Advertisement

ಚಾರ್ಜ್‌ಗೆ ಇಟ್ಟಿದ್ದ ಇ – ರಿಕ್ಷಾ ಬ್ಯಾಟರಿ ಸ್ಪೋಟ: ಒಂದೇ ಕುಟುಂಬದ ಮೂವರು ಮೃತ್ಯು

12:11 PM May 13, 2023 | Team Udayavani |

ಲಕ್ನೋ:  ಮನೆಯಲ್ಲಿರಿಸಿದ ಇ – ಆಟೋ ರಿಕ್ಷಾದ ಬ್ಯಾಟರಿ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಲಕ್ನೋದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಗುರುವಾರ ಮುಂಜಾನೆ 5 ಗಂಟೆಗೆ ಬಿಬಿಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಇ-ರಿಕ್ಷಾವೊಂದರ ಬ್ಯಾಟರಿಯು ಓವರ್‌ಚಾರ್ಜ್‌ನಿಂದ ಸ್ಫೋಟಗೊಂಡಿದೆ ಎಂದು ಪೂರ್ವ ಡಿಸಿಪಿ ಹಿರ್ದೇಶ್ ಕುಮಾರ್ ತಿಳಿಸಿದ್ದಾರೆ.

ಸ್ಫೋಟದ ಶಬ್ದವನ್ನು ಕೇಳಿ ಅಂಕಿತ್‌ ತನ್ನ ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಅಂಕಿತ್‌ ಅವರ ಪತ್ನಿ ರೇಣು ಮಗ ಕುಂಜ್, ಸೊಸೆ ರಿಯಾ ಸುಟ್ಟಗಾಯದಿಂದ ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ವೇಳೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next