Advertisement
ಪೆನ್‌ಡ್ರೈವ್ ಹಂಚಿಕೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡ ಹಾಗೂ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್‌ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 3 ಕೋಟಿ ರೂ. ನೀಡಿ ಚೆನ್ನೈ ಕಂಪೆನಿಯೊಂದರಿಂದ ಪೆನ್‌ಡ್ರೈವ್ ಖರೀದಿಸಿದ್ದಾರೆ. ಬಳಿಕ ಮಲೇ ಷಿ ಯಾಕ್ಕೆ ಹೋಗಿ ಅಲ್ಲಿನ ಲ್ಯಾಬ್ ನಲ್ಲಿ ವೀಡಿಯೋ ಅಪ್‌ಲೋಡ್ ಮಾಡಲಾಗಿದೆ ಎಂದು ಆರೋಪಿಸಿದರು.
ಪ್ರಜ್ವಲ್ ವಿರುದ್ಧ ಕೇಳಿ ಬಂದಿರುವ ಅಶ್ಲೀಲ ವೀಡಿಯೋ ಪೆನ್‌ಡ್ರೈವ್ ಪ್ರಕರಣದಲ್ಲಿ ಇನ್ನೂ 6 ಮಂದಿ ಸಂತ್ರಸ್ತೆಯರನ್ನು ಎಸ್‌ಐಟಿ ಅಧಿಕಾರಿಗಳು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ದೂರು ನೀಡಿರುವ ಸಂತ್ರಸ್ತೆಯರ ಹೇಳಿಕೆಯನ್ನು ದಾಖಲಿಸುವ ಕಾರ್ಯ ನಡೆಯುತ್ತಿದೆ. ಈಗ ಇನ್ನೂ ಹಲವು ಮಂದಿ ಪ್ರಜ್ವಲ್ ವಿರುದ್ಧ ದೂರು ನೀಡಿದರೆ ಸಂಕಷ್ಟ ಎದುರಾಗಲಿದೆ ಎಂದು ತಿಳಿದು ಬಂದಿದೆ.
Related Articles
Advertisement