ ನನ್ನ ಹೆಸರು ಬರಬೇಕು ಅಂತ ಆಕೆ ಹೇಳಿದ್ದು ಕೇಳಿ ಆಶ್ಚರ್ಯ ಆಯ್ತು. “ಬರೀ ನನಗೊಬ್ಬಳಿಗೆ ಅಲ್ಲ, ಈ ಏರ್‌ಪೋರ್ಟ್‌ನಲ್ಲಿರುವ 90 ಪರ್ಸೆಂಟ್‌ ಜನಕ್ಕೆ ಟೈಟಲ್‌ ಕಾರ್ಡ್‌ನಲ್ಲಿ ತಮ್ಮ ಹೆಸರು ಬರಬೇಕು ಅಂತಾಸೆ. ಆ ಹೆಸರು ಬರೋಕೆ ಎಷ್ಟೆಲ್ಲಾ ಕಷ್ಟಪಡ್ತಾರೆ. ಅಂಥದ್ದರಲ್ಲಿ 30 ವರ್ಷದಿಂದ ನನಗೆ ಅವಕಾಶ ಸಿಕ್ಕಿದೆ. ಎಂಥಾ ಸಂತೋಷದ ವಿಷಯ ಅಲ್ವಾ? ಆ ಕ್ಷಣಕ್ಕೆ ಎಷ್ಟು ಖುಷಿಯಾಯ್ತು ಅಂದರೆ, ಮನಸ್ಸಲ್ಲೇ ಇಡೀ ಜಗತ್ತಿಗೆ ನಮಸ್ಕಾರ ಮಾಡಿಬಿಟ್ಟೆ. ಎಷ್ಟು ಜನ ನನ್ನ ಸ್ಥಾನದಲ್ಲಿ ಇರಬೇಕು ಅಂತ ಆಸೆಪಡ್ತಾರೆ. ನಾನು ಇನ್ನಾರಧ್ದೋ ಟಟsಜಿಠಿಜಿಟnನಲ್ಲಿ ಇರಬೇಕು ಅಂತ ಆಸೆಪಡ್ತೀನಿ. ಎಂತಹ ದುರಂತ ಅಲ್ವಾ ಇದು? ಅವತ್ತಿಂದ ನನ್ನ ಮನಸ್ಸಿನಲ್ಲೇ ಅದೆಷ್ಟು ಬಾರಿ ಥ್ಯಾಂಕ್ಸ್‌ ಹೇಳಿದ್ದೀನೋ, ಅದೆಷ್ಟು ಬಾರಿ ನಾನು ಋಣಿ ಅಂದುಕೊಂಡಿದ್ದೀನೋ ಗೊತ್ತಿಲ್ಲ.

ಮುಖ್ಯವಾಗಿ ನಾನು ಇಷ್ಟು ವರ್ಷ ಕಲಿತಿದ್ದೇನೆಂದರೆ ನಮ್ಮ body and soulನ ಚೆನ್ನಾಗಿ ಇಟ್ಟುಕೊಳ್ಳಬೇಕು ಅಂತ. ನಮ್ಮ ಬೆಳವಣಿಗೆಗೆ ಇದು ಬಹಳ ಮುಖ್ಯ. ನಾವು ಸಾಧ್ಯವಾದಷ್ಟೂ ಕ್ಲೀನ್‌ ಆಗಿರಬೇಕು. ನೂರಾರು ಕನಸುಗಳನ್ನು ಇಟುಕೊಂಡು, ನಮಗೆ ಲಕ್ವ ಹೊಡೆದರೆ ಏನಾಗತ್ತೆ ಹೇಳಿ? ನಮ್ಮ ಕನಸುಗಳೆಲ್ಲಾ ಚೂರೂcರು ಆಗುತ್ತೆ. ಹಾಗಾಗಿ ನಮ್ಮ ದೇಹ ಮತ್ತು ಮನಸ್ಸನ್ನ ಶುಚಿಯಾಗಿಟ್ಟುಕೊಕಳ್ಳಬೇಕು. ನಮಗೆ ಬೇಡದೇ ಇರೋದನ್ನ ಸುಮ್ಮನೆ ತಲೆಗೆ ಹಚ್ಚಿಕೊಳ್ಳಬಾರ್ಧು. ಅವರೇನು ಮಾಡ್ತಿದ್ದಾರೆ, ಇವರೇನು ಮಾಡ್ತಿದ್ದಾರೆ ಅಂತ ಯೋಚಿಸಿದ್ದೇ  ಇಲ್ಲ. ಕೆಲಸ ಬಿಟ್ಟು ಬೇರೆ ವಿಷತಯಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದೇ ಇಲ್ಲ. ಸಿನಿಮಾ ಗೆದ್ದರೂ, ಸೋತರೂ ಒಂದೇ ತರಹ ಇರೋಕೆ ಪ್ರಯತ್ನ ಮಾಡಿದ್ದೀನಿ. ಒಂದು ಸಿನಿಮಾ ಸೋತರೆ, i dont mind. ಏಕೆಂದರೆ, ನಾನು ನನ್ನ ಕೆಲಸ ಮಾಡಿರಿ¤àನಿ. ಅದಲ್ಲದೆ ಒಂದು ಸಿನಿಮಾ ಸೋಲೋಕೆ ಹಲವು ಕಾರಣ ಇರತ್ತೆ. ಹಾಗಾಗಿ ಅಂತಹ ವಿಷಯಗಳನ್ನ ತೀರಾ ಹಚ್ಚಿಕೊಳ್ಳೋದಿಲ್ಲ. ವೇದಾಂತ ಅಥವಾ ಫಿಲಾಸಿಫಿಕಲ್‌ ಅಂತ ಹೇಳ್ತಾ ಇಲ್ಲ. ನಿನ್ನ ಕೆಲಸಾನ ನೀನು ಮಾಡು ಅಂತ ಕೃಷ್ಣ ಹೇಳಿದ್ದು ಸಿರಯಾದ ಮಾತು. ಸಂತೋಷವಾಗಿರಬೇಕು ಅಂದ್ರೆ, ಆ ಮಾತು ಬಹಳ ಮುಖ್ಯ.

ಕಲಾವಿದರಿಗೆ ಇನ್ಶೂರೆನ್ಸ್‌ ಎಂದರೆ ಅವರ ಕೆಲಸ. ಒಂದೇ ಮಂತ್ರ ಎಂದರೆ, ಇವತ್ತಿನ ಕೆಲಸ ಚೆನ್ನಾಗಿ ಮಾಡಿದ್ರೆ, ನಾಳೆ ಸೂಪರ್‌ ಆಗಿರುತ್ತೆ. ನಮಗೆ ಲೈಫ್ ಇನ್ಶೂರೆನ್ಸ್‌ ಎಂದರೆ ನಮ್ಮ ಕೆಲಸ. ನನಗೆ ಗೊತ್ತಿರುವಂತೆ ನಾನು ಯಾವತ್ತೂ ಕೆಲಸಕ್ಕೆ ತಡವಾಗಿ ಹೋಗಿಲ್ಲ ಅಥವಾ ಆಡಿದ ಮಾತು ಮುರಿದಿಲ್ಲ. ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ತಮಿಳಿನ “ಜಂಟಲ್‌ಮಾÂನ್‌’ ಚಿತ್ರದಲ್ಲಿ ವಿನೀತ್‌ ಮಾಡಿದ ಪಾತ್ರವನ್ನ ನಾನು ಮಾಡಬೇಕಿತ್ತು. ಆದರೆ, ಬೇರೆಯವರಿಗೆ ಡೇಟ್ಸ್‌ ಕೊಟ್ಟಿದ್ದೆ. ಮಾತು ಮುರಿಯೋಕೆ ನನಗೆ ಇಷ್ಟ ಇರಲಿಲ್ಲ. ಹಾಗಾಗಿ “ಜಂಟಲ್‌ವುನ್ಯಾನ್‌’ ಬಿಟ್ಟುಬಿಟ್ಟೆ. ಇದರಿಂದ ನನಗೆ ಬೇಸರ ಇಲ್ಲ. ಇದೆಲ್ಲಾ ಓಲ್ಡ್‌ ಸ್ಕೂಲ್‌ ಐಡಿಯಾ ಅನಿಸಬಹುದು. ಆದರೂ ಅದು ಸರಿ. ನಾವು ನಮ್ಮ reliability ಗೆ ಬ್ರಾಂಡ್‌ ಆಗಬೇಕು. ಇನ್ನು ನಾನು ದುಡ್ಡಿಗೆ ಯಾವತ್ತೂ ತಲೆ ಕೆಡಿಸಿಕೊಳ್ಳಲಿಲ್ಲ. ಹಾಗಂತ ದುಡ್ಡು ಮುಖ್ಯ ಅಂತಲ್ಲ. ದುಡ್ಡು ಮಾಡಬೇಕು. ಆದರೆ, ನ್ಯಾಯವಾಗಿ ಎಂದು ನಂಬಿದವನು ನಾನು. ದುಡ್ಡಿಗಿಂಥ ಹೆಚ್ಚಾಗಿ ಸಂಬಂಧ ಮತ್ತು ಗುಡ್‌ವಿಲ್‌ ಚೆನ್ನಾಗಿತ್ತು. ಹಾಗಾಗಿಯೇ ಇಷ್ಟು ದಿನ ನಾನು ಚಿತ್ರರಂಗದಲ್ಲಿ ಉಳಿದಿರಬಹುದು. ಕೆಲವೊಮ್ಮೆ ನಮ್ಮ ಮುಗ್ಧತೆ ಮತ್ತು ದಡ್ಡತನಗಳು ಸಾಕಷ್ಟು ಹೆಲ್ಪ್ ಮಾಡುತ್ತೆ ಅನ್ನೋದು ಇದಕ್ಕೆ.

ಬಹುಶಃ ಚಿತ್ರರಂಗದಲ್ಲಿ ಮಾತ್ರ ಇದು ಸಾಧ್ಯ. ಈ ನೂರು ಚಿತ್ರಗಳಲ್ಲಿ ನಾನು ಅದೆಷ್ಟು ಲೈಫ್ ನೋಡಿದ್ದೀನಿ ಗೊತ್ತಾ? ಒಂದು ದಿನ ಬೀಚ್‌ನಲ್ಲಿರುತ್ತೀನಿ. ಇನ್ನೊಂದು ದಿನ ಬೆಟ್ಟದ ಮೇಲಿರಿ¤àನಿ. ಸ್ವಿಟ್ಜರ್‌ಲ್ಯಾಂಡ್‌, ಫ್ರಾನ್ಸ್‌, ಇಲ್ಲೇ ಪಕ್ಕದ ಗಲ್ಲಿಯಲ್ಲಿ ಮತ್ತು ಯಾವ್ಯಾವುದೋ ವೇಷದಲ್ಲಿ. ಬಹುಶಃ ನಾನೊಬ್ಬ ಆರ್ಟಿಸ್ಟ್‌ ಆಗಿರದಿದ್ದರೆ ನಾನು ಇಷ್ಟೆಲ್ಲಾ ಆಗುವುದಕ್ಕೆ, ನೋಡುವುದಕ್ಕೆ ಸಾಧ್ಯವೇ ಇಲ್ಲ. ನಮ್ಮದು ಸಣ್ಣ ಕುಟುಂಬ. ಚಿಕ್ಕಂದಿನಿಂದ ದೊಡ್ಡ ಎಕ್ಸ್‌ಪೋಷರ್‌ ಏನೂ ಇರಲಿಲ್ಲ. ಮನೆಯಲ್ಲಿ ಎಲ್ಲರೂ ಒಳ್ಳೆಯವರೇ. ಎಷ್ಟೋ ಬಾರಿ ಸಿನಿಮಾಗಳಲ್ಲಿ ಅಭಿನಯಿಸುವಾಗ, ಹೀಗೆಲ್ಲಾ ಅನಿಸಿದ್ದೂ ಇದೆ. ಏಕೆಂದರೆ, ಅಂತಹ ವಿಷಯಗಳೆಲ್ಲಾ ನಮ್ಮನೇಲಿ ನಡೆದಿಲ್ಲ. ನಾನು ಅದನ್ನು ನೋಡಿಲ್ಲ. ಸಿನಿಮಾದಲ್ಲಿ ನಟಿಸಿದ ಮೇಲೆ ಬೇರೆ ಬೇರೆ ಪ್ರಪಂಚಗಳು ಗೊತ್ತಾಗ್ತಾ ಹೋದುÌ. ಒಂದು ಸಿನಿಮಾದಲ್ಲಿ 60 ಜನ ಕೆಲಸ ಮಾಡಿದರೆ, 60 ಮನಸ್ಥಿತಿ ನೋಡಿದಂಗೆ. ಅದನ್ನು ಇನ್ನಷ್ಟು ದೊಡ್ಡದು ಮಾಡಿದ್ದು “ವೀಕೆಂಡ್‌ ವಿಥ್‌ ರಮೇಶ್‌’. ಅಲ್ಲಿ ಬಂದ ಜನ ಆಡಿದ ಮಾತಲ್ಲ ನಾನು ಒಬ್ಬದಿರಬಹುದು. ಆದರೆ, ಅವರು ಹೇಳಿದ್ದನ್ನ ಕಿವಿಗೊಟ್ಟು ಕೇಳಿದೆ. ಹಾಗಾಗಿ ಕಾರ್ಯಕ್ರಮ ನಡೆಸಿಕೊಡೋದು ಈಸಿ ಆಯ್ತು. ಆ ಕಾರ್ಯಕ್ರಮ ಮಾಡಿದ ಮೇಲೆ ನನಗೆ ಅರ್ಥವಾಗಿದ್ದೇನೆಂದರೆ, ಎಲ್ಲರೂ ಲೈಫ‌ೂ ಒಂದೇ ತರಹ. ಅದೇ ಸ್ನೇಹ, ಪ್ರೀತಿ, ಹೊಟ್ಟೆಕಿಚ್ಚು ಎಲ್ಲರಲ್ಲೂ ಇರುತ್ತೆ. ಬರೀ ಸೆಲೆಬ್ರಿಟಿಗಳಷ್ಟೇ ಅಲ್ಲ, ಕೂತು ನೋಡುವವರಿಗೂ ಅದಿರತ್ತೆ. ಆದರೆ, ಅವೆಲ್ಲಾ ಬೇರೆ ಬೇರೆ ಪ್ಯಾಕೆಟ್‌ಗಳಲ್ಲಿ ಕಾಣಿಸಿಕೊಳ್ಳತ್ತೆ ಅಷ್ಟೇ. ಕೆಲವರನ್ನ ನೋಡಿದ್ರೆ ನಮ್ಮ ಲೈಫ್ ಹೀಗಾಗಲಿಲ್ಲವಲ್ಲ ಅಂತ ಬೇಸರ ಆದ್ರೆ, ಕೆಲವೊಮ್ಮೆ ಹೀಗಾಗಲಿಲ್ಲ ಅನಿಸುತ್ತೆ. ಒಟ್ಟಾರೆ ಈ ಕಾರ್ಯಕ್ರಮ it made me a better human being

ನನ್ನ ನೂರನೇ ಸಿನಿಮಾ “ಪುಷ್ಪಕ ವಿಮಾನ’ ಆಗ್ತಿರೋದು ಬಹಳ ಖುಷಿ. ಇಷ್ಟು ವರ್ಷಗಳಲ್ಲಿ ಈ ತರಹದ್ದೊಂದು ಪಾತ್ರ ಸಿಕ್ಕಿರಲಿಲ್ಲ. ಬೆಸ್ಟ್‌ ರೋಲ್‌ ಅಂದರೆ ತಪ್ಪಿಲ್ಲ. ಇನ್ನು ಆ ಚಿತ್ರವನ್ನ ಮಾಡ್ತಿರೋ ರೀತಿ ಇನ್ನಷ್ಟು ಉತ್ಸಾಹ ತುಂಬಿ¤ದೆ. ಇದೊಂದು ಹೀರೋ-ಹೀರೋಯಿನ್‌ ಚಿತ್ರವಲ್ಲ. ಅಪ್ಪ-ಮಗಳ ಕುರಿತ ಚಿತ್ರ. ಅವರಿಬ್ಬರ ಪ್ರಪಂಚದಲ್ಲಿ ಭೂಕಂಪ ಆದ್ರೆ ಏನಾಗತ್ತೆ ಅಂತ ಕಥೆ. ಇದರಲ್ಲಿ ನನ್ನದು ವಿಮಾನದ ಹುಚ್ಚಿರುವ ಪಾತ್ರ. ಹಾಗಾಗಿ “ಪುಷ್ಪಕ ವಿಮಾನ’ ಅಂತ ಹೆಸರು. ಈ ಹೆಸರಿಡ್ತೀವಿ ಎಂದು ಚಿತ್ರತಂಡದವರು ಹೇಳಿದಾಗ, ಯಾಕೆ ಎಂಬ ಪ್ರಶ್ನೆ ನನಗೂ ಬಂತು. ಈಗ ಸಿನಿಮಾ ಮೂಡಿ ಬಂದಿರುವ ರೀತಿ ನೋಡಿ, ಮೂಲ ಹೆಸರಿಗೆ ಧಕ್ಕೆ ತರೋ ಸಿನಿಮಾ ಅಲ್ಲ ಅಂತ ಸ್ಪಷ್ಟವಾಗಿದೆ. ತುಂಬಾ ಒಳ್ಳೆಯ ಕಾಸ್ಟಿಂಗ್‌ ಇರುವ ಸಿನಿಮಾ. ನನ್ನ ಪಾತ್ರದಲ್ಲಿ ಮನರಂಜನೇನೂ ಇದೆ, ಫೀಲಿಂಗ್ಸ್‌ ಸಹ ಇದೆ. ಇದನ್ನ ಬೇಕಾದರೆ ಇಬ್ಬರು ಮಕ್ಕಳ ಕಥೆ ಎನ್ನಬಹುದು. ಏಕೆಂದರೆ, ಇದರಲ್ಲಿ ನನ್ನದೂ ಮಗುವಿನಂತಹ ಪಾತ್ರ. ಇನ್ನು ನನ್ನ ಮಗಳ ಪಾತ್ರವನ್ನ ಯುವೀನ ಅಂತ ಹುಡುಗಿ ಮಾಡ್ತಿದ್ದಾಳೆ. ಹಾಗಾಗಿ ಇದು ಎರಡು ಮಕ್ಕಳ ಚಿತ್ರ ಅಂದೆ.

ನಾನು ಚಿತ್ರರಂಗಕ್ಕೆ ಬಂದಾಗ ಡಾ. ರಾಜಕುಮಾರ್‌, ವಿಷ್ಣುವರ್ಧನ್‌, ಅನಂತ್‌ನಾಗ್‌, ಶಂಕರ್‌ನಾಗ್‌ ಮುಂತಾದ ದೊಡ್ಡ ಕಲಾವಿದರಿದ್ದರು. ಆಗ ಒಂದು ಸಂದರ್ಶನದಲ್ಲಿ ಒಂದು ಮಾತು ಹೇಳಿದ್ದೆ. “ನನಗೆ ನಿಮ್ಮ ಹೃದಯದಲ್ಲಿ ಸಣ್ಣ ಜಾಗ ಕೊಟ್ಟರೂ ಪರವಾಗಿಲ್ಲ. ಆದರೆ, ಪರ್ಮನೆಂಟ್‌ ಜಾಗ ಕೊಡಿ’ ಜನರಿಗೆ ಹೇಳಿದ್ದೆ. 30 ವರ್ಷ ಕೊಟ್ಟುಬಿಟ್ಟರು. ನನ್ನ ಅಭಿಮಾನಿಗಳು ಯಾರು ಅಂದರೆ ತೋರಿಸೋಕೆ ಗೊತ್ತಿಲ್ಲ. ಇವತ್ತಿನವರೆಗೂ ನನ್ನ ಅಭಿಮಾನಿಗಳ ಬಗ್ಗೆ ಹೆಚ್ಚು ಗೊತ್ತಿಲ್ಲ. ಯಾರು ಕಟೌಟ್‌ ನಿಲ್ಲಿಸ್ತಾರೋ, ಯಾರು ಹಾರ ಹಾಕ್ತಾರೋ ನನಗೆ ನಿಜಕ್ಕೂ ಗೊತ್ತಿಲ್ಲ. ಆದರೆ, ಎಲ್ಲಿ ಹೋದರೂ ಜನ ಪ್ರೀತಿಯಿಂದ ಮಾತಾಡಿಸ್ತಾರೆ. ಅವರ ಹ್ಯಾಂಡ್‌ಶೇಕ್‌, ನೋಟ ನೋಡಿದರೆ ಸಾಕು ಅಭಿಮಾನ ಎಂದು ಗೊತ್ತಾಗಿ ಬಿಡುತ್ತೆ. ಅದಕ್ಕೆ “ನಾನು ನಿಮ್ಮ ಅಭಿಮಾನಿ’ ಅಂತ ಹೇಳ್ಳೋದೇ ಬೇಡ. ಏರ್‌ಪೋರ್ಟ್‌ನಲ್ಲಿ ನನ್ನ ಸೂಟ್‌ಕೇಸ್‌ ಎತ್ತುವ ರೀತಿ ನೋಡಿದರೆ, ನನ್ನ ಕೆಲಸ ಹೇಗಿದೆ ಎಂದು ಗೊತ್ತಾಗಿಬಿಡುತ್ತೆ. ನಮ್ಮ ಕೆಲಸ ಇಷ್ಟವಾಯಿತಾ? ಆಗ ನಮಗೆ ಸಿಗುವ ಗೌರವ ಬೇರೆ, ಇಷ್ಟವಾಗದಿದ್ದರೆ ಸಿಗುವ ಗೌರವ ಬೇರೆ. ಬಹುಶಃ ಇದು ಬೇರೆ ಯಾವುದೇ ವೃತ್ತಿಯವರಿಗೂ ಸಿಗುವ ಅವಕಾಶವಲ್ಲ. ಒಬ್ಬ ಸಿ.ಇ.ಓಗೆ ಇವೆಲ್ಲ ಅರ್ಥವೂ ಆಗಲ್ಲ. ಆದರೆ, ಸಿನಿಮಾ ಕಲಾವಿದರಿಗೆ ಮಾತ್ರ ಇದು ಅರ್ಥವಾಗತ್ತೆ. ಯಾಕೆಂದರೆ ಅವರು ನೇಕೆಡ್‌ ಆಗಿದ್ದಾರೆ. ಕಲಾವಿದರ, ಸೆಲೆಬ್ರಿಟಿಗಳ ಪ್ರತಿ ವಿಷಯವೂ ಜನರಿಗೆ ಕಂಡು ಹಿಡಿಯುತ್ತಾರೆ. ಬರೀ ಕಿವಿಯನ್ನು ನೋಡಿ, ಕಣ್ಣು ನೋಡಿ ಅದ್ಯಾವ ಕಲಾವಿದ ಎಂದು ಹೇಳುವ ಶಕ್ತಿ ಜನರಿಗೆ ಇದೆ. ಏಕೆಂದರೆ, ನಮ್ಮ ಅಷ್ಟೊಂದು ವಿಷಯಗಳು ಅವರಿಗೆ ಗೊತ್ತಿರುತ್ತೆ. ಹೀಗೆ ಅತಿಯಾಗಿ ಎಕ್ಸ್‌ಪೋಸ್‌ ಆಗುವುದರಿಂದ, ಕೆಲವೊಮ್ಮೆ ಸಮಸ್ಯೆ ಸಹ ಇರುತ್ತೆ. ಹಾಗಾಗಿಯೇ ಇನ್ನೂ ಹೆಚ್ಚು ದುಡಿಯಬೇಕು ಮತ್ತು ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬ ಭಯವೂ ಇರುತ್ತೆ.

ಬರಹ: ಚೇತನ್‌ ನಾಡಿಗೇರ್‌; ಚಿತ್ರಗಳು: ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next