Advertisement

Nipah 2ನೇ ಬಲಿ: ಕೇರಳಕ್ಕೆ ಮತ್ತೆ ನಿರ್ಬಂಧಗಳ ಸರಪಳಿ

12:15 AM Sep 17, 2024 | Team Udayavani |

ತಿರುವನಂತಪುರ: ಕೇರಳದಲ್ಲಿ ನಿಫಾ ವೈರಸ್‌ಗೆ 2ನೇ ವ್ಯಕ್ತಿ ಸಾವನ್ನಪ್ಪಿದ ಬೆನ್ನಲ್ಲೇ, ರಾಜ್ಯದಲ್ಲಿ ಸೋಂಕಿನ ಬಗ್ಗೆ ಆತಂಕ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ‌ವು ವ್ಯಕ್ತಿ ಮೃತಪಟ್ಟ ಮಲಪ್ಪುರಂ ಜಿಲ್ಲೆಯಲ್ಲಿ ವಿವಿಧ ನಿರ್ಬಂಧ ವಿಧಿಸಿದೆ. ಕೊರೊನಾ ಕಾಲದಲ್ಲಿದ್ದ ಮಾಸ್ಕ್ ಧಾರಣೆ ಕಡ್ಡಾಯ, ಸಾರ್ವಜನಿಕ ಸಭೆ-ಕಾರ್ಯ ಕ್ರಮಗಳ ನಿಷೇಧ, ಸಾಮಾಜಿಕ ಅಂತರ ಕಡ್ಡಾಯದಂಥ ಹಲವು ಕ್ರಮಗಳನ್ನು ಮರುಜಾರಿಗೊಳಿಸಲಾಗಿದೆ.

Advertisement

ಮಲಪ್ಪುರಂ ಜಿಲ್ಲೆಯ ತುರುವಲ್ಲಿ ಗ್ರಾಮ ಪಂಚಾಯತ್‌ನ 4, 5, 6 ಮತ್ತು 7ನೇ ವಾರ್ಡ್‌ಗಳಲ್ಲಿ ಹಾಗೂ ಮಾಂಪತ್‌ ಗ್ರಾಮ ಪಂಚಾಯತ್‌ ವಾರ್ಡ್‌ ನಂಬರ್‌ 7ರಲ್ಲಿ ಎಲ್ಲಾ ಶಾಲೆ, ಕಾಲೇಜು, ಮದ ರಸಾ, ಅಂಗನವಾಡಿಗಳನ್ನು ಮುಂದಿನ ಆದೇಶದವರೆಗೆ ತೆರೆಯ ದಂತೆ ನಿರ್ಬಂಧ ವಿಧಿಸಲಾಗಿದೆ.

ಉಳಿದಂತೆ ಜಿಲ್ಲೆಯ ಬೇರೆ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿ ಸಲಾಗಿದೆ. ಅಲ್ಲದೇ, ಅಂಗಡಿ-ಮುಂಗ­ಟ್ಟುಗಳನ್ನು ಬೆ.10ರಿಂದ ಸಂಜೆ 7 ಗಂಟೆ­ವರೆಗೆ ಮಾತ್ರ ತೆರೆಯುವಂತೆ ಸಮಯ ನಿಗದಿಪಡಿಸಲಾಗಿದ್ದು, ಸಭೆ- ಕಾರ್ಯಕ್ರಮ­ಗಳನ್ನು ನಡೆಸದಂತೆ ನಿಷೇಧಿಸಲಾಗಿದೆ. ಪ್ರಮುಖ ಕಾರ್ಯಕ್ರಮಗಳಿಗೂ ಅನುಮತಿ ಪಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next