Advertisement

ಈರೋಡ್‌ ಸಮೀಪ ಲಾರಿಗೆ ವ್ಯಾನ್‌ ಢಿಕ್ಕಿ; 3 ಸಾವು, ಐವರಿಗೆ ಗಾಯ

07:31 PM Mar 21, 2017 | Team Udayavani |

ಈರೋಡ್‌ : ಇಟ್ಟಿಗೆ ತುಂಬಿದ್ದ ಲಾರಿಗೆ ವ್ಯಾನೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮಹಿಳೆಯರು ಸೇರಿದಂತೆ ವ್ಯಾನಿನಲ್ಲಿದ್ದ ಮೂವರು ಮೃತಪಟ್ಟು ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆಗೆ ಇಲ್ಲಿಗೆ ಸಮೀಪದ ಪೆರುಂದುರೈ ಎಂಬಲ್ಲಿ ನಡೆದಿದೆ.

Advertisement

ಎದುರು ಗಡೆ ಸಾಗುತ್ತಿದ್ದ, ಇಟ್ಟಿಗೆ ತುಂಬಿದ್ದ ಲಾರಿಯನ್ನು ಹಿಂದಿಕ್ಕಲು ವ್ಯಾನ್‌ ಚಾಲಕ ಯತ್ನಿಸಿದಾಗ ಅದು ಸಾಧ್ಯವಾಗದೆ ನಿಯಂತ್ರಣ ತಪ್ಪಿದ ಕಾರಣ ವ್ಯಾನ್‌, ಲಾರಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ವ್ಯಾನ್‌ ಚಾಲಕನ ಪತ್ನಿ ಹಾಗೂ 70ರ ವೃದ್ಧ ಮಹಿಳೆ ಮೃತ ಪಟ್ಟಿದ್ದು ಗಾಯಾಳುಗಳಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳ ಸ್ಥಿತಿ ಗಂಭೀರವಿದೆ. ವ್ಯಾನಿನಲ್ಲಿ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next