Advertisement

Israel-Hamas: ಯುದ್ಧಕ್ಕೆ 30 ದಿನ ಪೂರ್ಣ

11:08 PM Nov 06, 2023 | Team Udayavani |

ಖಾನ್‌ ಯೂನಿಸ್‌: ಇಸ್ರೇಲ್‌ ಮತ್ತು ಹಮಾಸ್‌ ಯುದ್ಧ ಆರಂಭವಾಗಿ ಸೋಮವಾರಕ್ಕೆ ಸರಿಯಾಗಿ 30 ದಿನಗಳು ಪೂರ್ಣಗೊಂಡಿವೆ. ಅ. 7ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ನಡೆಸಿದ ದಿಢೀರ್‌ ದಾಳಿಯಿಂದ ಶುರುವಾದ ಮಾರಣಹೋಮವು ಇನ್ನೂ ಮುಂದುವರಿದಿದ್ದು, ಗಾಜಾಪಟ್ಟಿಯಲ್ಲಿ ಇಸ್ರೇಲ್‌ ಪಡೆಯ ದಾಳಿಗೆ ಮೃತಪಟ್ಟವರ ಸಂಖ್ಯೆ 10 ಸಾವಿರ ದಾಟಿದೆ.

Advertisement

ರವಿವಾರ ಒಟ್ಟು 2 ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದ್ದು, ನೂರಾರು ಮಂದಿ ಮೃತ ಪಟ್ಟಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಹಮಾಸ್‌ನ 450 ಟಾರ್ಗೆಟ್‌ಗಳನ್ನು ಧ್ವಂಸ ಗೊಳಿ ಸಲಾಗಿದೆ ಹಾಗೂ ಹಮಾಸ್‌ನ ಮತ್ತೂಬ್ಬ ಕಮಾಂಡರ್‌ನನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ಅಲ್ಲದೇ ನೆತನ್ಯಾಹು ಸೈನಿಕರು ಗಾಜಾ ಪಟ್ಟಿಯನ್ನು ಸಂಪೂರ್ಣ ವಾಗಿ ಸುತ್ತುವರಿ ದಿದ್ದು, ಮಂಗಳ ವಾರ ಗಾಜಾದೊಳಗೆ ಪ್ರವೇಶಿ ಸುವ ಸಾಧ್ಯತೆಯಿದೆ ಎಂದು ಹೇಳ ಲಾಗಿದೆ. ಈ ಹಿನ್ನೆಲೆಯಲ್ಲಿ ಗಾಜಾ ದಲ್ಲಿ ಇಂಟರ್ನೆಟ್‌, ಫೋನ್‌ ಸೇರಿ ಎಲ್ಲ ರೀತಿಯ ಸಂಪರ್ಕ ಜಾಲಗಳನ್ನೂ ಸ್ಥಗಿತಗೊಳಿಸಲಾಗಿದೆ.

ಇದೇ ವೇಳೆ, ಯುದ್ಧದಲ್ಲಿ ಈವರೆಗೆ ಗಾಜಾದಲ್ಲಿದ್ದ ವಿಶ್ವಸಂಸ್ಥೆಯ 88 ಸಿಬಂದಿ ಮೃತಪಟ್ಟಿದ್ದಾರೆ. ಒಂದೇ ಸಂಘರ್ಷದಲ್ಲಿ ವಿಶ್ವಸಂಸ್ಥೆಯು ಇಷ್ಟೊಂದು ಸಿಬಂದಿಯನ್ನು ಕಳೆದುಕೊಂಡಿದ್ದು ಇದೇ ಮೊದಲು. ಇದರ ನಡುವೆಯೇ, ಸೋಮವಾರ ರಾತ್ರಿ ಇಸ್ರೇಲ್‌ನ ಉತ್ತರ ಭಾಗದ ಹಲವು ನಗರಗಳಲ್ಲಿ ರಾಕೆಟ್‌ ದಾಳಿಯ ಸೈರನ್‌ಗಳು ಮೊಳಗಿವೆ.

Advertisement

Udayavani is now on Telegram. Click here to join our channel and stay updated with the latest news.

Next