Advertisement

ಸಿಎಂ ನಿಧಿಗೆ 3 ಕೋಟಿ ರೂ.

03:03 PM Apr 10, 2020 | Suhan S |

ದೇವನಹಳ್ಳಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ವತಿಯಿಂದ ಮುಖ್ಯಮಂತ್ರಿ ಕೋವಿಡ್ 19 ಪರಿಹಾರ ನಿಧಿಗೆ 3 ಕೋಟಿ ರೂ.ಗಳ ಚೆಕ್‌ ಅನ್ನು ಬೆಂಗಳೂರಿನ ಕಚೇರಿಯಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ರವಿ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ವಿ. ಸಣ್ಣಪ್ಪಯ್ಯ ಹಸ್ತಾಂತರಿಸಿದರು.

Advertisement

ಪ್ರಾಧಿಕಾರದ ಅಧ್ಯಕ್ಷ ರವಿ ಚೆಕ್‌ ವಿತರಿಸಿ ಮಾತನಾಡಿ, ಕೋವಿಡ್ 19  ಸೋಂಕು ರಾಜ್ಯದಲ್ಲಿ ಪತ್ತೆಯಾದ ನಂತರ ಲಾಕ್‌ ಡೌನ್‌ನಿಂದ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಅಗತ್ಯ ಸೇವೆಗಾಗಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಪ್ರಾಧಿಕಾರ ವತಿಯಿಂದ ಸಿಎಂ ನಿಧಿಗೆ 03 ಕೋಟಿ ರೂ. ನೀಡಲಾಗಿದೆ. ಸರ್ಕಾರ ಸಂಕಷ್ಟದಲ್ಲಿದ್ದರೂ ಕೋವಿಡ್ 19  ನಿಗ್ರಹಕ್ಕೆ ಕಠಿಣವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಶ್ಲಾಘ ನೀಯ. ಸರ್ಕಾರದ ಆದೇಶ ಕಟ್ಟುನಿ ಟ್ಟಾಗಿ ಪಾಲಿಸಬೇಕು ಎಂದರು. ಸಿಎಂರಾಜಕೀಯ ಕಾರ್ಯದರ್ಶಿ ಎಸ್‌.ಆರ್‌. ವಿಶ್ವನಾಥ್‌, ಡೀಸಿ  ರವೀಂದ್ರ, ಉಪ ನಿರ್ದೇಶಕ ಮಂಜುನಾಥ್‌ ವ್ಯವಸ್ಥಾಪಕ ನವೀನ್‌ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next