Advertisement

ಭಾರತಕ್ಕೆ ಬೃಹತ್‌ ಗೆಲುವು

06:00 AM Jun 30, 2018 | Team Udayavani |

ಡಬ್ಲಿನ್‌: ಬಿಗು ದಾಳಿ ಸಂಘಟಿಸಿದ ಭಾರತೀಯ ತಂಡವು ಶುಕ್ರವಾರ ನಡೆದ ದ್ವಿತೀಯ ಟ್ವೆಂಟಿ20 ಪಂದ್ಯದಲ್ಲಿ ಅಯರ್‌ಲ್ಯಾಂಡ್‌ ತಂಡವನ್ನು 143 ರನ್ನುಗಳಿಂದ ಸೋಲಿಸಿ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ರನ್‌ ಅಂತರ್‌ದಲ್ಲಿ ಇದು ಟ್ವೆಂಟಿ20 ಪಂದ್ಯದಲ್ಲಿ ಭಾರತದ ಬೃಹತ್‌ ಅಂತರದ ಗೆಲುವು ಆಗಿದೆ. 2017ರಲ್ಲಿ ಶ್ರೀಲಂಕಾ ವಿರುದ್ಧ 93 ರನ್ನಿನಿಂದ ಗೆದ್ದಿರುವುದು ಈ ಹಿಂದಿನ ದೊಡ್ಡ ಗೆಲುವು ಆಗಿತ್ತು.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 4 ವಿಕೆಟಿಗೆ 213 ರನ್‌ ಪೇರಿಸಿತ್ತು. ಇದಕ್ಕುತ್ತರವಾಗಿ ಅಯರ್‌ಲ್ಯಾಂಡ್‌ ತಂಡವು 12.3 ಓವರ್‌ಗಳಲ್ಲಿ ಕೇವಲ 70 ರನ್ನಿಗೆ ಆಲೌಟಾಯಿತು. ಇದು ಟ್ವೆಂಟಿ20ಯಲ್ಲಿ ಭಾರತದ ವಿರುದ್ಧ ತಂಡವೊಂದರ ನಿಕೃಷ್ಟ ಮೊತ್ತವಾಗಿದೆ. 2012ರಲ್ಲಿ ಕೊಲಂಬೊ ವಿರುದ್ಧ ಇಂಗ್ಲೆಂಡ್‌ 80 ರನ್ನಿಗೆ ಆಲೌಟಾಗಿದ್ದು ನಿಕೃಷ್ಟ ಮೊತ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next