Advertisement

3- 0 ಅಥವಾ 3-1 ರಿಂದ ಸರಣಿ ಗೆಲುವು: ಸೆಹವಾಗ್‌

10:05 AM Feb 23, 2017 | |

ಪುಣೆ: ಭಾರತೀಯ ತಂಡವು ಬಲಿಷ್ಠ ತಂಡವಾಗಿದ್ದು ಮುಂಬರುವ ಆಸ್ಟ್ರೇಲಿಯ ವಿರುದ್ಧದ ಸರಣಿಯನ್ನು 3-0 ಅಥವಾ 3-1 ಅಂತರದಿಂದ ಗೆಲ್ಲಲಿದೆ ಎಂದು ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹವಾಗ್‌ ತಿಳಿಸಿದ್ದಾರೆ.

Advertisement

ವೇಗ ಮತ್ತು ಸ್ಪಿನ್‌ ದಾಳಿಯ ಗುಣಮಟ್ಟ ಮತ್ತು ಬ್ಯಾಟಿಂಗ್‌ ಶಕ್ತಿಯನ್ನು ಗಮನಿಸಿದರೆ ಹಾಲಿ ತಂಡ ಶ್ರೇಷ್ಠ ತಂಡಗಳಲ್ಲಿ ಒಂದಾಗಿದೆ. ವಿದೇಶದಲ್ಲೂ ಟೆಸ್ಟ್‌ ಸರಣಿ ಗೆಲ್ಲುವ ಸಾಮರ್ಥ್ಯವನ್ನು ಈ ತಂಡ ಹೊಂದಿದೆ . ಈ ತಂಡ ಸದ್ಯ ಅಮೋಘವಾಗಿ ಕ್ರಿಕೆಟ್‌ ಆಡುತ್ತಿದೆ. ಕಳೆದ 9 ಟೆಸ್ಟ್‌ಗಳಲ್ಲಿ ತಂಡ 8ನ್ನು ಗೆದ್ದಿದೆ. ಇದೊಂದು ಬಲುದೊಡ್ಡ ಸಾಧನೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next