ಕಾಬುಲ್: ಶನಿವಾರ ಅರ್ಧ ಗಂಟೆಯೊಳಗೆ ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿ ಮೂರು ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಮೊದಲು 12:11 ಕ್ಕೆ ಸುಮಾರಿಗೆ 6.1 ರ ತೀವ್ರತೆಯ ಭೂಕಂಪಗಳ ಸಂಭವಿಸಿದ್ದು ಅದಾದ ಬಳಿಕ 12:19 ಕ್ಕೆ 5.6 ತೀವ್ರತೆ ಸಂಭವಿಸಿದೆ ಇದಾದ ಬಳಿಕ 12:42 ಕ್ಕೆ 6.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪನದ ಕೇಂದ್ರಬಿಂದುವನ್ನು ಹೆರಾತ್ ನಗರದ ವಾಯುವ್ಯಕ್ಕೆ 40 ಕಿಲೋಮೀಟರ್ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ಹೇಳಲಾಗಿದೆ.
ಕಳೆದ ಮಂಗಳವಾರ ನೇಪಾಳದಲ್ಲಿ ಭೂಕಂಪನ ಸಂಭವಿಸಿದ್ದು ಇದಾದ ಬಳಿಕ ದೆಹಲಿ – ಎನ್‌ಸಿಆರ್ ಸುತ್ತ ಮುತ್ತಲ ಪ್ರದೇಶದಲ್ಲಿ ಕಂಪನದ ಅನುಭವವೂ ಆಗಿತ್ತು.
ಇದನ್ನೂ ಓದಿ: Bigg Boss: ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ ವಯಸ್ಕ ನಟಿ