Advertisement

3.0 ಎಂಬ ಹಾರರ್‌ ಸಿನಿಮಾ

03:05 PM Mar 16, 2017 | Team Udayavani |

ಗಾಂಧಿನಗರದಲ್ಲಿ ಮತ್ತೂಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗೆ ಚಾಲನೆ ಸಿಕ್ಕಿದೆ. ಹಾರರ್‌, ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಸಿನಿಮಾಗಳ ಹಿಂದೆ ಬಹುತೇಕ ಹೊಸಬರೇ ಬರುತ್ತಿದ್ದಾರೆ. ಈ ಚಿತ್ರಕ್ಕೂ ಹೊಸಬರ ಸ್ಪರ್ಶವಿದೆ. ಅಂದಹಾಗೆ, ಆ ಚಿತ್ರಕ್ಕೆ “3.0′ ಎಂದು ನಾಮಕರಣ ಮಾಡಲಾಗಿದೆ. ಅಷ್ಟಕ್ಕೂ ಈ ಶೀರ್ಷಿಕೆ ಇಡುವುದಕ್ಕೆ ಬಲವಾದ ಕಾರಣವೂ ಇದೆ. ಯಾಕೆ ಈ ಶೀರ್ಷಿಕೆ ಇಡಲಾಗಿದೆ ಎಂಬುದನ್ನು ತೆರೆಯಮೇಲಷ್ಟೇ ನೋಡಿ ತಿಳಿದುಕೊಳ್ಳಬೇಕು ಎಂಬುದು ಚಿತ್ರತಂಡದ ಮಾತು.

Advertisement

ಅಂದಹಾಗೆ, ಈ ಚಿತ್ರದ ಮೂಲಕ ಇಂದ್ರ ನಿರ್ದೇಶಕರಾಗುತ್ತಿದ್ದಾರೆ.ಇದಕ್ಕೂ ಮುನ್ನ, ಇಂದ್ರ “ವಿರಾಟ್‌’, “ಬಂಗಾರಿ’ ಸೇರಿದಂತೆ ನಾಲ್ಕೈದು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವ ಮೂಲಕ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶೀರ್ಷಿಕೆಯೇ ಹೇಳುವಂತೆ, ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾ. ಇದರೊಂದಿಗೆ ನವಿರಾದ ಪ್ರೇಮಕಥೆಯೂ ಇದೆ. ಚಿತ್ರದಲ್ಲಿ ಶಿವರಾಜ್‌, ಶಶಿಕಿರಣ್‌ ಮತ್ತು ಲೋಹಿತ್‌ ಎಂಬ ಮೂವರು ಹೊಸ ಹೀರೋಗಳು ಕಾಣಿಸಿಕೊಂಡರೆ, ನಿಷ್ಕಲ ನಾಯಕಿಯಾಗಿ ನಟಿಸುತ್ತಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಹಳೆಯ ಹಾಗೂ ಹೊಸಬರ ಕಲಾವಿದರ ದಂಡೇ ಇರಲಿದೆಯಂತೆ. ಬೆಂಗಳೂರಿನ ಸುತ್ತಮುತ್ತ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ಸೋಮವಾರವಷ್ಟೇ ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ವೀರ್‌ಸಮರ್ಥ್ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ರುದ್ರೇಶ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಈಗಷ್ಟೇ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next