Advertisement

ಪಾಲಿ(ಗೆ)ಕೆ ಫೈಟ್ : ಇಂದು ಮೂರು ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಪ್ರಕಟ

08:08 AM Sep 06, 2021 | Team Udayavani |

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮೂರು ಮಹಾನಗರ ಪಾಲಿಕೆಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಬೆಳಗಾವಿ, ಕಲಬುರ್ಗಿ ಹಾಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಯಾರು ವಿಜಯ ಮಾಲೆ ಧರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭವಾಗಲಿದ್ದು, ಪಾಲಿಕೆಯ ಗದ್ದುಗೆ ಏರೋದ್ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ.

Advertisement

ಮಹಾನಗರ ಪಾಲಿಕೆಗಳ ವಿವರ

ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 58 ವಾರ್ಡ್​ಗಳಲ್ಲಿ 585 ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದರು. ಬಿಜೆಪಿ – 55, ಕಾಂಗ್ರೆಸ್ – 45, ಜೆಡಿಎಸ್ – 11, ಎಂಇಎಸ್ – 21, ಎಎಪಿ – 27, ಪ್ರಜಾಕೀಯ – 1, ಎಐಎಂಐ- 7, ಎಸ್​​ಡಿಪಿಐ- 1, ಪಕ್ಷೇತರಾಗಿ 217 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಹುಬ್ಬಳ್ಳಿ – ಧಾರವಾಡ

Advertisement

ಅವಳಿ ನಗರಗಳಾದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 82 ವಾರ್ಡ್​ಗಳಲ್ಲಿ 420 ಅಭ್ಯರ್ಥಿಗಳು ಚುನಾವಣೆಗೆ ನಿಂತಿದ್ದು, ಬಿಜೆಪಿ – 82, ಕಾಂಗ್ರೆಸ್ – 82, ಎಎಪಿ – 41, ಜೆಡಿಎಸ್ – 49, ಪ್ರಜಾಕೀಯ – 11, ಸಿ.ಪಿ.ಐ(ಎಂ) – 01, ಬಿಎಸ್​​ಪಿ – 07, ಕರ್ನಾಟಕ ರಾಷ್ಟ್ರ ಸಮಿತಿ – 04, ಎ.ಐ.ಎಂ.ಐ.ಎಂ – 12, ಎಸ್​​ಡಿಪಿಐ – 04, ಕರ್ನಾಟಕ ಶಿವಸೇನೆ – 04, ಕರ್ನಾಟಕ ಸೇವಾ ಪಾರ್ಟಿ – 01, ಹಾಗೂ 122 ಮಂದಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಕಲಬುರಗಿ

ಈ ಮಹಾನಗರ ಪಾಲಿಕೆಯಲ್ಲಿ  55 ವಾರ್ಡ್​ಗಳ ಪೈಕಿ 300 ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್-55, ಬಿಜೆಪಿ- 47, ಜೆಡಿಎಸ್- 46, ಆಮ್ ಆದ್ಮಿ – 26, ಬಿಎಸ್ ಪಿ- 6 ಹಾಗೂ 120 ಮಂದಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಈ ಮೂರು ಮಹಾ ನಗರ ಪಾಲಿಕೆಯ ಚುನಾವಣೆಯ ಮತ ಎಣಿಕೆ ಈಗಾಗಲೇ ಶುರುವಾಗಿದ್ದು, ಯಾವ ಪಕ್ಷವು ವಿಜಯ ಮಾಲೆಗೆ ಕೊರಳೊಡ್ಡತ್ತದೆ ಎಂಬುದು ಇಂದೇ ನಿರ್ಧಾರವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next