ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಮೂವತ್ತು ಕರುಗಳನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು ಮೂವರನ್ನು ಬಂಧಿಸಿ ಗುಂಡ್ಲುಪೇಟೆ ಪೊಲೀಸರ ವಶಕ್ಕೆ ನೀಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮದ್ದೂರು ಚೆಕ್‌ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಗೇಟ್ ವಾಚರ್ ಬಸವಣ್ಣ ತಪಾಸಣೆ ನಡೆಸುತ್ತಿದ್ದ ವೇಳೆ ಜಾನುವಾರುಗಳ ಅಕ್ರಮ ಸಾಗಣೆ ಬೆಳಕಿಗೆ ಬಂದಿದೆ.
ಈ ವೇಳೆ ಯಾವುದೇ ಪರವಾನಗಿ, ಬಿಲ್‌ಗಳನ್ನು ಹಾಜರುಪಡಿಸದೇ ಇದ್ದಾಗ ಬಸವಣ್ಣ ವಲಯಾರಣ್ಯಾ ಧಿಕಾರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗ ಮಿಸಿದ ಆರ್‌ಎಫ್ಒ ಶೈಲೇಂದ್ರಕುಮಾರ್ ಮತ್ತು ಡಿಆರ್‌ಎಫ್ಒ ನಾಗರಾಜು ತೀವ್ರ ತಪಾಸಣೆ ಗೊಳಪಡಿಸಿ ಸೂಕ್ತ ದಾಖಲಾತಿಗಳು ದೊರಕದ ಕಾರಣ ಆರೋಪಿಗಳನ್ನು ಬಂಧಿಸಿದರು. ಅಲ್ಲದೇ ಕ್ಯಾಂಟರ್ ಲಾರಿಯಲ್ಲಿದ್ದ ಮೂವತ್ತು ಕರುಗಳನ್ನು ವಶಕ್ಕೆ ಪಡೆದರು. ಕ್ಯಾಂಟರ್ ಚಾಲಕ ಬಹೀರ್‌ನಾಥ್ ಟೀನ್‌ಕರ್, ಮಹಾರಾಷ್ಟ್ರ ಮೂಲದ ವ್ಯಕ್ತಿ ಬಾಬಾ ಸಾಹೇಬ್ ಮತ್ತು ದಾವಣಗೆರೆ ಮೂಲದ ಚಿದಾನಂದ್ ಎಂಬುವರನ್ನು ಬಂಧಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.