ಡಬ್ಲಿನ್: ಐರ್ಲೆಂಡ್‌ನಲ್ಲಿ ಮೂರು ವರ್ಷದ ಪೋರನೊಬ್ಬ ಮೊಬೈಲ್ ಆ್ಯಪ್ ಮೂಲಕ ಆರ್ಡರ್ ಮಾಡಿ 2,600 ರೂ. ಮೌಲ್ಯದ ಮ್ಯಾಕ್‌ಡೋನಾಲ್ಡ್‌ನಿಂದ ಚಿಪ್ಸ್ ಮತ್ತಿತರ ಕರಕಲು ತಿನಿಸುಗಳನ್ನು ಮನೆಗೆ ತರಿಸಿಕೊಂಡು ತನ್ನ ಪೋಷಕರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ. ಹರ್ರಿ ಕಿಯೋಗ್ ಲೀ (3) ಎಂಬಾತ ತನ್ನ ತಂದೆಯ ಮೊಬೈಲ್ ತೆಗೆದುಕೊಂಡು ಯೂಟ್ಯೂಬ್‌ನಲ್ಲಿ ವೀಡಿಯೋ ನೋಡಿದ್ದಾನೆ. ಬಳಿಕ ಆ್ಯಪ್ ಮೂಲಕ 2,600 ರೂ. ಮೌಲ್ಯದ ಮ್ಯಾಕ್‌ಡೋನಾಲ್ಡ್ ತಿನಿಸುಗಳನ್ನು ಆರ್ಡರ್ ಮಾಡಿದ್ದಾನೆ. ಅಲ್ಲದೆ, ತ್ವರಿತ ಡೆಲಿವರಿಗಾಗಿ 260 ರೂ. ಟಿಪ್ಸ್ ಕೂಡ ನೀಡಿದ್ದಾನೆ. ಮನೆಗೆ ಡೆಲಿವರಿ ಬಾಯ್ ಬಂದು ತಿನಿಸುಗಳನ್ನು ಕೊಟ್ಟಾಗ ಪೋಷಕರು ಗೊಂದಲಕ್ಕೀಡಾಗಿ, ನಾವು ಆರ್ಡರ್ ಮಾಡಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಡೆಲಿವರಿ ಬಾಯ್ ನಿಮ್ಮ ಮನೆಯ ಮೊಬೈಲ್‌ನಿಂದ ಈ ಆರ್ಡರ್ ಬಂದಿದೆ ಎಂದು ಮನವರಿಕೆ ಮಾಡಿಕೊಟ್ಟಾಗ, ಇದು ತಮ್ಮ ಮಗನ ಕೆಲಸವಾಗಿದೆ ಎಂದು ಪೋಷಕರಿಗೆ ಗೊತ್ತಾಗಿದೆ.