Advertisement

ಜಿಲ್ಲೆಯಲ್ಲಿ ಮತ್ತೆ 3 ಕೋವಿಡ್‌ 19 ಪ್ರಕರಣ ಪತ್ತೆ!

07:12 AM May 31, 2020 | Lakshmi GovindaRaj |

ನೆಲಮಂಗಲ/ಆನೇಕಲ್‌: ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ 15ಕ್ಕೇರಿದೆ. ಶನಿವಾರ ಆನೇಕಲ್‌ನಲ್ಲಿ 2 ಹಾಗೂ ನೆಲಮಂಗಲ ದಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ. ಈವರೆಗೂ ಸೋಂಕಿನಿಂದ ಒಬ್ಬ ಮಹಿಳೆ ಮೃತಪಟ್ಟಿದ್ದರೆ, 6 ಸೋಂಕಿತರು ಚೇತರಿಸಿಕೊಂಡಿ ದ್ದಾರೆ. 8 ಪ್ರಕರಣಗಳ ಸಕ್ರಿಯವಾಗಿವೆ. ಸದ್ಯ ತಾಲೂಕಿನ 18 ವರ್ಷದ ಯುವಕನಿಗೆ ಸೋಂಕು ತಗುಲಿದ್ದು ಆತನ ಪ್ರಯಾಣದ ಮಾಹಿತಿ ಕಲೆಹಾಕಲಾಗುತ್ತಿದೆ.

Advertisement

ಈತ ಬಾಣಸವಾಡಿಯ ಚಿಕ್ಕಮ್ಮನ ಮನೆಗೆ 20 ದಿನಗಳ ಹಿಂದೆ ಬೆಂಗಳೂರಿನ ಮಲ್ಲತಹಳ್ಳಿಯಿಂದ ಬಂದಿದ್ದ. ಸೋಂಕಿತ ಯುವಕನಿಗೆ ವಿಕ್ಟೋರಿ ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದ 5 ಜನರನ್ನು ತಾಲೂಕು ಸರಕಾರಿ  ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಗೆ ಒಳಪಡಿಸಲಾಗಿದೆ. ದ್ವಿತೀಯ ಸಂಪರ್ಕಿತರ ನ್ನು ಪತ್ತೆ ಹಚ್ಚಲಾಗುತಿದೆ. ಮಹಿಳೆ ನಂತರ ತಾಲೂಕಿನಲ್ಲಿ 2ನೇ ಪ್ರಕರಣವಾಗಿದ್ದು, ಜನರಲ್ಲಿ ಆತಂಕ ಎದುರಾಗಿದೆ.

ಬಾಣಸವಾಡಿ ಗ್ರಾಮ ಸೀಲ್‌ಡೌನ್‌: ಜಿಲ್ಲೆಯ ಗಡಿ ಗ್ರಾಮ ಬಾಣಸವಾಡಿಯಲ್ಲಿ 200 ಮನೆಗಳಿದ್ದು, ತಹಶೀಲ್ದಾರ್‌ ನೇತೃತ್ವದಲ್ಲಿ ಔಷಧಿ ಸಿಂಪಡಣೆ ಮಾಡಿ ಗ್ರಾಮ ಸೀಲ್‌ ಡೌನ್‌ ಮಾಡಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಸೋಲದೇವನಹಳ್ಳಿ ಗ್ರಾಪಂಗೆ ವಹಿಸಲಾಗಿದ್ದು, ನಿಗಾಕ್ಕೆ ಅಧಿಕಾರಿಗಳ ತಂಡ ರಚಿಸಲಾಗಿದೆ.

ಕಂಟಕವಾದ ಹೊರ ಜಿಲ್ಲೆಗಳ ಸಂಪರ್ಕ: ಗ್ರಾಮಾಂತರ ಜಿಲ್ಲೆ ನಾಲ್ಕು ಪ್ರಕರಣವಿದ್ದರೂ ಕೆಂಪುವಲಯಕ್ಕೆ ಹೊಳಪಟ್ಟಿತ್ತು. ನಂತರದ ದಿನಗಳಲ್ಲಿ ಹೊಸಕೋಟೆ,ದೊಡ್ಡಬಳ್ಳಾಪುರ, ದೇವನಹಳ್ಳಿ,ನೆಲಮಂಗಲದಲ್ಲಿ ತಬ್ಲಿ , ಮಹಾರಾಷ್ಟ,  ಬೆಂಗಳೂರಿನ ಲಿಂಕ್‌ನಿಂದ ದಿನೆ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗು  ತ್ತಿದ್ದು, ಹಳ್ಳಿಗಳ ಜನರಿಗೆ ನಡುಕ ಸೃಷ್ಟಿಸಿದೆ.

ಬಾಣಸವಾಡಿ ಗ್ರಾಮದಲ್ಲಿ ಚಿಕ್ಕಮ್ಮನ ಮನೆಗೆ ಬಂದಿದ್ದ 18 ವರ್ಷದ ಯುವಕನಿಗೆ ಕೋವಿಡ್‌ 19 ಪಾಸಿಟಿವ್‌ ಬಂದಿದ್ದು, ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಂಪರ್ಕಿತರನ್ನು ಕ್ವಾರಂಟೈನ್‌ಗೊಳಿಸಲಾಗಿದೆ. ಗ್ರಾಮವನ್ನು  ಸೀಲ್‌ಡೌನ್‌ ಮಾಡಲಾಗಿದೆ.
-ಶ್ರೀನಿವಾಸ್‌, ತಹಶೀಲ್ದಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next