Advertisement

ಶ್ರಮಿಕ್‌ ರೈಲುಗಳಲ್ಲಿ 30 ಶಿಶುಗಳ ಜನನ

02:55 AM May 25, 2020 | Sriram |

ಮೇ 1ರಿಂದ ಇಲ್ಲಿಯವರೆಗೆ ಶ್ರಮಿಕ್‌ ವಿಶೇಷ ರೈಲುಗಳಲ್ಲಿ 30 ಶಿಶುಗಳು ಜನಿಸಿವೆ.ಈ ರೈಲುಗಳಲ್ಲಿ ಪ್ರಯಾಣಿಸುತ್ತಿರುವಾಗಲೇ ಗರ್ಭಿಣಿಯರು ಮಗುವಿಗೆ ಜನ್ಮ ನೀಡಿದ್ದಾರೆ. ಸರಿ ಸುಮಾರು ಎರಡು ತಿಂಗಳಿಂದ ಸರಿಯಾದ ಆಹಾರ, ನೀರು, ಇನ್ನಿತರ ತೊಂದರೆಗಳಿಂದಾಗಿ ಗರ್ಭಿಣಿ ಯರು ಹೆರಿಗೆ ವೇಳೆ ತೊಂದರೆ ಅನುಭವಿಸಿದ್ದಾರೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈ ನಡುವೆ, ಮೇ 1 ರಿಂದ ಇಲ್ಲಿಯವರೆಗೆ ಭಾರತೀಯ ರೈಲ್ವೇ ಸುಮಾರು 37 ಲಕ್ಷ ವಲಸಿಗ ಕಾರ್ಮಿಕರನ್ನು 2,818 ಶ್ರಮಿಕ ವಿಶೇಷ ರೈಲುಗಳಲ್ಲಿ ಅವರವರ ಊರುಗಳಿಗೆ ತಲುಪಿಸಿದೆ ಎಂದು ರೈಲ್ವೇ ಸಚಿವಾಲಯ ರವಿವಾರ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next