Advertisement

ಶೇ.3ರಷ್ಟು ವಿಚ್ಚೇದನಗಳಿಗೆ ಮುಂಬೈ ಟ್ರಾಫಿಕ್ ಜಾಮ್ ಕಾರಣ: ಅಮೃತಾ ಫಡ್ನವೀಸ್

03:51 PM Feb 05, 2022 | Team Udayavani |

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಶೇ.3ರಷ್ಟು ವಿವಾಹ ವಿಚ್ಚೇದನಗಳಿಗೆ ಟ್ರಾಫಿಕ್ ಜಾಮ್ ಕಾರಣ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅಮೃತಾ ಫಡ್ನವೀಸ್, ಮುಂಬೈ ನಗರದ ರಸ್ತೆಗಳ ಪರಿಸ್ಥತಿಯ ಬಗ್ಗೆ ಹೇಳಿದರು. ಈ ವೇಳೆ ಮುಂಬೈ ನಗರದಲ್ಲಿ ಶೇ.3ರಷ್ಟು ವಿವಾಹ ವಿಚ್ಚೇದನಗಳಿಗೆ ಟ್ರಾಫಿಕ್ ಸಮಸ್ಯೆಯೇ ಕಾರಣವಾಗಿದೆ ಎಂದು ಹೇಳಿದರು.

ಮುಂಬೈನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯ ಕಾರಣದಿಂದಲೇ ಶೇ.3ರಷ್ಟು ವಿವಾಹ ವಿಚ್ಚೇದನಗಳು ನಡೆಯುತ್ತಿದೆ. ಟ್ರಾಫಿಕ್ ನಿಂದಾಗಿ ಜನರು ಮನೆಗೆ ಸರಿಯಾದ ಸಮಯದಲ್ಲಿ ತಲುಪುತ್ತಿಲ್ಲ. ಕುಟುಂಬಕ್ಕೆ ಸಮಯ ನೀಡಲಾಗುತ್ತಿಲ್ಲ ಎಂದು ಅಮೃತಾ ಫಡ್ನವೀಸ್ ಹೇಳಿದರು.

ಇದನ್ನೂ ಓದಿ:ಕೋಮುವಾದಿಗಳು ಷಡ್ಯಂತ್ರ ಮಾಡುತ್ತಿದ್ದಾರೆ: ಹಿಜಾಜ್ ವಿಚಾರಕ್ಕೆ ಸಲೀಂ ಅಹ್ಮದ್

ಅಮೃತಾ ಫಡ್ನವೀಸ್ ಹೇಳಿಕೆಗೆ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಹಲವರು ವ್ಯಂಗ್ಯವಾಡಿದ್ದಾರೆ.

Advertisement

‘ಇಂದಿನ ಅತ್ಯುತ್ತಮ ಹೇಳಿಕೆಯ ಪ್ರಶಸ್ತಿ ಇದಕ್ಕೆ ನೀಡಬೇಕು (ವ್ಯಂಗ್ಯ), ದಯವಿಟ್ಟು ಬ್ರೇಕ್ ಮೇಲೆ ಮನಸ್ಸು ಮಾಡುವ ಬದಲು ರಜೆಯ ವಿರಾಮ ತೆಗೆದುಕೊಳ್ಳಿ. ಬೆಂಗಳೂರಿಗರೇ ಈ ಹೇಳಿಕೆಯನ್ನು ಓದುವುದರಿಂದ ದೂರವಿರಿ. ನಿಮ್ಮ ಮದುವೆ ಸಂಬಂಧಗಳಿಗೆ ಮಾರಣಾಂತಿಕವಾಗಿ ಪರಿಣಮಿಸಬಹುದು” ಎಂದು ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next