ಕಲಬುರಗಿ: ಲಾರಿ ಹಾಗೂ ಸರಕು ಸಾಗಣೆ ವಾಹನಗಳ ಮೇಲೆ ಇನ್ಸೂರೆನ್ಸ್ ಪ್ರಮಾಣ ಹೆಚ್ಚಳ, ಟೋಲ್ ಗಳಿಂದ ಆಗುತ್ತಿರುವ ಸುಲಿಗೆ ಸೇರಿದಂತೆ ಇತರ ನೀತಿ ವಿರೋಧಿಸಿ ಮಾ. 30ರ ಮಧ್ಯರಾತ್ರಿಯಿಂದ ದಕ್ಷಿಣ ಭಾರತದಾದ್ಯಂತ ಅನಿದಿಧಿìಷ್ಟ ಅವಧಿಧಿವರೆಗೆ ಲಾರಿ ಮುಷ್ಕರ ಹಮ್ಮಿಕೊಳ್ಳಲಾಗುತ್ತಿದೆ ಎಂದು ದಕ್ಷಿಣ ಭಾರತ ಲಾರಿ ಮಾಲೀಕರ ಕಲ್ಯಾಣ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಾಧ್ಯಕ್ಷ ಜಿ.ಆರ್. ಷಣ್ಮುಗಪ್ಪ ತಿಳಿಸಿದರು.
ಲಾರಿ ಹಾಗೂ ಸರಕು ಸಾಗಣೆ ವಾಹನುದಾರರಿಗೆ ಮಾರಕವಾಗಿರುವ ನೀತಿ ಕೈ ಬಿಡುವಂತೆ ಇಲ್ಲಿವರೆಗೆ ಹೋರಾಟ ಮಾಡಿದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇಡಿಕೆಗಳಿಗೆ ಸ್ಪಂದಿಸದೆ ಇದ್ದುದರಿಂದ ಅನಿಧಿರ್ದಿಷ್ಟ ಮುಷ್ಕರಕ್ಕೆ ಮುಂದಾಗಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಷ್ಕರದಲ್ಲಿ ದಕ್ಷಿಣ ಭಾರತದ ಕರ್ನಾಟಕ, ಮಹಾರಾಷ್ಟ್ರ, ತಮಿಳ್ನಾಡು, ಆಂಧ್ರ, ತೆಲಂಗಾಣ, ಕೇರಳ ಸೇರಿದಂತೆ ಸುಮಾರು 16 ಲಕ್ಷ ಲಾರಿ ಮಾಲಿಕರು ಹಾಗೂ ಕರ್ನಾಟಕದಲ್ಲಿ ಸುಮಾರು 6.50 ಲಕ್ಷ ಖಾಸಗಿ ಬಸ್ಸು, ಲಾರಿ, ಕಾರು ಮುಂತಾದ ವಾಹನಗಳ ಪಾಲ್ಗೊಳ್ಳಲಿವೆ ಎಂದರು. ಲಾರಿಗಳ ಮೇಲಿನ ಇನ್ಸುರೆನ್ಸ್‌ನು ಒಮ್ಮೆಲೆ 50ರಿಂದ 70 ಪ್ರತಿಶತ ಹೆಚ್ಚಳ ಮಾಡಲಾಗಿದೆ.
ಖಾಸಗಿ ಇನ್ಸೂರೆನ್ಸ್ ಕಂಪನಿಗಳು ಲೂಟಿಗೆ ಇಳಿದಿವೆ. ಇಷ್ಟೊಂದು ಹಣ ನೀಡಿದರೆ ಲಾರಿ ಮಾಲಿಕರು ಬದುಕುಳಿಯುವುದೇ ಅಸಾಧ್ಯವಾಗುತ್ತದೆ. ದೇಶದಲ್ಲಿ ಸುಮಾರು 363 ಟೋಲ್‌ಗಳಿವೆ. ಅದರಲ್ಲಿ ದಕ್ಷಿಣ ಭಾರತದಲ್ಲಿ 117 ಟೋಲ್‌ಗಳಿದ್ದು, ಕರ್ನಾಟಕದಲ್ಲಿ 39 ಟೋಲ್‌ಗಳಿವೆ. 32 ಟೋಲ್‌ಗಳಲ್ಲಿ ಈಗಾಗಲೇ ಕೇವಲ ನಾಲ್ಕು ವರ್ಷಗಳಲ್ಲಿ ಟೋಲ್ ನಿರೀಕ್ಷಿಸಿದಷ್ಟು ಸಂಗ್ರಹ ಆಗಿದೆ.
ಟೋಲ್ ಸಂಗ್ರಹಕ್ಕೆ ತಾವು ವಿರೋಧಿಸುವುದಿಲ್ಲ. ಒಂದು ವರ್ಷಕ್ಕೆ ಟೋಲ್‌ನಿಂದ 12500 ಕೋಟಿ ರೂ. ಬರುತ್ತದೆ. ಆ ಹಣವನ್ನು ಮುಂಗಡವಾಗಿ ಲಾರಿ ಮಾಲಿಕರೇ ಭರಿಸುತ್ತಾರೆ. ಹೀಗಾಗಿ ಟೋಲ್‌ಗಳನ್ನು ಸ್ಥಾಪಿಸುವುದು ಬೇಡ. ಟೋಲ್‌ಗಳಿಂದ ಹಣ ಸುಲಿಗೆ ಹಾಗೂ ವ್ಯರ್ಥ ಕಾಲಹರಣ, ಹೆಚ್ಚಿನ ಪ್ರಮಾಣದ ತೈಲ ಹಾನಿ ಆಗಲಿದೆ. ಇದರಿಂದ ಸುಮಾರು 80,000 ಕೋಟಿ ರೂ.ಗಳಷ್ಟು ನಷ್ಟ ಆಗಲಿದೆ.
ಆದ್ದರಿಂದ ಒಮ್ಮೆಲೆ ಟೋಲ್ ಸಂಗ್ರಹವನ್ನು ವರ್ಷಕ್ಕೊಮ್ಮೆ ಸರ್ಕಾರವೇ ವಸೂಲಿ ಮಾಡಿದರೆ, ಅದನ್ನು ಲಾರಿ ಮಾಲಿಕರು ಭರಿಸಲು ಸಿದ್ಧರಿದ್ದಾರೆ. ಇದರಿಂದ ಸಾರ್ವಜನಿಕರಿಗೂ ಸಹ ಯಾವುದೇ ರೀತಿಯ ಹಣದ ಹೊರೆ ಬೀಳದು ಎಂದು ಹೇಳಿದರು. ಒಂದು ವೇಳೆ ವರ್ಷಕ್ಕೊಮ್ಮೆ ಮುಂಗಡ ಟೋಲ್ ಹಣ ಪಡೆಯದೇ ಇದ್ದರೆ ಪ್ರತಿ ಲೀಟರ್ ಮೇಲೆ 2 ರೂ.ಗಳ ಸುಂಕ ಪಡೆಯಬೇಕು. ಇದರಿಂದ ಯಾವುದೇ ಸಮಸ್ಯೆ ಆಗದು.
ಸುಗಮ ಸಂಚಾರಕ್ಕೂ ಅವಕಾಶ ಕಲ್ಪಿಸಿದಂತೆ ಆಗುತ್ತದೆ. ಇನ್ನುಳಿದಂತೆ 10 ವರ್ಷಗಳಿಗೂ ಹಳೆಯದಾದ ವಾಹನಗಳನ್ನು ಸಂಚಾರಕ್ಕೆ ಅಯೋಗ್ಯವೆಂದು ಪರಿಗಣಿಸುವುದು ಸರಿಯಲ್ಲ. ಏನಾದರೂ ವಾಹನದಲ್ಲಿ ತೊಂದರೆ ಇದ್ದರೆ ಅದನ್ನು ನಿವಾರಿಸಲು ಲಾರಿ ಮಾಲಿಕರು ಸಿದ್ಧರಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಈ ವಾಹನಗಳಿಂದ ಸಾಕಷ್ಟು ಉಪಯೋಗ ಇದೆ.
ಆದ್ದರಿಂದ ಇಂತಹ ಮಾರಕ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾದ ಮೊಹಮ್ಮದ ಮೈನೂದ್ದೀನ್, ಗೋಪಾಲಕೃಷ್ಣ ರಘೋಜಿ, ಪದಾಧಿಕಾರಿಗಳಾದ ಬಾಬುರೆಡ್ಡಿ, ಪ್ರಕಾಶ ಖೇಮಜಿ ಶಹಾಬಜಾರ, ಅಸ್ಲಂ ಶಾಹ, ಕಲಶೆಟ್ಟಿ, ಲಾಲ್ ಪಟೇಲ್, ದಾಮೋದರ್ ಮುಂತಾದವರು ಹಾಜರಿದ್ದರು.