ಮುಕ್ತ ಎಂದು ಘೋಷಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು.
Advertisement
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲ್ಪಟ್ಟ ಚಿತ್ತಾಪುರ ತಾಲೂಕಿನ ಸ್ವತ್ಛ ಭಾರತ ಮಿಷನ್ ಅಧಿಕಾರಿಗಳೊಂದಿಗೆ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ ಅವರು, 2012ರ ಬೇಸ್ ಲೈನ್ ಸಮೀಕ್ಷೆಯಪ್ರಕಾರ ಚಿತ್ತಾಪುರ ತಾಲೂಕಿನಲ್ಲಿ 31,488 ಕುಟುಂಬಗಳು ಶೌಚಾಲಯ ಹೊಂದಿರುವುದಿಲ್ಲ. ಚಿತ್ತಾಪುರ ತಾಲೂಕಿನಲ್ಲಿ ಸ್ವತ್ಛ ಭಾರತ ಮಿಷನ್ ಯೋಜನೆಯಡಿ 31,490 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲಾಗಿದೆ ಎಂದರು.
ತಾಲೂಕಿನ 22,346 ಶೌಚಾಲಯ ನಿರ್ಮಿಸುವ ಗುರಿಯ ಪೈಕಿ ಈಗಾಗಲೇ 20,285 ಶೌಚಾಲಯ ನಿರ್ಮಿಸಲಾಗಿದ್ದು, 26 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಈಗಾಗಲೇ 23 ಗ್ರಾಪಂಗಳಲ್ಲಿ ಶೇ.100ರಷ್ಟು ಶೌಚಾಲಯ ನಿರ್ಮಿಸುವ ಕಾರ್ಯ ಪೂರ್ಣಗೊಂಡಿದ್ದು, ಈ ಗ್ರಾಮಗಳನ್ನು ಸಹ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಬೇಕಾಗಿದೆ. ಸೇಡಂ ತಾಲೂಕಿನಾದ್ಯಂತ ಶೇ.91.22ರಷ್ಟು ಶೌಚಾಲಯ ನಿರ್ಮಿಸಲಾಗಿದೆ. ಇನ್ನುಳಿದ 1961 ಶೌಚಾಲಯಗಳನ್ನು ಆದಷ್ಟು ಬೇಗ ನಿರ್ಮಿಸುವ ಮೂಲಕ ಸೇಡಂ ತಾಲೂಕನ್ನು ಸಹ ಬಯಲು ಬಹಿರ್ದೆಸೆ ಮುಕ್ತಗೊಳಿಸಬೇಕೆಂದು ತಿಳಿಸಿದರು.
Related Articles
Advertisement
ಜೇವರ್ಗಿ ತಾಲೂಕಿನಲ್ಲಿ 35,055 ಶೌಚಾಲಯಗಳನ್ನು ನಿರ್ಮಿಸುವ ಗುರಿ ಇದ್ದು, ಈ ಪೈಕಿ 29,318 ಶೌಚಾಲಯ ನಿರ್ಮಿಸಲಾಗಿದೆ. ತಾಲೂಕಿನಲ್ಲಿ 23 ಗ್ರಾಪಂಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. 4 ಗ್ರಾಮ ಪಂಚಾಯಿತಿಗಳಲ್ಲಿ ಶೇ.100ರಷ್ಟು ಶೌಚಾಲಯ ನಿರ್ಮಾಣ ಪೂರ್ಣಗೊಂಡಿದೆ. ಆಳಂದ ತಾಲೂಕಿನಲ್ಲಿ 41,009 ಶೌಚಾಲಯ ನಿರ್ಮಿಸುವ ಗುರಿಯಿದ್ದು, 33,456 ಶೌಚಾಲಯ ನಿರ್ಮಿಸಲಾಗಿದೆ. ಆಳಂದ ತಾಲೂಕಿನ ಎಲ್ಲ ಅಧಿಕಾರಿಗಳು ಜನಪ್ರತಿನಿಧಿ ಗಳ ಸಹಕಾರದೊಂದಿಗೆ ತಾಲೂಕಿನಲ್ಲಿ ಉಳಿದ 7553 ಶೌಚಾಲಯಗಳನ್ನು ಸೆ.15ರೊಳಗಾಗಿ ನಿರ್ಮಿಸಲು ಪ್ರಯತ್ನಿಸಬೇಕು ಎಂದರು.
ಚಿತ್ತಾಪುರ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲು ಕಲಬುರಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಿದ ಯಾಗಾಪುರ ಗ್ರಾಪಂ ಪಿಡಿಒ ಬಸವರಾಜ ಪೂಜಾರಿ ಹಾಗೂ ಇನ್ನಿತರ ಎಲ್ಲ ಅಧಿಕಾರಿಗಳಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸ್ವತ್ಛ ಭಾರತ ಮಿಷನ್‌ನ ಜಿಲ್ಲಾ ಸಂಯೋಜಕಿ ಗುರುಬಾಯಿ ಎಸ್. ಪಾಟೀಲ, ಪಿಡಿಒಗಳು ಹಾಗೂ ಡಾಟಾ ಎಂಟ್ರಿ ಆಪರೇಟರಗಳು ಇದ್ದರು