Advertisement

ಆಸೀಸ್‌ನಿಂದ ಟೆಸ್ಟ್‌ ಕ್ಲೀನ್‌ ಸ್ವೀಪ್‌ ಸಾಧನೆ

12:30 AM Feb 05, 2019 | |

ಕ್ಯಾನ್‌ಬೆರ್ರಾ: ದ್ವಿತೀಯ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾವನ್ನು 366 ರನ್ನುಗಳ ಭಾರೀ ಅಂತರದಿಂದ ಕೆಡವಿದ ಆಸ್ಟ್ರೇಲಿಯ ಸರಣಿಯನ್ನು 2-0 ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ. ಇದರೊಂದಿಗೆ ಭಾರತ ವಿರುದ್ಧ ತವರಲ್ಲೇ ಅನುಭವಿಸಿದ ಸರಣಿ ಸೋಲಿನಿಂದ ಕಂಗೆಟ್ಟಿದ್ದ ಕಾಂಗರೂ ಪಡೆ ಅಷ್ಟರ ಮಟ್ಟಿಗೆ ಸಮಾಧಾನಪಟ್ಟಿದೆ.

Advertisement

ಗೆಲುವಿಗೆ 516 ರನ್ನುಗಳ ಕಠಿನ ಗುರಿ ಪಡೆದಿದ್ದ ಶ್ರೀಲಂಕಾ, ಪಂದ್ಯದ 4ನೇ ದಿನವಾದ ಸೋಮವಾರ ಕೇವಲ 149 ರನ್ನಿಗೆ ಕುಸಿಯಿತು. ವೇಗಿ ಮಿಚೆಲ್‌ ಸ್ಟಾರ್ಕ್‌ 46 ರನ್ನಿಗೆ 5 ವಿಕೆಟ್‌ ಉರುಳಿಸಿ ಆಸೀಸ್‌ ಗೆಲುವನ್ನು ತ್ವರಿತಗೊಳಿಸಿದರು. ಸ್ಟಾರ್ಕ್‌ ಮೊದಲ ಇನ್ನಿಂಗ್ಸ್‌ನಲ್ಲೂ 5 ವಿಕೆಟ್‌ ಉರುಳಿಸಿದ್ದರು. 10 ವಿಕೆಟ್‌ ಸಾಧನೆಗಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಮತ್ತೋರ್ವ ವೇಗಿ ಪ್ಯಾಟ್‌ ಕಮಿನ್ಸ್‌ ಸರಣಿಶ್ರೇಷ್ಠರಾಗಿ ಮೂಡಿಬಂದರು. ದ್ವಿತೀಯ ಸರದಿಯಲ್ಲಿ ಕಮಿನ್ಸ್‌ 3 ವಿಕೆಟ್‌ ಕೆಡವಿದ್ದರು.

ಲಂಕೆಯ ದ್ವಿತೀಯ ಸರದಿಯಲ್ಲಿ 42 ರನ್‌ ಮಾಡಿದ ಕುಸಲ್‌ ಮೆಂಡಿಸ್‌ ಅವರದೇ ಹೆಚ್ಚಿನ ಗಳಿಕೆ. ಆರಂಭಕಾರ ಲಹಿರು ತಿರಿಮನ್ನೆ 30, ಕೀಪರ್‌ ನಿರೋಷನ್‌ ಡಿಕ್ವೆಲ್ಲ 27 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-5 ವಿಕೆಟಿಗೆ 534 ಡಿಕ್ಲೇರ್‌ ಮತ್ತು 3 ವಿಕೆಟಿಗೆ 196 ಡಿಕ್ಲೇರ್‌. ಶ್ರೀಲಂಕಾ-215 ಮತ್ತು 149 (ಮೆಂಡಿಸ್‌ 42, ತಿರಿಮನ್ನೆ 30, ಡಿಕ್ವೆಲ್ಲ 27, ಸ್ಟಾರ್ಕ್‌ 46ಕ್ಕೆ 5, ಕಮಿನ್ಸ್‌ 15ಕ್ಕೆ 3). ಪಂದ್ಯಶ್ರೇಷ್ಠ: ಮಿಚೆಲ್‌ ಸ್ಟಾರ್ಕ್‌. ಸರಣಿಶ್ರೇಷ್ಠ: ಪ್ಯಾಟ್‌ ಕಮಿನ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next