Advertisement

ಚೀನದಲ್ಲಿ 2ನೇ ಅಲೆ: ಕುಸಿದ ವ್ಯಾಪಾರ

11:24 AM Jun 25, 2020 | mahesh |

ಬೀಜಿಂಗ್‌: ಚೀನದಲ್ಲಿ ಕೋವಿಡ್ ಸೋಂಕು ಮತ್ತೆ ಮರುಕಳಿಸಿರುವ ಕಾರಣ ಅಲ್ಲಿಯ ಜನರು ಕರಾವಳಿ ಆಹಾರಗಳನ್ನು ಸೇವಿಸುವುದನ್ನು ಬಹುಪಾಲು ಬಿಟ್ಟಿದ್ದಾರೆ. ಅವರ ನಿತ್ಯದ ಆಹಾರ ಭಾಗವಾಗಿರುತ್ತಿದ್ದ ಸಾಲ್ಮನ್‌ ಮೀನು, ಇತರ ಮೀನು ಮತ್ತು ಸೀಗಡಿಗಳನ್ನು ಜನರು ಕೊಳ್ಳುತ್ತಿಲ್ಲ. ಜೊತೆಗೆ ಸೂಪರ್‌ ಮಾರ್ಕೆಟ್‌ಗಳಲ್ಲಿ ಕರಾವಳಿ ಆಹಾರಗಳನ್ನು ಇಡಲು ಜನರು ಅನುವು ಮಾಡುತ್ತಿಲ್ಲ ಎನ್ನಲಾಗಿದೆ. ಇದಷ್ಟೇ ಅಲ್ಲ ಜನರು ಗೋ ಮಾಂಸ ಮತ್ತು ಕುರಿ ಮಾಂಸವನ್ನೂ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಾಕ್‌ಡೌನ್‌ ಬಳಿಕ ಜನರು ರೆಸ್ಟೊರೆಂಟ್‌ಗೆ ಬರಲು ಆರಂಭಿಸಿದ್ದರು. ಆದರೆ 2ನೇ ಅಲೆಯ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪುನಃ ವ್ಯಾಪಾರ ಸಂಪೂರ್ಣ ಇಳಿಮುಖವಾಗಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next