Advertisement

ಕಣ್ಣೂರು ವಿಮಾನ ನಿಲ್ದಾಣದಿಂದ 30 ಲ. ರೂ. ಮೌಲ್ಯದ ಚಿನ್ನ ಪತ್ತೆ

10:41 AM Jun 15, 2019 | Team Udayavani |

ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಟಮ್ಸ್‌ ಅಧಿಕಾರಿಗಳು ಶುಕ್ರವಾರ ಅಕ್ರಮ ಚಿನ್ನ ಸಾಗಾಟದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿ ಒಟ್ಟು 30 ಲಕ್ಷ ರೂ. ಮೌಲ್ಯದ 900 ಗ್ರಾಂ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

Advertisement

ಕೋಯಿಕೋಡ್‌ನ‌ ಅಸ್ಮಿಲ್‌ ಶಾಹ ಮಹಮ್ಮದ್‌ ಮತ್ತು ಸಂಶುದ್ದೀನ್‌ ಬಂಧಿತರು. ಅವರು ದೋಹಾದಿಂದ ಆಗಿಮಿಸಿದ್ದು, ಚಿನ್ನವನ್ನು ಪೇಸ್ಟ್‌ ರೂಪದಲ್ಲಿ ಅಡಗಿಸಿಟ್ಟು ಸಾಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next