Advertisement

ವಿಶ್ವ ಹುಲಿಹಬ್ಬಕ್ಕೆ 3ಡಿಯಲ್ಲಿ ಹುಲಿಚಿತ್ರ ರಚನೆ

07:30 AM Jul 28, 2018 | |

ಮೈಸೂರು: ಹುಲಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಹಾಗೂ ಹಲವು ಎನ್‌ಜಿಒಗಳು ವಿವಿಧ ಪ್ರಯತ್ನಗಳನ್ನು ಮಾಡುತ್ತಿದ್ದು, ಈ ಪ್ರಯತ್ನಕ್ಕೆ ಕಲಾವಿದನೊಬ್ಬ ವಿಶ್ವ ಹುಲಿ ದಿನಾಚರಣೆ ಅಂಗವಾಗಿ “ಅನಾಮಾರ್ಫಿಕ್‌ ಆರ್ಟ್‌’ ಮೂಲಕ ಸಾಥ್‌ ನೀಡಲಿದ್ದಾರೆ.

Advertisement

ಹುಲಿ ಸಂರಕ್ಷಣೆ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ನಂಜನಗೂಡು ಮೂಲದ ಹಾಗೂ ಕಾವಾ ಕಲಾವಿದ ಅನಿಲ್‌ಕುಮಾರ್‌ ಭೋಗಶೆಟ್ಟಿ (ಪೋಲೋ) ಈ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಪ್ರತಿ ವರ್ಷದ ವಿಶ್ವ ಹುಲಿ ದಿನಾಚರಣೆ ಸಂದರ್ಭದಲ್ಲಿ ಒಂದೊಂದು ರೀತಿಯಲ್ಲಿ ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಅನಿಲ್‌ಕುಮಾರ್‌, ಜು.29ರಂದು ಆಚರಿಸುವ ವಿಶ್ವ ಹುಲಿ ದಿನಾಚರಣೆಗೆ ಮೈಸೂರಿನ ಪ್ರಮುಖ ಪ್ರವಾಸಿ ತಾಣ ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾಮಾರ್ಫಿಕ್‌ ಆರ್ಟ್‌ನಲ್ಲಿ ಹುಲಿಯ ಚಿತ್ರವನ್ನು ರಚಿಸಿ, ಪ್ರದರ್ಶಿಸುವ ಮೂಲಕ ಹುಲಿ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next