Advertisement
ಒಂದೇ ತಿಂಗಳಿನಲ್ಲಿ ಮೂರು ಸಿನೆಮಾ ಬಿಡುಗಡೆಯಾದರೆ ಕೋಸ್ಟಲ್‌ವುಡ್‌ನಲ್ಲಿ ಮತ್ತೂಮ್ಮೆ ವಿವಾದ ಸದ್ದು ಮಾಡಲಿದೆ. ಸಮಯ ನೋಡಿಕೊಂಡು ಚಿತ್ರ ನಿರ್ಮಾಪಕರು-ನಿರ್ದೇಶಕರು- ಕಲಾವಿದರಿಗೆ ನೋವಾಗದಂತೆ, ಪ್ರೇಕ್ಷಕರಿಗೆ ಗೊಂದಲವಾಗದಂತೆ ಸಿನೆಮಾ ಬಿಡುಗಡೆ ಬಗ್ಗೆ ನಿರ್ಮಾಪಕರು ಮನಸ್ಸು ಮಾಡಬೇಕಿದೆ.
ಜಲನಿಧಿ ಫಿಲಂಸ್ ಲಾಂಛನದಲ್ಲಿ ತಯಾರಾದ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್, ರಾಜೇಶ್ ಕುಡ್ಲ ನಿರ್ಮಾಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ಜಬರ್‌ದಸ್ತ್ ಶಂಕರ್ ಸಿನೆಮಾ ನವೆಂಬರ್ ಮೊದಲ ವಾರದಲ್ಲಿ ಬರುವ ನಿರೀಕ್ಷೆಯಿದೆ. ಅರ್ಜುನ್ ಕಾಪಿಕಾಡ್, ನೀತಾ ಅಶೋಕ್, ರಾಶಿ ಬಿ. ಸಾಯಿಕೃಷ್ಣ, ಸತೀಶ್ ಬಂದಲೆ, ಗೋಪಿನಾಥ ಭಟ್, ಗಿರೀಶ್ ಎಂ. ಶೆಟ್ಟಿ ಕಟೀಲು, ಲಕ್ಷ್ಮಣ್ ಕುಮಾರ್ ಮಲ್ಲೂರು, ಪ್ರತೀಕ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಶರಣ್ ಕೈಕಂಬ, ತಿಮ್ಮಪ್ಪ ಕುಲಾಲ್ ಹಾಗೂ ಚಾಪರಕ ತಂಡದ ಕಲಾವಿದರು ಇದ್ದಾರೆ.
Related Articles
ಭವಿಷ್ ಆರ್.ಕೆ. ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾದ ರಾಧಾಕೃಷ್ಣ ನಾಗರಾಜು ನಿರ್ಮಾಣದ “ಆಟಿಡೊಂಜಿ ದಿನ’ ತುಳು ಸಿನೆಮಾಕ್ಕೆ ಸೆನ್ಸಾರ್‌ನಲ್ಲಿ ಯು/ಎ ಸರ್ಟಿಫಿಕೇಟ್ ಲಭಿಸಿ, ನವೆಂಬರ್‌ನಲ್ಲೇ ಬಿಡುಗಡೆಯ ನಿರೀಕ್ಷೆಯಲ್ಲಿದೆ. ಹ್ಯಾರಿಸ್ ಕೊಣಾಜೆಕಲ್ಲು ಈ ಸಿನೆಮಾವನ್ನು ಮೊದಲು ನಿರ್ದೇಶಿಸಿದ್ದರು. ಪ್ರಸ್ತುತ ಎ.ಎಸ್. ವೈಭವ್ ಪ್ರಶಾಂತ್ ನಿರ್ದೇಶನ ಮಾಡಿದ್ದರು. ಪೃಥ್ವಿ ಅಂಬರ್ ನಾಯಕ ನಟನಾಗಿ, ನಿರೀಕ್ಷಾ ಶೆಟ್ಟಿ ನಾಯಕಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಾಸು ಮಲ್ಪೆ, ಶ್ರದ್ಧಾ ಸಾಲ್ಯಾನ್, ದೀಪಕ್ ರೈ ಪಾಣಾಜೆ, ಅನಿಲ್ ರಾಜ್, ವಿಶ್ವನಾಥ್ ಮೂಡುಬಿದಿರೆ, ಸೂರಜ್ ಸಾಲ್ಯಾನ್, ಸುರೇಂದ್ರ ಕುಮಾರ್ ಹೆಗ್ಡೆ, ಶೈಲಶ್ರೀ ತಾರಾಗಣದಲ್ಲಿದ್ದಾರೆ.
Advertisement
ಕುದ್ಕನ ಮಮದ್ಮೆಜಿಆರ್ಕೆ ನಿರ್ಮಾಣದ, ಎ.ವಿ. ಜಯರಾಜ್ ನಿರ್ದೇಶನದ “ಕುದ್ಕನ ಮಮದ್ಮೆ’ ಸಿನೆಮಾಕ್ಕೂ ಸೆನ್ಸಾರ್ ದೊರಕಿದ್ದು, ಬಿಡುಗಡೆಯ ನಿರೀಕ್ಷೆಯಲ್ಲಿದೆ. ಗೌರಿ ಆರ್. ಹೊಳ್ಳ ಮತ್ತು ಸುಹಾಸ್ ಹೊಳ್ಳ ನಿರ್ಮಾಣದ ಈ ಸಿನೆಮಾದಲ್ಲಿ ಪೃಥ್ವೀ ಅಂಬರ್, ಶೀತಲ್ ನಾಯಕ್, ದೇವಿಪ್ರಕಾಶ್ ಉರ್ವ, ಶ್ರೀಷಾ ಭಂಡಾರಿ, ಕಾರ್ತಿಕ್ ರಾವ್, ಮುಂಬಯಿ ರಂಗ ಕಲಾವಿದೆ ಚಂದ್ರಾವತಿ ವಸಂತ್ ಮುಖ್ಯ ಪಾತ್ರದಲ್ಲಿದ್ದಾರೆ. ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪಿಂಕಿರಾಣಿ, ಶೋಭಾ ಶೆಟ್ಟಿ, ಜೀವನ್ ಉಳ್ಳಾಲ್, ಸೂರಜ್ ಸಾಲ್ಯಾನ್, ಮೋಹನ್ ಕೊಪ್ಪಳ, ಚೇತನ್ ಕದ್ರಿ, ಸುಮತಿ ಹಂದೆ, ಉದಯ ಆಳ್ವ ಸುರತ್ಕಲ್, ಯಶವಂತ್ ಶೆಟ್ಟಿ ಕೃಷ್ಣಾಪುರ, ಸುನಿಲ್ ಪಡುಬಿದ್ರಿ, ಕೃಷ್ಣ ಸುರತ್ಕಲ್, ರವೀಶ್ ಜೋಗಿ, ಯೋಗೀಶ್, ಅರುಣ್ ಶೆಟ್ಟಿ, ಸುಮಿತ್ರಾ ರೈ, ಕಿಶೋರ್ ಡಿ. ಶೆಟ್ಟಿ ನಟಿಸಿದ್ದಾರೆ. - ದಿನೇಶ್ ಇರಾ