Advertisement

Andhra Pradesh: ಪೆಟ್ರೋಲ್‌ ಟ್ಯಾಂಕ್‌ ಸ್ವಚ್ಛಗೊಳಿಸುವಾಗ ಜಾರಿಬಿದ್ದು ಮೂವರು ಮೃತ್ಯು

02:18 PM May 29, 2023 | Suhan S |

ಆಂಧ್ರ ಪ್ರದೇಶ: ಪೆಟ್ರೋಲ್‌ ಬಂಕ್‌ ನ ಟ್ಯಾಂಕ್‌ ಸ್ವಚ್ಛಗೊಳಿಸುವ ವೇಳೆ ಜಾರಿಬಿದ್ದು ಮೂವರು ಮೃತಪಟ್ಟಿರುವ ದಾರುಣ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

Advertisement

ಅನ್ನಮಯ್ಯ ಜಿಲ್ಲೆಯ ರಾಯಚೋಟಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೆಟ್ರೋಲ್‌ ಬಂಕ್‌ ನಲ್ಲಿ ಈ ದುರಂತ ನಡೆದಿದೆ.

ಭಾನುವಾರ (ಮೇ.28 ರಂದು) ಸಂಜೆ 5:40 ರ ಹೊತ್ತಿಗೆ ಶಿವ ಎನ್ನುವವರು ಪೆಟ್ರೋಲ್‌ ಟ್ಯಾಂಕ್‌ ಸ್ವಚ್ಛಗೊಳಿಸಲು ಇಳಿದಿದ್ದಾರೆ. ಈ ವೇಳೆ ಅವರು ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ. ಇದನ್ನು ನೋಡಿದ ಆನಂದ್‌ ಹಾಗೂ ರವಿ ಶಿವನನ್ನು ರಕ್ಷಣೆ ಮಾಡಲು ತೆರಳಿದ್ದಾರೆ. ಆದರೆ ಅವರಿಬ್ಬರು ಕೂಡ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಡಿವೈಡರ್’ಗೆ ಹೊಡದು ಗೂಡ್ಸ್ ಗಾಡಿಗೆ ಢಿಕ್ಕಿಯಾದ ಕಾರು: 7 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು!

ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ ಕಡಪ ಜಿಲ್ಲೆಯ ಮೂವರನ್ನು ರಾಯಚೋಟಿಗೆ ಕಳುಹಿಸಿದ್ದು, ಬಹಳ ದಿನಗಳಿಂದ ಬಳಕೆಯಲ್ಲಿಲ್ಲದ ಟ್ಯಾಂಕ್ ನ್ನು ಸ್ವಚ್ಛಗೊಳಿಸಲು ಪೆಟ್ರೋಲ್‌ ಟ್ಯಾಂಕ್‌ ಗುಂಡಿಗೆ ಇಳಿದಾಗ ಈ ಘಟನೆ ನಡೆದಿದೆ.

Advertisement

ಅಪಘಾತದ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಮೊದಲು ಒಬ್ಬರನ್ನು ಹೊರತೆಗೆದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಇನ್ನಿಬ್ಬರು ಟ್ಯಾಂಕ್‌ ಒಳಗೆಯೇ ಉಸಿರು ಚೆಲ್ಲಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next