Advertisement

ಜಮ್ಮು ಕಾಶ್ಮೀರ ರಸ್ತೆ ಅಪಘಾತ: ಮೂವರ ಸಾವು, ನಾಲ್ವರಿಗೆ ಗಾಯ

05:55 PM Mar 27, 2018 | Team Udayavani |

ಜಮ್ಮು : ಜಮ್ಮು ಕಾಶ್ಮೀರದ ದೋಡಾ ಮತ್ತು ರಾಜೋರಿ ಜಿಲ್ಲೆಗಳಲ್ಲಿನ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟ ಇತರ ನಾಲ್ವರು ಗಾಯಗೊಂಡಿರುವುದಾಗಿ ವರದಿಯಾಗಿದೆ. 

Advertisement

ದೋಡಾದ ಫಾಗ್‌ಸೂ ಎಂಬಲ್ಲಿ ವಾಹನವೊಂದು ಸ್ಕಿಡ್‌ ಆಗಿ ರಸ್ತೆಯಿಂದ ಜಾರಿ ಆಳದ ಕಮರಿಗೆ ಉರುಳಿ ಬಿದ್ದ ಅವಘಡದಲ್ಲಿ ಓರ್ವ ಮಹಿಳೆಯ ಸಹಿತ ಇಬ್ಬರು ಮೃತಪಟ್ಟರು; ನಾಲ್ವರು ಗಾಯಗೊಂಡರು. 

ರಾಜೋರಿ ಜಿಲ್ಲೆಯ ಮಂಜಕೋಟ್‌ ಪಟ್ಟಿಯಲ್ಲಿ 18ರ ಹರೆಯದ ಯುವಕನೋರ್ವ ಬಸ್ಸಿನಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ಅನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next