ಸೂರತ್ : ಇಲ್ಲಿನ ವಾಣಿಜ್ಯ ಸಂಕೀರ್ಣದಲ್ಲಿ ನಿನ್ನೆ ಶುಕ್ರವಾರ ಸಂಭವಿಸಿದ್ದ ಭೀಕರ ಬೆಂಕಿ ಅವಘಡದಲ್ಲಿ ಮೃತ ಪಟ್ಟಿದ್ದ 20 ವಿದ್ಯಾರ್ಥಿಗಳ ಪೈಕಿ ಮೂವರು ಇಂದು ಶನಿವಾರ ಪ್ರಕಟಗೊಂಡಿರುವ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಉತ್ತೀರ್ಣರಾದವರೆಂದರ ಯಶೀ ಕೇವಾಡಿಯಾ, ಮಾನಸೀ ವರ್ಷಾಣಿ ಮತ್ತು ಹಸ್ತೀ ಸುರಾಣಿ ಎಂದು ತಿಳಿದುಬಂದಿದೆ.
ಮೃತರಲ್ಲಿ 16 ಮಂದಿ ಹುಡುಗಿಯರಿದ್ದು ಇವರಲ್ಲಿ ಅತೀ ಕಿರಿಯಳು 15 ವರ್ಷದವಳಾಗಿದ್ದು 22 ವರ್ಷದವಳು ಹಿರಿಯಳು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಅವಘಡದಲ್ಲಿ ಮೂರರಿಂದ ನಾಲ್ಕು ವರ್ಷದ ಮಗುವೊಂದು ಸುಟ್ಟಗಾಯಗಳಿಗೆ ಗುರಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ಸೂರತ್ ಪೊಲೀಸ್ ವಕ್ತಾರ ಪಿ ಎಲ್ ಚೌಧರಿ ತಿಳಿಸಿದ್ದಾರೆ.
ಪೊಲೀಸರು ಕೋಚಿಂಗ್ ಕ್ಲಾಸ್ ಮಾಲಕ ಭಾರ್ಗವ ಬುಟಾನಿಯನ್ನು ಬಂಧಿಸಿದ್ದು ತಲೆಮರೆಸಿಕೊಂಡಿರುವ ಕಟ್ಟಡದ ಮಾಲಕರಿಬ್ಬರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.