ದೋಟಿಹಾಳ: ಶಾಲೆಯಲ್ಲಿ ಶಿಕ್ಷಕರೇ ಇಲ್ಲದ ಕಾರಣ ಬಾಲಕಿಯರು ಆನಿಕಲ್, ಕುಂಟಾಟ ಆಡಿದರೆ, ಬಾಲಕರು ಲಗೋರಿ, ಕ್ರಿಕೆಟ್ ಆಡಿ ಮನೆಗಳಿಗೆ ಹೋಗುವಂತ ಸ್ಥಿತಿ ಸಮೀಪದ ಮುದೇನೂರು ಪ್ರಾಥಮಿಕ ಶಾಲೆಯಲ್ಲಿ ಇದೆ.
ಹೌದು, ಸಮೀಪದ ಮುದೇನೂರ ಪ್ರಾಥಮಿಕ ಶಾಲೆ ಮೂರ್‍ನಾಲ್ಕು ವರ್ಷಗಳಿಂದ ಶಿಕ್ಷಕರ ಕೊರತೆ ಎದುರಿಸುತ್ತಿದೆ. ಇದರಿಂದಾಗಿ ಇಲ್ಲನ ಮಕಳ್ಳ ಶೈಕ್ಷಣಿಕ ಭವಿಷ್ಯಕ್ಕೆ ಮಂಕು ಕವಿದಿದೆ. ಸರ್ಕಾರ ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಶಾಲೆ ಹಾಜರಾತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆಯೇ ಹೊರತು ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಅನೇಕ ಗ್ರಾಮೀಣ ಭಾಗಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ನಮಗೆ ಬಿಸಿಯೂಟ ಬೇಡ, ಕ್ಷೀರಭಾಗ್ಯ ಬೇಡ ವಿಷಯವಾರು ಶಿಕ್ಷಕರನ್ನು ಕೊಡಿ. ಮೊದಲೇ ನಾವು ಹಳ್ಳಿಯ ವಿದ್ಯಾರ್ಥಿಗಳಾಗಿದ್ದರಿಂದ ಅಭ್ಯಾಸದಲ್ಲಿ ಹಿಂದುಳಿಯುತ್ತಿದ್ದೇವೆ. ಹೀಗಿರುವಾಗ ಶಾಲೆಯಲ್ಲಿ ವಿಷಯವಾರು ಶಿಕ್ಷಕರು ಇಲ್ಲದೇ ಅಭ್ಯಾಸಗಳು ನಡೆಯದಿದ್ದರೆ ಪರೀಕ್ಷೆಯಲ್ಲಿ ಏನು ಬರಿಯಬೇಕು. ಉತ್ತಮ ಶಿಕ್ಷಣ ಸಿಗದೇ ನಮ್ಮ ಮುಂದಿನ ಭವಿಷ್ಯಕ್ಕೆ ಹಾಳಾಗುತ್ತಿದೆ ಎಂಬ ಮಕ್ಕಳು ಅಳಲು ತೋಡಿಕೊಂಡರು. ಹೀಗಾಗಿ ಕೂಡಲೇ ವಾರದೊಳಗೆೆ ಶಿಕ್ಷಕರನ್ನು ನಿಯೋಜನೆ ಮಾಡಬೇಕು. ಇಲ್ಲದ್ದಿದರೇ ತರಗತಿ ಬಹಿಷ್ಕರಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದಾರೆ.
ಈ ಶಾಲೆಯು 1ರಿಂದ 8 ತರಗತಿವರೆಗೆ 170 ವಿದ್ಯಾರ್ಥಿಗಳಿದ್ದಾರೆ. ಸರಕಾರ ಆದೇಶದ ಪ್ರಕಾರ ಶಾಲೆಗೆ ಒಟ್ಟು 10 ಹುದ್ದೆಗಳು ಮುಂಜುರಾಗಿವೆ. ಇದರಲ್ಲಿ 7 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕೇವಲ ಶಾಲೆಯಲ್ಲಿ 3 ಜನ ಶಿಕ್ಷಕರು 170 ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಅನಿವಾರ್ಯತೆ ಇದೆ. ಮೂವರು ಶಿಕ್ಷಕರಲ್ಲಿ ಒಬ್ಬರು ದೈಹಿಕ ಶಿಕ್ಷಕರು, ಮುಖ್ಯೋಪಾ ಧ್ಯಾಯರು ಮತ್ತು ಇಂಗ್ಲಿಷ್ ಶಿಕ್ಷಕರಿದ್ದಾರೆ. ಈ ಶಿಕ್ಷಕರೇ 1ರಿಂದ 3ನೇ ತರಗತಿಯ ಮಕ್ಕಳು ಒಂದೇ ಕೊಠಡಿಯಲ್ಲಿದ್ದಾರೆ. ಶಿಕ್ಷಕರಿಲ್ಲದ ಕಾರಣ ಮಕ್ಕಳು ಆಟವಾಡಿ ಮನೆಗೆ ಹೋಗಬೇಕಾಗಿದೆ. ಇನ್ನೂ 4 ಮತ್ತು 5ನೇ ತರಗತಿಗಳಿಗೆ ದೈಹಿಕ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. 6 ಹಾಗೂ 7ನೇ ತರಗತಿಗೆ ಇಂಗ್ಲಿಷ್ ಮುತ್ತು ಮುಖ್ಯೋಪಾಧ್ಯಾಯರು ಪಾಠ ಮಾಡುತ್ತಿದ್ದಾರೆ. ಈ ಎಲ್ಲಾ ಶಿಕ್ಷಕರು ಬೆಳಗಿನಿಂದ ಶಾಲಾ ಅವಧಿ ಮುಗಿಯು ವವರೆಗೂ ಒಂದೇ ತರಗತಿಯಲ್ಲಿ ಪಾಠ ಮಾಡಬೇಕಾದ ಪರಿಸ್ಥಿತಿ ಅನಿವಾರ್ಯ ವಾಗಿದೆ. ಇದರ ಮಧ್ಯ ಕಚೇರಿ ಕೆಲಸ ಮಾಡಬೇಕು.
ಕಾರಣ 4-5 ವರ್ಷಗಳಿಂದ ಮಕ್ಕಳಿಗೆ ಅನುಗುಣವಾಗಿ ಶಿಕ್ಷಕರ ನೇಮಕಾತಿ ಮಾಡುತ್ತಿಲ್ಲ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗುತ್ತಿದೆ. ಕೂಡಲೇ ಸರಕಾರ ಶಾಲೆಗಳಿಗೆ ಶಿಕ್ಷಕನ್ನು ನೇಮಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು ಅನೂಕುಲ ಮಾಡಬೇಕು. 4-5 ವರ್ಷಗಳಿಂದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಕೂಡಲೇ ಅಧಿಕಾರಿಗಳು ಶಾಲೆಗೆ ಶಿಕ್ಷಕರು ನೇಮಿಸಬೇಕು. ಇಲ್ಲದಿದ್ದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮುದೇನೂರು ಗ್ರಾಮದ ಯುವಕರು ಎಚ್ಚರಿಕೆ ನೀಡಿದ್ದಾರೆ.
ಮುದೇನೂರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಕೊರತೆ ಇರುವ ಮಾಹಿತಿ ಇದೆ. ಸದಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ನಡೆಯಲ್ಲಿದೆ. ಈ ಶಾಲೆಗೆ 2-3 ಶಿಕ್ಷಕರು ಕೊಡುತ್ತೇವೆ ಹಾಗೂ ಬೇರೆ ಶಾಲೆಯಿಂದ ಈಗಾಗಲೇ ಒಬ್ಬ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ.
ಶಾಲೆಯಲ್ಲಿ ಶಿಕ್ಷಕ ಕೊರತೆ ಇದೆ. 170 ಮಕ್ಕಳಿಗೆ ಕೇವಲ ಮೂವರು ಶಿಕ್ಷಕರಿದ್ದೇವೆ. ಇಲ್ಲಿಯ ಮಕ್ಕಳು ವಿಧ್ಯಾವಂತರು. ಅದರೆ ಅವರಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಶಾಲೆಯ ಬಿಸಿಯೂಟ, ಸಭೆ ಮತ್ತು ಇನ್ನಿತರ ಕೆಲಸದ ಜೊತೆಗೆ ಮಕ್ಕಳಿಗೆ ಪಾಠ ಮಾಡುವುದು ತೊಂದರೆಯಾಗುತ್ತಿದೆ. ಸದ್ಯ ಬಿಜಕಲ್ ಗ್ರಾಮದಿಂದ ಒಬ್ಬ ಶಿಕ್ಷಕರನ್ನು ನಿಯೋಜನೆ ಮಾಡಿದ್ದಾರೆ. ಕಳೆದ ವರ್ಷ ಮೂವರು ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಈ ವರ್ಷವು ಮೂವರು ಅತಿಥಿ ಶಿಕ್ಷಕರನ್ನು ನೀಡುತ್ತಾರೆ
.•ಪುತ್ರಪ್ಪ, ಮುಖ್ಯೋಪಾಧ್ಯಯರು ಮುದೇನೂರ.
•ಮಲ್ಲಿಕಾರ್ಜುನ ಮೆದಿಕೇರಿ