Advertisement

3.90 ಕೋ.ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ

12:11 AM Feb 29, 2020 | Sriram |

ಜಾಡಿ: ಡಾಮರು ಕಾಣದೆ ಸಂಚಾರಕ್ಕೆ ತೊಡಕಾಗಿದ್ದ ಹಟ್ಟಿಯಂಗಡಿ-ಜಾಡಿ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಇದೀಗ ಚಾಲನೆ ಸಿಕ್ಕಿದೆ. ಒಟ್ಟು 3.90 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಯವರ ಮುತುವರ್ಜಿಯಿಂದ ಈಡೇರುತ್ತಿದೆ. ಈ ರಸ್ತೆಯ ಡಾಮರಿಗೆ ಅವರು ಸರಕಾರ ಗಮನ ಸೆಳೆದಿದ್ದರು.

Advertisement

ಕೊಲ್ಲೂರಿಗೆ ಹತ್ತಿರ
ಹಟ್ಟಿಯಂಗಡಿಯಿಂದ ಕೊಲ್ಲೂರಿಗೆ ಸಾಗಲು ಈ ಮಾರ್ಗವು ಸನಿಹವಾಗಿದ್ದು ಯಾತ್ರಿಕರಿಗೆ 5 ಕಿ.ಮೀ.ನಷ್ಟು ಕಡಿಮೆಯಾಗಲಿದೆ. ಈ ಮಾರ್ಗದಲ್ಲಿ ಭಾರೀ ಹೊಂಡ ಗಳಿದ್ದು ಈಗಾಗಲೇ ಪತ್ರಿಕೆ ವರದಿ ಮೂಲಕ ಗಮನಸೆಳೆದಿತ್ತು.

ಕಿರು ಸೇತುವೆ ಬದಲಾವಣೆ ಅಗತ್ಯ
ಜಾಡಿ ಬಳಿ ನಿರ್ಮಿಸಲಾಗಿರುವ ಕಿರು ಸೇತುವೆಯ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದ್ದು. ಆಯ ತಪ್ಪಿದಲ್ಲಿ ಆಪಘಾತ ಕಟ್ಟಿಟ್ಟ ಬುತ್ತಿ. ಅದಕ್ಕೆ ಬದಲಾಗಿ ಸೇತುವೆಯನ್ನು ಉದ್ದಕ್ಕೆ ನಿರ್ಮಾಣಗೊಳಿಸಿದರೆ ಸಮಸ್ಯೆ ಪರಿಹಾರ ಅಗಬಹುದು. ಇದರೊಂದಿಗೆ ಒಳಚರಂಡಿ ವ್ಯವಸ್ಥೆಯನ್ನು ಕೂಡ ಮಾಡಬೇಕೆನ್ನುವ ಬೇಡಿಕೆ ಸಾರ್ವಜನಿಕರದ್ದಾಗಿದೆ.

ಬೇಡಿಕೆಗೆ ಸ್ಪಂದನೆ
ಗ್ರಾಮೀಣ ಜನರ ಬೇಡಿಕೆಗೆ ಶಾಸಕರು ಸೂಕ್ತವಾಗಿ ಸ್ಪಂದಿಸಿದ್ದಾರೆ. ಕಾಮಗಾರಿ ಶೀಘ್ರ ಮುಗಿಸುವಲ್ಲಿ ಗುತ್ತಿಗೆದಾರರು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
-ಸುರೇಂದ್ರ,ಗ್ರಾಮಸ್ಥರು

ಅನುದಾನ ಬಿಡುಗಡೆ
ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಟ್ಟಿಯಂಗಡಿ-ಜಾಡಿ ರಸ್ತೆ ಡಾಮರಿಗೆ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಕೂಡಲೇ ಮುಗಿಸಿ ಜನರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುವುದು.
-ಬಿ.ಎಂ.ಸುಕುಮಾರ ಶೆಟ್ಟಿ,ಶಾಸಕರು, ಬೈಂದೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next