Advertisement

ಬೀದರ್ ಜಿಲ್ಲೆಯಲ್ಲಿ ಸೋಂಕಿಗೆ ಮತ್ತೆ 3 ಬಲಿ ; 57ಕ್ಕೇರಿದ ಸಾವಿನ ಸಂಖ್ಯೆ

08:01 PM Jul 19, 2020 | Hari Prasad |

ಬೀದರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಮರಣ ಮೃದಂಗ ಮುಂದುವರೆದಿದೆ.

Advertisement

ರವಿವಾರ ಮತ್ತೆ ಮೂವರು ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಪಾಸಿಟಿವ್ ಸಂಖ್ಯೆಯೂ ಹೆಚ್ಚುತ್ತಿದ್ದು, 45 ಜನ ಹೊಸಬರಲ್ಲಿ ವೈರಾಣು ಪತ್ತೆಯಾಗಿದೆ.

ಸೋಂಕಿನಿಂದ ಸಾವನ್ನಪ್ಪಿರುವ ಮೂವರಲ್ಲಿ ಬೀದರ ನಗರದ ಮಾಂಗರವಾಡಿ ಗಲ್ಲಿ ಮತ್ತು ಓಲ್ಡ್ ಸಿಟಿಯ ಮನಿಯಾರ್ ತಾಲೀಂ ಬಡಾವಣೆಯ ತಲಾ ಒಬ್ಬರು ಹಾಗೂ ಬೀದರ ತಾಲೂಕಿನ ಜಮೀಸ್ತಾನಪುರ ಗ್ರಾಮದ ಒಬ್ಬರು ಸೇರಿದ್ದಾರೆ.

60 ವರ್ಷದ ವ್ಯಕ್ತಿ (ಪಿ-ಬಿಡಿಆರ್ 1370) ಉಸಿರಾಟದ ತೊಂದರೆ, 70 ವರ್ಷದ ಮಹಿಳೆ (ಪಿ-ಬಿಡಿಆರ್ 1371) ಉಸಿರಾಟ ಮತ್ತು ಶಕ್ತಿ ಹೀನತೆ ಹಾಗೂ ೫೨ ವರ್ಷದ ವ್ಯಕ್ತಿ (ಪಿ -ಬಿಡಿಆರ್ 1321) ಉಸಿರಾಟದ ತೊಂದರೆ ಹಿನ್ನಲೆ ಬ್ರಿಮ್ಸ್‌ಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಸಾವನನ್ನಪ್ಪಿದ್ದಾರೆ, ಬಿಪಿ, ಶುಗರ್‌ನಿಂದ ಬಳಲುತ್ತಿದ್ದ ಇವರಲ್ಲಿ ಸೋಂಕು ದೃಢಪಟ್ಟಿದೆ.

ರವಿವಾರ ಪತ್ತೆಯಾಗಿರುವ 45 ಹೊಸ ಕೇಸ್‌ಗಳಲ್ಲಿ ಬೀದರ ನಗರ ಹಾಗೂ ತಾಲೂಕಿನ 21 ಜನ ಸೇರಿದ್ದರೆ ಬಸವಕಲ್ಯಾಣ ತಾಲೂಕು 7, ಹುಮನಾಬಾದ ತಾಲೂಕು 13 ಮತ್ತು ಭಾಲ್ಕಿ ತಾಲೂಕು 3 ಮತ್ತು ಕಮಲನಗರ ತಾಲೂಕಿನಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

Advertisement

ಬೀದರ ನಗರ 3, ಹಾರೂರಗೇರಿ 1, ಬಸವನಗರ 1, ಜನವಾಡಾ 1, ಚೌಬಾರಾ 1, ಬ್ರಿಮ್ಸ್ ಆಸ್ಪತ್ರೆ 2, ಪತ್ತೆದರ್ವಾಜಾ ಶಿವಪುರ ಕಾಲೊನಿ 1, ಮಂಗಲಪೇಟ 1, ವಿದ್ಯಾನಗರ ಕಾಲೊನಿ 5, ರಾಂಪೂರೆ ಕಾಲೊನಿ 1, ದೀನ್ ದಯಾಳ್ ನಗರ 1, ಪನ್ಸಾಲ್ ತಾಲೀಂ 1, ಮನಿಯಾರ್ ತಾಲೀಂ 1 ಹಾಗೂ ನಾವದಗೇರಿ 1 ಪ್ರಕರಣಗಳಿವೆ.

ಹುಮನಾಬಾದ್ ಪಟ್ಟಣದ ನೂರ್ ಖಾ ಅಖಾಡಾದ 11, ಪಿಡಬ್ಲ್ಯೂಡಿ ಕ್ವಾರ್ಟರ್ಸ್ 1, ಪೊಲೀಸ್ ಕ್ವಾಟರ್ಸ್ 1 ಸೇರಿ 13, ಬಸವಕಲ್ಯಾಣ ತಾಲೂಕಿನ ನಾರಾಯಣಪುರ 1, ಶಾಪುರ ಗಲ್ಲಿ 1, ರಾಜೋ 1, ಬಸವಕಲ್ಯಾಣ ನಗರದ 3, ಕಾಳಿ ಗಲ್ಲಿಯ 1 ಸೇರಿ ಒಟ್ಟು 7, ಭಾಲ್ಕಿ ತಾಲೂಕಿನ ರುದನೂರು 1, ಕುಗ್ಲಿ 1, ನಾವದಗಿ 1 ಸೇರಿ 3, ಕಮಲನಗರ ತಾಲೂಕಿನ ಸಂಗಮ ಗ್ರಾಮದಲ್ಲಿ 1 ಕೇಸ್ ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 1378ಕ್ಕೆ ಏರಿಕೆಯಾಗಿದೆ. ರವಿವಾರ 21 ಜನ ಸೇರಿ 740 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 579 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 45963 ಜನರು ಪರೀಕ್ಷೆಗೆ ಒಳಪಟ್ಟಿದ್ದು, 43581 ಮಂದಿಯದ್ದು ನೆಗೆಟಿವ್ ಬಂದಿವೆ. ಜಿಲ್ಲೆಯ ಇನ್ನೂ 1004 ಜನರ ವರದಿ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next