ಚೆನ್ನೈ: ನಕಲಿ ನೋಟುಗಳನ್ನು ಬಳಸಿದ ಆರೋಪದ ಮೇಲೆ ಮೂವರು ಅಪ್ರಾಪ್ತ ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.
ಊರಿನ ದೇವಸ್ಥಾನದ ಜಾತ್ರೆಯಲ್ಲಿ 200 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಅಪ್ರಾಪ್ತ ಯುವಕರು ಬಳಸಿದ್ದಾರೆ.
ಜಾತ್ರೆಯಲ್ಲಿ ಜನಸಂದಣಿ ಹೆಚ್ಚಾಗಿರುವ ಅಂಗಡಿಗೆ ತೆರಳಿ ಮೂವರು ಐಸ್ ಕ್ರೀಮ್ ಹಾಗೂ ಇತರ ಆಹಾರವನ್ನು ಖರೀದಿಸಿದ್ದಾರೆ. ಯಾರಿಗೂ ಗೊತ್ತಾಗದಾಗೆ ನಕಲಿ 200 ನೋಟುಗಳನ್ನು ಕೊಟ್ಟು ವಾಪಾಸಾಗುತ್ತಿದ್ದರು.
ನಕಲಿ ನೋಟುಗಳು ಊರಿನ ನಾನಾ ಅಂಗಡಿಯಲ್ಲಿ ಪತ್ತೆಯಾಗಿದ್ದರಿಂದ ಕೆಲವರು ಈ ಬಗ್ಗೆ ಪೊಲೀಸರಿಗೆ ಹೇಳಿದ್ದಾರೆ. ಪೊಲೀಸರು ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮೂವರು ಅಪ್ರಾಪ್ತ ವಯಸ್ಸಿನ ಯುವಕರನ್ನು ಬಂಧಿಸಿದ್ದಾರೆ.
ತನಿಖೆ ನಡೆಸಿದಾಗ, ಮೂವರಲ್ಲಿ ಒಬ್ಬ ಯುವಕ ಆತನ ಸಂಬಂಧಿಕರೊಬ್ಬರ ಜೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ, ರಜೆಯ ವೇಳೆ ಯುವಕ 200 ರೂ.ಮುಖಬೆಲೆಯ ನಕಲಿ ನೋಟನ್ನು ಕಲರ್ ಫೋಟೋ ಕಾಪಿಯನ್ನಾಗಿ ಪ್ರಿಂಟ್ ಮಾಡುತ್ತಿದ್ದ. ಇದೇ ಹಣವನ್ನು ಮೂವರು ಜಾತ್ರೆಯ ವೇಳೆ ಬಳಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಪೊಲೀಸರು 32 ಸಾವಿರ ಮೌಲ್ಯದ 200 ರೂ.ನಕಲಿ ನೋಟುಗಳು ಸಮೇತ ಪ್ರಿಂಟ್ ಮಾಡುತ್ತಿದ್ದ ಪ್ರಿಂಟರ್ , ಕಂಪ್ಯೂಟರ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.