Advertisement

ಒಣತ್ಯಾಜ್ಯ ನಿರ್ವಹಣೆಗೆ ಇನ್ನೂ 3 ಎಂಆರ್‌ಎಫ್‌ ಘಟಕ

12:02 AM Jun 21, 2022 | Team Udayavani |

ಮಂಗಳೂರು: ಒಣ ತ್ಯಾಜ್ಯ ನಿರ್ವಹಣೆಗಾಗಿ ದಕ್ಷಿಣ ಕನ್ನಡಕ್ಕೆ ಇನ್ನೂ ಮೂರು ಮೆಟೀರಿಯಲ್‌ ರಿಕವರಿ ಫೆಸಿಲಿಟಿ (ಎಂಆರ್‌ಎಫ್‌) ಫಟಕಗಳು ಮಂಜೂರು ಗೊಂಡಿವೆ. ಬೆಳ್ತಂಗಡಿ ತಾಲೂಕಿನ ಉಜಿರೆ, ಪುತ್ತೂರಿನ ಕೆದಂಬಾಡಿ ಹಾಗೂ ಬಂಟ್ವಾಳದ ಶಂಭೂರಿನಲ್ಲಿ ಶೀಘ್ರದಲ್ಲೇ ನಿರ್ಮಾಣಗೊಳ್ಳಲಿವೆ.

Advertisement

ದ.ಕ.ದಲ್ಲಿ ಪೈಲಟ್‌ ಯೋಜನೆ ಯಾಗಿ ಎಡಪದವಿನಲ್ಲಿ ಈಗಾಗಲೇ ದಿನಕ್ಕೆ 10 ಟನ್‌ ಒಣಕಸ ನಿರ್ವ ಹಣೆಯ ಎಂಆರ್‌ಎಫ್‌ ಘಟಕ ಸ್ಥಾಪನೆ ಗೊಳ್ಳುತ್ತಿದ್ದು ಆಗಸ್ಟ್‌ ನಲ್ಲಿ ಕಾರ್ಯಾ ರಂಭ ಗೊಳ್ಳುವ ನಿರೀಕ್ಷೆ ಇದೆ.

ದಿನಕ್ಕೆ 5 ಟನ್‌ ಸಾಮರ್ಥ್ಯ :

ಹೊಸ ಘಟಕಗಳು ದಿನವೊಂದಕ್ಕೆ ತಲಾ 5 ಟನ್‌ ಒಣತ್ಯಾಜ್ಯ ನಿರ್ವಹಣೆ ಸಾಮರ್ಥ್ಯವನ್ನು ಹೊಂದಿವೆ. ಬೆಳ್ತಂಗಡಿ ತಾಲೂಕಿನಲ್ಲಿ 48 ಗ್ರಾ. ಪಂ.ಗಳು, ಪುತ್ತೂರು ತಾಲೂಕಿನ ಕೆದಂಬಾಡಿಯಲ್ಲಿ ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕುಗಳ ಒಟ್ಟು 69 ಗ್ರಾ.ಪಂ.ಗಳು ಹಾಗೂ ಬಂಟ್ವಾಳ ಮತ್ತು ಉಳ್ಳಾಲ ತಾಲೂಕಿನ ಒಟ್ಟು 56 ಗ್ರಾ.ಪಂ.ಗಳು ಎಂಆರ್‌ಎಫ್‌ ಅನುಷ್ಠಾನದಲ್ಲಿ ಒಳಗೊಳ್ಳಲಿದ್ದು ಬಹುತೇಕ ಗ್ರಾಮಗಳ ಒಣತ್ಯಾಜ್ಯ ನಿರ್ವಹಣೆಯಾಗಲಿವೆ. ಪ್ರತಿಯೊಂದು ಘಟಕದ ಅಂದಾಜು ವೆಚ್ಚ 1.95 ಕೋ.ರೂ. ಆಗಿದ್ದು ಇದರಲ್ಲಿ ತಲಾ 30 ಲಕ್ಷ ರೂ. ಗಳನ್ನು ಜಿ.ಪಂ.ನಿಂದ ನೀಡಲಾಗು ತ್ತದೆ. ಜನ ಸಂಖ್ಯೆಗೆ ಅನು ಗುಣವಾಗಿ ಗ್ರಾ.ಪಂ. ಗಳು ತಮ್ಮ ಮೊತ್ತವನ್ನು ನೀಡಬೇಕಾಗು ತ್ತದೆ. ಇದನ್ನು 15ನೇ ಹಣಕಾಸಿನ ಅನುದಾನದ ಕ್ರಿಯಾ ಯೋಜನೆ ತಯಾರಿ ಯಲ್ಲಿ ಎಂಆರ್‌ಎಫ್‌ ಘಟಕ ನಿರ್ಮಾಣಕ್ಕೆ ಗ್ರಾ.ಪಂ. ವಂತಿಗೆ ಎಂದು ಕಾದಿರಿಸಿ ಹೊಂದಿಸಿಕೊಳ್ಳಲಾಗುತ್ತದೆ.

ಉಜಿರೆ ಘಟಕದ ವೆಚ್ಚದಲ್ಲಿ 1.29 ಕೋ.ರೂ.ಗಳನ್ನು ಅನುಷ್ಠಾನದಲ್ಲಿ ಒಳಗೊಳ್ಳುವ ಗ್ರಾ.ಪಂ.ಗಳು ಭರಿಸ ಬೇಕಾಗಿದೆ. ಸ್ವತ್ಛಭಾರತ್‌ ಮಿಷನ್‌ನಲ್ಲಿ 16 ಲಕ್ಷ ರೂ., ತಾ.ಪಂ.ನಿಂದ 20 ಲಕ್ಷ ರೂ. ನೀಡಲಾಗುತ್ತದೆ. ಕೆದಂಬಾಡಿ ಘಟಕದ ಅಂದಾಜು ವೆಚ್ಚದಲ್ಲಿ 72 ಲಕ್ಷ ರೂ. ಮೊತ್ತವನ್ನು ಮೂರು ತಾಲೂಕುಗಳ ಅನುಷ್ಠಾನಕ್ಕೆ ಒಳಪಡುವ ಗ್ರಾ.ಪಂ.ಗಳು ಭರಿಸ ಬೇಕಾಗುತ್ತದೆ. ಉಳಿದಂತೆ ಸ್ವತ್ಛ ಭಾರತ್‌ ಮಿಷನ್‌ನಿಂದ 48 ಲಕ್ಷ ರೂ., ಮೂರು ತಾ.ಪಂ.ಗಳಿಂದ ತಲಾ  15 ಲಕ್ಷದಂತೆ 45 ಲಕ್ಷ ರೂ. ಭರಿಸ ಲಾಗುತ್ತದೆ. ಶಂಭೂರು ಘಟಕದ ಅಂದಾಜು ವೆಚ್ಚದಲ್ಲಿ 98 ಲಕ್ಷ ರೂ. ಗಳನ್ನು ಎರಡು ತಾಲೂಕು ಗಳ ಅನುಷ್ಠಾನಕ್ಕೆ ಒಳ ಪಡುವ ಗ್ರಾ.ಪಂ. ಗಳು, 32 ಲಕ್ಷ ರೂ.ಗಳನ್ನು ಸ್ವಚ್ಛ ಭಾರತ್‌ ಮಿಷನ್‌ ಹಾಗೂ ಬಂಟ್ವಾಳ  ತಾ.ಪಂ. 20 ಲಕ್ಷ ರೂ. ಹಾಗೂ ಉಳ್ಳಾಲ ತಾ.ಪಂ. 15 ಲಕ್ಷ ರೂ. ಸೇರಿದಂತೆ 35 ಲಕ್ಷ ರೂ.ಗಳನ್ನು ಭರಿಸಬೇಕಾಗುತ್ತದೆ. ದ.ಕ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅನುಷ್ಠಾನ ಇಲಾಖೆಯಾಗಿದ್ದು ಉಪವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಹಾಗೂ ಸಂಬಂಧಪಟ್ಟ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಅನುಷ್ಠಾನದ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ.

Advertisement

ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಸ್ವತ್ಛ ಸಂಕೀರ್ಣ ಘಟಕದಲ್ಲಿ ಒಣ ತ್ಯಾಜ್ಯವನ್ನು ಮಾನವ ಶ್ರಮದ ಮೂಲಕ 10ರಿಂದ 12 ವರ್ಗಗಳಾಗಿ ವಿಂಗಡಿಸಲಾಗುತ್ತಿದೆ. ಇದರಿಂದ ಸಾಕಷ್ಟು ಸಮಯ ವಿಳಂಬವಾಗುತ್ತಿದೆ ಹಾಗೂ ವಿಂಗಡಿಸಿದ ವಸ್ತುಗಳು ವ್ಯವಸ್ಥಿತವಾಗಿ ಮಾರಾಟವಾಗದೆ ಘಟಕಗಳಲ್ಲೇ ಉಳಿದು ಬಿಡುತ್ತಿವೆ. ಎಂಆರ್‌ಎಫ್‌ ಸೌಲಭ್ಯದಲ್ಲಿ ಯಾಂತ್ರಿಕವಾಗಿ ಇನ್ನೂ ಹೆಚ್ಚಿನ ವರ್ಗಗಳಾಗಿ ಒಣ ಕಸವನ್ನು ವಿಂಗಡಿಸಿ ಹೆಚ್ಚಿನ ತ್ಯಾಜ್ಯವನ್ನು ಮರುಬಳಕೆ ಮಾಡಲಾಗುತ್ತದೆ.

ತೆಂಕಎಡಪದವು ಎಂಆರ್‌ಎಫ್‌ ಘಟಕ :

ಮಂಗಳೂರು ತಾಲೂಕಿನ ತೆಂಕಎಡಪದವು ಬ್ರಿಂಡೇಲ್‌ನಲ್ಲಿ 2.50 ಕೋ.ರೂ. ವೆಚ್ಚದಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣದ ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ದಿನವೊಂದಕ್ಕೆ 10 ಟನ್‌ ಒಣ ತ್ಯಾಜ್ಯವನ್ನು ನಿರ್ವಹಿಸಬಹುದಾಗಿದೆ.

ದ.ಕ. ಜಿಲ್ಲೆಯ ಮೂರು ಕಡೆಗಳಲ್ಲಿ ಎಂಆರ್‌ಎಫ್‌ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದ್ದು ಪೂರಕ ಪ್ರಕ್ರಿಯೆಗಳು ನಡೆಯುತ್ತಿವೆ. ಅನುದಾನವನ್ನು ವಿವಿಧ ಮೂಲಗಳಿಂದ ಹೊಂದಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಎಡಪದವು ಎಂಆರ್‌ಎಫ್‌ ಘಟಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಹೊಸ ಮೂರು ಘಟಕಗಳ ಸ್ಥಾಪನೆಯಿಂದ ಒಟ್ಟು 4 ಎಂಆರ್‌ಎಫ್‌ ಘಟಕಗಳನ್ನು ಹೊಂದಿದಂತಾಗುತ್ತದೆ ಮತ್ತು ಒಣತ್ಯಾಜ್ಯ ನಿರ್ವಹಣೆ ಸುಗಮವಾಗಲಿದೆ.  –  ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ  

 

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next