Advertisement
ದೇಶದ 2ನೇ ಸೆಮಿ ಹೈ ಸ್ಪೀಡ್ ರೈಲು ಆಗಿರುವ ಇದು ದಿಲ್ಲಿ ಮತ್ತು ಮುಂಬಯಿ ನಡುವೆ ಓಡುವ ನಿರೀಕ್ಷೆಯಿದೆ. ವಂದೇ ಭಾರತ್ ಅನ್ನು ಮೂಲತಃ ಟ್ರೈನ್ 18 ಹೆಸರಿನಿಂದ ವಿನ್ಯಾಸಗೊಳಿಸಲಾಗಿತ್ತು. 2018ರ ಕಾರಣದಿಂದಾಗಿ ಅದಕ್ಕೆ ಈ ಹೆಸರು ಬಂದಿತ್ತು. ಇದಾದ ಬಳಿಕ ಟ್ರೈನ್-19 ಎಂಬ ಹೆಸರಿನೊಂದಿಗೆ ಈ ವರ್ಷ ಒಂದು ಹೊಸ ರೀತಿಯ ರೈಲಿನ ಸೆಟ್ ಅನ್ನು ತರಲು ಯೋಚಿಸಲಾಗಿತ್ತು. ಆದರೆ ಈಗ ಆ ಯೋಜನೆಯನ್ನು ರದ್ದುಗೊಳಿಸಲಾಗಿದ್ದು, ಟ್ರೈನ್-19 ಬದಲಿಗೆ ಟ್ರೈನ್-18 ಮಾದರಿಯ ಹೆಚ್ಚುವರಿ ರೈಲುಗಳನ್ನು ತರಲು ನಿರ್ಣಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೊಸ ವಂದೇ ಭಾರತ್ ರೈಲಿನ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಇದರಲ್ಲಿ ಮೊದಲು ಊಟಕ್ಕೆ ಸಾಕಷ್ಟು ಸ್ಥಳಾವಕಾಶ ಇದ್ದಿರಲಿಲ್ಲ. ಆದರೆ, ಈಗ ಸಾಕಷ್ಟು ಸ್ಥಳವನ್ನು ಉಪಲಬ್ಧಗೊಳಿಸಲಾಗಿದೆ. ರೈಲು ಹರಿದು ಜಾನುವಾರುಗಳು ಕತ್ತರಿಸಲ್ಪಡುವಂ ತಹ ಘಟನೆಗಳನ್ನು ತಪ್ಪಿಸಲು ಈ ರೈಲಿನಲ್ಲಿ ಕ್ಯಾಟಲ್ ಗಾರ್ಡ್‌ನೂ° ಅಳವಡಿಸಲಾಗಿದೆ.
ವಂದೇ ಭಾರತ್‌ನ ಹೊಸ ರೈಲುಗಳ ಸೆಟ್ಟು ಅಸ್ತಿತ್ವದಲ್ಲಿರುವ ರೈಲಿನ ತುಲನೆಯಲ್ಲಿ ಹಲವು ರೀತಿಯಲ್ಲಿ ಭಿನ್ನ ಮತ್ತು ಉತ್ತಮವಾಗಿರಲಿದೆ. ಉದಾಹರಣೆಗೆ, ಇದರ ಸೀಟುಗಳನ್ನು ಶತಾಬ್ದಿ ರೈಲಿನ ಸೀಟುಗಳಿಗಿಂತಲೂ ಹೆಚ್ಚು ಹಿಂದಕ್ಕೆ ಬಾಗಿಸಬಹುದಾಗಿದೆ. ಅಷ್ಟೇ ಅಲ್ಲದೆ, ಸ್ವಯಂಚಾಲಿತ ಬಾಗಿಲುಗಳು ಜಾಮ್ ಆಗುವ ಸಂದರ್ಭದಲ್ಲಿ ಅದನ್ನು ಕೈಯಾರೆ ತೆರೆಯಲು ಕೂಡ ಇದರಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. 2 ಎಕ್ಸಿಕ್ಯೂಟಿವ್ ಬೋಗಿ
ಇದು 16 ಎಸಿ ಬೋಗಿಗಳು, 2 ಎಕ್ಸ್‌ಕ್ಯೂಟಿವ್ ಬೋಗಿಗಳನ್ನು ಹೊಂದರಲಿದೆ. ಡ್ರೈವಿಂಗ್ ಬೋಗಿಯಲ್ಲಿ 44 ಸೀಟುಗಳಿದ್ದರೆ, ಟ್ರೇಲರ್ ಬೋಗಿಯಲ್ಲಿ 78 ಸೀಟುಗಳಿರಲಿವೆ. ಎಕ್ಸಿಕ್ಯೂಟಿವ್ ಚೇರ್ ಕಾರ್‌ನಲ್ಲಿ 52 ಸೀಟುಗಳಿರಲಿವೆ. ರೈಲಿನ ಗರಿಷ್ಠ ವೇಗ ಗಂಟೆಗೆ 220 ಕಿ.ಮೀ. ಆಗಿದೆ. ಶತಾಬ್ದಿ ಅಥವಾ ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ಇದರ ವೇಗ ಶೇ.10ರಿಂದ 15ರಷ್ಟು ಹೆಚ್ಚಾಗಿದೆ. ಅಂದಹಾಗೆ ಈ ರೈಲು ಲೋಕೋಮೋಟಿವ್ ಅಲ್ಲ ಎಂಬುದು ಗಮನಿಸಬೇಕಾದ ಅಂಶ. ಯಂತ್ರಗಳ ಸಹಾಯದಿಂದ ಚಲಿಸುತ್ತದೆ.
Related Articles
ಎರಡನೇ ಸೆಮಿ ಹೈ ಸ್ಪೀಡ್ ಟ್ರೈನ್ ವಂದೇ ಭಾರತ್ ಮುಂಬಯಿ-ಹೊಸದಿಲ್ಲಿ ಮಾರ್ಗದ ನಡುವೆ ಓಡಲಿರುವ ಬಗ್ಗೆ ರೈಲ್ವೇ ಮಂಡಳಿಯು ಸಂಕೇತವನ್ನು ನೀಡಿದೆ. ಈ ರೈಲು ಮುಂಬಯಿಯಿಂದ ದಿಲ್ಲಿಯನ್ನು ತಲುಪಲು 12 ಗಂಟೆಗಳನ್ನು ತೆಗೆದುಕೊಳ್ಳಲಿದೆ. ಅದೇ, ಮುಂಬಯಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ದಿಲ್ಲಿ ಮತ್ತು ಮುಂಬಯಿ ನಡುವಿನ ಅಂತರವನ್ನು ಕ್ರಮಿಸಲು 16 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇಂಥದರಲ್ಲಿ ವಂದೇ ಭಾರತ್ ಪ್ರಯಾಣಿಕರನ್ನು 4 ಗಂಟೆಗಳ ಮೊದಲೇ ಅವರ ಗಮ್ಯ ಸ್ಥಾನಕ್ಕೆ ತಲುಪಿಸಲಿದೆ.
Advertisement