Advertisement

ಕಮರಿಗೆ ಬಿದ್ದ ಶಾಲೆ ಬಸ್‌: 30 ಸಾವು

07:00 AM Apr 10, 2018 | Team Udayavani |

ನವದೆಹಲಿ: ಶಾಲೆಯಿಂದ ಮನೆಗೆ ಮಕ್ಕಳನ್ನು ಕರೆದುಕೊಂಡು ಹೊರಟಿದ್ದ ಬಸ್‌ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ 200 ಅಡಿ ಆಳದ ಪ್ರಪಾತಕ್ಕೆ ಬಿದ್ದ ಪರಿಣಾಮ 27 ಮಕ್ಕಳು ಸಾವನ್ನಪ್ಪಿದ್ದಾರೆ. ಇಬ್ಬರು ಶಿಕ್ಷಕರು ಹಾಗೂ ವಾಹನ ಚಾಲಕ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

Advertisement

ವಜೀರ್‌ ರಾಮ್‌ ಸಿಂಗ್‌ ಪಠಾನಿಯಾ ಎಂಬುವರಿಗೆ ಸೇರಿದ ಈ ಬಸ್‌ನಲ್ಲಿ 40ಕ್ಕೂ ಹೆಚ್ಚು ಮಕ್ಕಳಿದ್ದರು ಎನ್ನಲಾಗಿದೆ. ಶಾಲೆ ಅವಧಿ ಮುಗಿದಿದ್ದರಿಂದ ಮಧ್ಯಾಹ್ನ ಮಕ್ಕಳನ್ನು ಕರೆದುಕೊಂಡು ಅವರ ಮನೆಗಳಿಗೆ ಬಿಡಲು ಬಸ್‌ ತೆರಳಿತ್ತು. ಸ್ಥಳೀಯರು ಹೇಳುವಂತೆ, ಚಾಲಕನ ನಿಯಂತ್ರಣ ತಪ್ಪಿದ್ದರಿಂದಾಗಿ ಬಸ್‌ ಕಂದಕಕ್ಕೆ ಉರುಳಿದೆ. ಗಾಯಗೊಂಡವರನ್ನು ಸಮೀಪದ ನೂರ್‌ಪುರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗುತ್ತಿದೆ. ಈಗಾಗಲೇ 20ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತರಲಾಗಿದೆ. 50ಕ್ಕೂ ಹೆಚ್ಚು ವೈದ್ಯರನ್ನು ಜಿಲ್ಲಾಸ್ಪತ್ರೆಯಲ್ಲಿ ನಿಯೋಜಿಸಲಾಗಿದ್ದು, ಈ ಪೈಕಿ ಮಕ್ಕಳ ತಜ್ಞರು ಮತ್ತು ಇತರ ವಿಭಾಗದ ಪರಿಣಿತರೂ ಇದ್ದಾರೆ. ರಾತ್ರಿಯೇ 20ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಬಸ್‌ ಸಂಪೂರ್ಣ ನುಜ್ಜುಗುಜ್ಜಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ಅತ್ಯಂತ ಕಷ್ಟದ್ದಾಗಿದೆ. ಅಲ್ಲದೆ ಪ್ರಪಾತ ಕಡಿದಾಗಿದ್ದು, ರಸ್ತೆಯಿಂದ ಬಸ್‌ವರೆಗೆ ತೆರಳುವ ಮಾರ್ಗವೂ ದುರ್ಗಮವಾಗಿದೆ. ರಸ್ತೆಯಿಂದ ನಿಂತು ನೋಡಿದರೆ ಕಣ್ಣಿಗೆ ಕಾಣದಷ್ಟು ಆಳದಲ್ಲಿ ಬಸ್‌ ಬಿದ್ದಿದ್ದರಿಂದ ಈ ಪ್ರಮಾಣದ ಸಾವುನೋವು ಸಂಭವಿಸಿದೆ.

ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ. ಈ ಸಂಬಂಧ ತನಿಖೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ನೇಮಿಸಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next