Advertisement
2007ರಿಂದ ಪ್ರತಿ ವರ್ಷ ಗಗನಚುಕ್ಕಿ ಜಲಪಾತೋತ್ಸವ ನಡೆಯುತ್ತದೆ. ವಿವಿಧ ಮನರಂಜನಾತ್ಮಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಅಭಿವೃದ್ಧಿಬಗ್ಗೆ ಮಾತುಕತೆಗೆ ಮಾತ್ರ ಸೀಮಿತವಾಗುತ್ತಿತ್ತು. ಜಲಪಾತೋತ್ಸವ ಪ್ರಾರಂಭವಾಗಿ ಇಲ್ಲಿಗೆ 13 ವರ್ಷಗಳು ಕಳೆದಿವೆ. ಆದರೂ, ಗಗನಚುಕ್ಕಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಹೊಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅದು ಈಗ ಸಾಕಾರಗೊಳ್ಳುವ ಎಲ್ಲ ಲಕ್ಷಣಗಳುಕಂಡು ಬರುತ್ತಿದೆ.
Related Articles
Advertisement
ಪ್ರವಾಸಿಗರ ಸುರಕ್ಷತೆಗೆ ಆದ್ಯತೆ : ಗಗನಚುಕ್ಕಿ ಅಭಿವೃದ್ಧಿ ಯೋಜನೆಯಲ್ಲಿ ಪ್ರವಾಸಿಗರ ಸುರಕ್ಷತೆ ಹೆಚ್ಚು ಒತ್ತು ನೀಡಲಾಗಿದೆ. ಬರುವ ಪ್ರವಾಸಿಗರು ಯಾವುದೇ ತೊಂದರೆ ಇಲ್ಲದಂತೆ ಜಲಪಾತ ವೀಕ್ಷಿಸಿ ಸುರಕ್ಷಿತವಾಗಿ ತೆರಳಲು ಎಲ್ಲ ರೀತಿಯಕ್ರಮಗಳನ್ನುಕೈಗೊಳ್ಳಲಾಗುವುದು. ಇದೊಂದು ಬಹುದಿನಗಳಕನಸಾಗಿದ್ದು, ಅದು ಶೀಘ್ರದಲ್ಲಿಯೇ ಸಾಕಾರಗೊಳ್ಳಲಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಈಗಾಗಲೇ ಕಾಮಗಾರಿಗೆ ಬೇಕಾದ ಸಾಮಗ್ರಿಗಳನ್ನು ಸಾಗಿಸಲು ಶಿಂಷಾ ಚಾನಲ್ ಬಳಿಯ ಚಿಕ್ಕಮುತ್ತತ್ತಿಯ ರಸ್ತೆಯುದ್ದಕ್ಕೂಕಬ್ಬಿಣದ ತಡೆಗೋಡೆ ನಿರ್ಮಿಸಲಾಗಿದೆ ಎಂದು ಮಂಡ್ಯ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹರೀಶ್ ತಿಳಿಸಿದ್ದಾರೆ.
ಅಧಿಕಾರಿಗಳಿಂದ ಸ್ಥಳ ಪರಿಶೀಲನೆ : ಯೋಜನೆ ಕಾಮಗಾರಿ ಕೈಗೊಳ್ಳಲು ಅರಣ್ಯಾಧಿಕಾರಿ ರವಿಶಂಕರ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಹರೀಶ್ ಹಾಗೂಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿಭೇಟಿನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಈ ಯೋಜನೆ ಮುಗಿಯುವುದರೊಳಗೆ ಬರುವ ಪ್ರವಾಸಿಗರು ಉಳಿದುಕೊಳ್ಳಲು ಕೊಠಡಿಗಳ ನಿರ್ಮಾಣ, ಹೈಟೆಕ್ ಶೌಚಾಲಯ, ಉತ್ತಮ ರಸ್ತೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲು ಯೋಜನೆ ರೂಪಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.
–ಎಚ್.ಶಿವರಾಜು