Advertisement

Fraud Case ಮೆಸ್‌ ಮ್ಯಾನೇಜರ್‌, ಸಿಬಂದಿಯಿಂದ ಮಾಲಕರಿಗೆ 30 ಲಕ್ಷ ರೂ. ವಂಚನೆ

12:31 AM Sep 29, 2023 | Team Udayavani |

ಮಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾನಿಲಯದ ಜ್ಞಾನ ಸಂಗಮ ಕ್ಯಾಂಪಸ್‌ ವಿದ್ಯಾರ್ಥಿಗಳಿಗೆ ಆಹಾರ ಪೂರೈಸುವ ಮೆಸ್‌ನ ಗುತ್ತಿಗೆ ಪಡೆದುಕೊಂಡಿರುವ ವ್ಯಕ್ತಿಯೊಬ್ಬರಿಗೆ ಅವರ ಮ್ಯಾನೇಜರ್‌ ಹಾಗೂ ಇತರ ಇಬ್ಬರು ಸೇರಿ ಸುಮಾರು 30 ಲಕ್ಷ ರೂ. ವಂಚಿಸಿರುವ ಕುರಿತಂತೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮರೋಳಿಯಲ್ಲಿ ಸಂಸ್ಥೆ ಹೊಂದಿರುವ ಬಿ. ಸಚ್ಚಿದಾನಂದ ಶೆಟ್ಟಿ ವಂಚನೆಗೆ ಒಳಗಾಗಿರುವವರು. ಅವರು 2022ರ ಜ. 1ರಿಂದ ಡಿ. 31ರ ವರೆಗೆ ಮೆಸ್‌ಗೆ ಆಹಾರ ಪೂರೈಸುವ ಗುತ್ತಿಗೆ ಪಡೆದಿದ್ದರು. ತಮ್ಮದೇ ಸಂಸ್ಥೆಯ ಸಿಬಂದಿ ಜಗದೀಶ್‌ ಕೃಷ್ಣ ಶೆಟ್ಟಿಯನ್ನು ಮ್ಯಾನೇಜರ್‌ ಆಗಿ ನೇಮಿಸಿ ಅಲ್ಲಿನ ಸಂಪೂರ್ಣ ಜವಾಬ್ದಾರಿ ವಹಿಸಿದ್ದರು. ಆತ ಅಕಿಂತಾ ಆನಂದ ವುಸ್ಲಕರ್‌ ಎಂಬಾಕೆಯನ್ನು ಅಕೌಟೆಂಟ್‌ ಮತ್ತು ಬಾಬು ದಳ್ವಾಯಿ ಎಂಬುವನನ್ನು ಸಹಾಯಕನನ್ನಾಗಿ ಇಟ್ಟುಕೊಂಡಿದ್ದರು.

ಈ ನಡುವೆ ಮೆಸ್‌ ಬಿಲ್‌ ನೇರವಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸುವಂತೆ ವಿಟಿಯು ಆದೇಶಿದ್ದು, ಅದರಂತೆ ಸಚ್ಚಿದಾನಂದ ಶೆಟ್ಟಿ ಅವರು ತಮ್ಮ ಖಾತೆಗೆ ಲಿಂಕ್‌ ಆಗಿರುವ ಪಿಒಎಸ್‌ ಮತ್ತು ಯುಪಿಐ ಮೆಷಿನ್‌ ಮೆಸ್‌ನಲ್ಲಿ ಅಳವಡಿಸಿಕೊಂಡಿದ್ದರು.

ಆದರೆ ಒಂದನೇ ಆರೋಪಿ ಜಗದೀಶ ಕೃಷ್ಣ ಅದನ್ನು ಬದಲಿಸಿ, ತನ್ನ ಖಾತೆ ಲಿಂಕ್‌ ಆಗಿರುವ ಮೆಷಿನ್‌ ಅಳವಡಿಸಿ 6, 83, 175 ರೂ. ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಎರಡನೇ ಆರೋಪಿ ಅಕಿಂತಾ ವಿದ್ಯಾರ್ಥಿಗಳಿಂದ 10,48,337 ರೂ. ಮತ್ತು ಮೂರನೇ ಆರೋಪಿ ಬಾಬು 52,622 ರೂ. ವರ್ಗಾಯಿಸಿಕೊಂಡಿದ್ದಾರೆ. ಇದಲ್ಲದೆ ಮೆಸ್‌ ಕೆಲಸಗಾರರಿಗೆ ಸರಿಯಾಗಿ ವೇತನ ನೀಡಿಲ್ಲ. ಜತೆಗೆ ಸಂಸ್ಥೆಯ ಹೆಸರಿನಲ್ಲಿ ಸಾಲವಾಗಿ ದಿನಸಿ ಸಾಮಗ್ರಿಗಳನ್ನು ಪಡೆದಿರುವುದು ಸೇರಿ ಒಟ್ಟು 30 ಲಕ್ಷ ರೂ. ನಷ್ಟ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next