Advertisement

Online: 3.65 ಲಕ್ಷ ರೂ. ಆನ್‌ಲೈನ್‌ ವಂಚನೆ

12:15 AM Sep 07, 2023 | Team Udayavani |

ಉಡುಪಿ: ಒಎಲ್‌ಎಕ್ಸ್‌ನಲ್ಲಿ ಮನೆ ಬಾಡಿಗೆ ಪಡೆಯುವುದಾಗಿ ನಂಬಿಸಿದ ವ್ಯಕ್ತಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಬ್ರಹ್ಮಗಿರಿಯ ಸತೀಶ್‌ ಭದ್ರ ಶ್ರೀಯಾನ್‌ ಅವರು ತನ್ನ ಮನೆ ಬಾಡಿಗೆಗೆ ಇದೆ ಎಂದು ಒಎಲ್‌ಎಕ್ಸ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಸೆ. 1ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಬಾಡಿಗೆ ಮನೆ ಬಗ್ಗೆ ವಿಚಾರಿಸಿ ತಾನು ಬರುವುದಾಗಿ ತಿಳಿಸಿದ್ದ.

Advertisement

ಸತೀಶ್‌ ಅವರಲ್ಲಿ ಆನ್‌ಲೈನ್‌ ಬ್ಯಾಂಕಿಂಗ್‌ ನಿರ್ವಹಣೆ ಮಾಡಲು ತಿಳಿಸಿದ ವ್ಯಕ್ತಿ ಹಣ ವರ್ಗಾವಣೆ ಮಾಡುವುದಾಗಿ ನಂಬಿಸಿದ್ದ. ಅನಂತರ ಸತೀಶ್‌ ಅವರ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ ಒಟ್ಟು 3,65,776 ರೂ. ಹಣವನ್ನು ಆನ್‌ಲೈನ್‌ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next