Advertisement

ಅಂತರಿಕ್ಷ್ ಪ್ರಕರಣದಲ್ಲಿ 3.10 ಕೋಟಿ ರೂ. ಜಪ್ತಿ

01:17 AM Jul 20, 2019 | Team Udayavani |

ನವದೆಹಲಿ: ಅಂತರಿಕ್ಷ್ -ದೇವಾಸ್‌ ಒಪ್ಪಂದದಲ್ಲಿ ಹಣಕಾಸು ಅವ್ಯವಹಾರ ನಡೆದ ಪ್ರಕರಣದಲ್ಲಿ 3.10 ಕೋಟಿ ರೂ. ಅನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ. ಬೆಂಗಳೂರಿನ ಮಲ್ಲೇಶ್ವರದ ಐಸಿಐಸಿಐ ಬ್ಯಾಂಕ್‌ನಲ್ಲಿ ದೇವಾಸ್‌ ಮಲ್ಟಿಮೀಡಿಯಾ ಕಂಪನಿಯ ಖಾತೆಯಲ್ಲಿ ಈ ಹಣ ಇತ್ತು. ಇಸ್ರೋದ ಮಾಜಿ ಉದ್ಯೋಗಿಗಳು 2004ರಲ್ಲಿ ದೇವಾಸ್‌ ಸಂಸ್ಥೆಯನ್ನು ಸ್ಥಾಪಿಸಿದ್ದರು.

Advertisement

ಈ ಸಂಸ್ಥೆಯು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರ ಸರ್ಕಾರದ ಕಂಪನಿ ಅಂತರಿಕ್ಷ್ ಕಾರ್ಪೊರೇಶನ್‌ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಮಾಡಿಕೊಳ್ಳುವಾಗ ಸರ್ಕಾರಕ್ಕೆ ಸಂಸ್ಥೆಯು ನಕಲಿ ದಾಖಲೆಗಳನ್ನು ನೀಡಿತ್ತು. ಈ ದಾಖಲೆಯನ್ನು ಆಧರಿಸಿ ಸಂಸ್ಥೆಗೆ ಎಸ್‌-ಬ್ಯಾಂಡ್‌ ತರಂಗಾಂತರಗಳನ್ನು ಕಂಪನಿಗೆ ನೀಡಲಾಗಿತ್ತು. ಈ ಸಂಬಂಧ ಸಿಬಿಐ ದಾಖಲಿಸಿರುವ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next