Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರು ನನ್ನ ತಂದೆಯ ಸ್ಥಾನದಲ್ಲಿ ನಿಂತು ನನ್ನ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಿ, ಮತ ಹಾಕಿಸಿದ್ದಾರೆ. ನನ್ನ ಪರ ಕೆಲಸ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. ವಿಶೇಷವಾಗಿ ಎಲ್ಲಾ ಕಾಂಗ್ರೆಸ್ ಮುಖಂಡರ ನಿವಾಸಗಳಿಗೆ ಒಂದೆರೆಡು ದಿನಗಳಲ್ಲಿ ಭೇಟಿ ನೀಡಿ ಧನ್ಯವಾದ ಹೇಳುವೆ ಎಂದು ತಿಳಿಸಿದರು.
Related Articles
Advertisement
ಅವಿವೇಕಿಯ ಆರೋಪ: ಮಂಜುಗೆ ಟಾಂಗ್
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಬಿಜೆಪಿ ಅಭ್ಯರ್ಥಿ ದೂರಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್ ರೇವಣ್ಣ ಅವರು, ಪ್ರಮಾಣ ಪತ್ರದಲ್ಲಿ ಸಮರ್ಪಕ ಮಾಹಿತಿ ನೀಡಿದ್ದೇನೆ. ಯಾವುದೋ ಒಂದು ಕಂಪನಿಯಲ್ಲಿ ಹೊಂದಿ ರುವ ಷೇರುಗಳ ಬಗ್ಗೆ ಪ್ರಮಾಣ ಪತ್ರದಲ್ಲಿ ಮಾಹಿತಿ ನೀಡಿಲ್ಲ ಎಂಬುದರಲ್ಲಿ ಹುರುಳಿಲ್ಲ. ನಾನು ಆ ಕಂಪನಿಯ ಪಾಲುದಾರಿಕೆಯಿಂದ ಹೊರ ಬಂದಿರುವ ಬಗ್ಗೆ ನಾಮಪತ್ರ ಸಲ್ಲಿಕೆಗೆ ಕೆಲ ದಿನಗಳ ಹಿಂದೆಯೇ ಎನ್‌ಒಸಿ ಪಡೆದಿದ್ದೇನೆ. ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ನನ್ನ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಹುಡುಕಲಾಗದೆ ಈಗ ಪ್ರಮಾಣ ಪತ್ರದಲ್ಲಿ ದೋಷವಿದೆ ಎಂದು ನನ್ನ ಎದುರಾಳಿಗಳು ಆರೋಪಿಸುತ್ತಿದ್ದಾರೆ. ಅವರು ನ್ಯಾಯಾಲಯಕ್ಕೆ ಹೋಗಿ ಪ್ರಶ್ನಿಸಲಿ. ನಾನು ನ್ಯಾಯಾಲಯದಲ್ಲಿ ದಾಖಲೆ ಸಹಿತ ಹೋರಾಟ ಮಾಡುವೆ. ನ್ಯಾಯಾಲಯದ ತೀರ್ಪಿಗೆ ತಲೆ ಬಾಗುವೆ ಎಂದ ಅವರು, ಅವಿವೇಕಿಗಳ ಆರೋಪಗಳಿಗೆಲ್ಲಾ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.