Advertisement

ಬ್ಯಾಂಕ್‌ಗೆ 3-4 ಲಕ್ಷ ಕೋಟಿ ಕಪ್ಪು ಹಣ ಜಮೆ

03:45 AM Jan 11, 2017 | Team Udayavani |

ನವದೆಹಲಿ: ನೋಟು ಅಪನಗದೀಕರಣದ ಬಳಿಕ 3ರಿಂದ 4 ಲಕ್ಷ ಕೋಟಿ ರೂಪಾಯಿಯಷ್ಟು ಕಪ್ಪುಹಣ ಬ್ಯಾಂಕ್‌
ಖಾತೆಗಳಿಗೆ ಜಮೆ ಯಾಗಿರಬಹುದು ಎಂದು ಸರ್ಕಾರ ಅಂದಾಜಿಸಿದೆ.

Advertisement

3ರಿಂದ 4 ಲಕ್ಷ ಕೋಟಿ ರೂ.ನಷ್ಟು ತೆರಿಗೆ ವಂಚನೆಯಾದ ಹಣ 50 ದಿನಗಳ ಅವಧಿಯಲ್ಲಿ ಬ್ಯಾಂಕ್‌ ಖಾತೆಗಳಿಗೆ
ಹರಿದುಬಂದಿರಬಹುದು. ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

60 ಲಕ್ಷಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳಲ್ಲಿ ತಲಾ 2 ಲಕ್ಷ ರೂ.ಗೂ ಹೆಚ್ಚು ಹಣ ಹಾಕಲಾಗಿದೆ. ಇದರ ಮೊತ್ತ ಒಟ್ಟಾರೆ 7.34 ಲಕ್ಷ ಕೋಟಿ ರೂ.ಗಳಾಗಲಿವೆ. ಈಶಾನ್ಯ ರಾಜ್ಯಗಳಲ್ಲಿ 10,700 ಕೋಟಿ ರೂ. ಠೇವಣಿ ಮಾಡಲಾಗಿದೆ. ಇದರ ಜತೆಗೆ ಸಹಕಾರ ಬ್ಯಾಂಕ್‌ಗಳಲ್ಲಿನ 16 ಸಾವಿರ ಕೋಟಿ ರೂ. ಠೇವಣಿಯ ಮೇಲೂ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನ.8ರ ನಂತರ ನಿಷ್ಕ್ರಿಯ ಖಾತೆಗಳಿಗೂ 25 ಸಾವಿರ ಕೋಟಿ ರೂ. ಬಂದಿದೆ. 80 ಸಾವಿರ ಕೋಟಿ ರೂ.ನಷ್ಟು ಸಾಲ ತೀರಿಸಲಾಗಿದೆ. ಇದರ ಮೇಲೆ ಎಲ್ಲ ರೀತಿಯ ಕಣ್ಗಾವಲು ಇಡಲಾಗಿದೆ. ಅಚ್ಚರಿಯ ವಿಷಯವೆಂದರೆ, 2ರಿಂದ 2.5 ಲಕ್ಷ ರೂ. ಹಣದ ಒಟ್ಟಾರೆ 42 ಸಾವಿರ ಕೋಟಿ ರೂ. ಮೊತ್ತಕ್ಕೆ ಒಂದೇ ಮೊಬೈಲ್‌ ಸಂಖ್ಯೆ, ಪಾನ್‌ ಸಂಖ್ಯೆ, ವಿಳಾಸಗಳನ್ನು ನೀಡಲಾಗಿದೆ. ಸರ್ಕಾರದ ಬಳಿ ಈಗ ಸಾಕಷ್ಟು ದತ್ತಾಂಶಗಳು ಲಭ್ಯವಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next