Advertisement

ಎರಡನೇ ಹಂತಕ್ಕೆ ರಣ ಕಣ ಸಜ್ಜು

05:15 AM Apr 18, 2019 | Team Udayavani |

ದೇಶದಲ್ಲಿ ಏ.18 (ಗುರುವಾರ)ರಂದು 2ನೇ ಹಂತದ ಮತದಾನ ನಡೆಯಲಿದೆ. 12 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆ. ತಮಿಳುನಾಡು(38), ಕರ್ನಾಟಕ(14), ಮಹಾರಾಷ್ಟ್ರ(10), ಉತ್ತರ ಪ್ರದೇಶ(8), ಅಸ್ಸಾಂ(5), ಬಿಹಾರ(5), ಒಡಿಶಾ(5), ಛತ್ತೀಸ್‌ಗಢ(3), ಪಶ್ಚಿಮ ಬಂಗಾಳ(3), ಜಮ್ಮು ಮತ್ತು ಕಾಶ್ಮೀರ (2), ಮಣಿಪುರ (1), ತ್ರಿಪುರಾ(1)ಗಳಲ್ಲಿ ಹಕ್ಕು ಚಲಾವಣೆ ನಡೆಯಲಿದೆ. ಪ್ರಮುಖ ಹುರಿಯಾಳುಗಳ ವಿವರ ಇಲ್ಲಿದೆ.

Advertisement

ನಾಂದೇಡ್‌(ಮಹಾರಾಷ್ಟ್ರ)
ಹಾಲಿ ಎಂಪಿ: ಅಶೋಕ್‌ ಚೌಹಾಣ್‌, ಕಾಂಗ್ರೆಸ್‌
ಪ್ರಮುಖ ಅಭ್ಯರ್ಥಿಗಳು: ಅಶೋಕ್‌ ಚೌಹಾಣ್‌(ಕಾಂಗ್ರೆಸ್‌), ಪ್ರತಾಪ್‌ ಗೋವಿಂದ ರಾವ್‌(ಬಿಜೆಪಿ), ಅಬ್ದುಲ್‌ ಸಮಾದ್‌(ಸಮಾಜವಾದಿ ಪಾರ್ಟಿ)
ಒಟ್ಟು ಮತದಾರರು: 16.87 ಲಕ್ಷ
ಪ್ರಮುಖ ವಿಷಯ: ಇದು ಮರಾಠಾವಾಡಾ ಪ್ರಾಂತ್ಯದ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದ್ದು, ಕೃಷಿ ಸಮಸ್ಯೆ ಮತ್ತು ನೀರಿನ ಅಭಾವವೇ ಪ್ರಮುಖಣಿಷಯವಾಗಿದೆ. ಇದು ಮೀಸಲು ಕ್ಷೇತ್ರವಲ್ಲವಾದರೂ ಪರಿಶಿಷ್ಟ ಜಾತಿಯ ಮತದಾರರ ಸಂಖ್ಯೆ ಅಧಿಕವಿದೆ.

ನೀಲಗಿರಿ (ತಮಿಳುನಾಡು)
ಮಾಜಿ ಕೇಂದ್ರ ಸಚಿವ: ಎ. ರಾಜಾ, ಡಿಎಂಕೆ
ಪ್ರಮುಖ ಅಭ್ಯರ್ಥಿಗಳು: ಎ. ರಾಜಾ (ಡಿಎಂಕೆ), ಎಂ. ತ್ಯಾಗರಾಜನ್‌ (ಎಐಎಡಿಎಂಕೆ)
ಒಟ್ಟು ಮತದಾರರು: 10.03 ಲಕ್ಷ
ಪ್ರಮುಖ ವಿಷಯ: ಮೀಸಲು ಕ್ಷೇತ್ರವಾಗಿರುವ ಇಲ್ಲಿ ಮಾಜಿ ಕೇಂದ್ರ ಸಚಿವ ಎ ರಾಜಾ ಅವರು ಇಲ್ಲಿ ಮತ್ತೆ ಸ್ಪರ್ಧಿಸುತ್ತಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ಗೊಂಗು ವೆಲ್ಲಾರ್‌ ಸಮುದಾಯ ಇಲ್ಲಿ ಪ್ರಾಬಲ್ಯ ಹೊಂದಿದೆ. 2009ರಲ್ಲಿ ರಾಜಾ ಇಲ್ಲಿ ಗೆದ್ದರಾದರೂ, 2014ರಲ್ಲಿ ಅವರು ಎಐಎಡಿಎಂಕೆಯ ಗೋಪಾಲಕೃಷ್ಣನ್‌ ವಿರುದ್ಧ ಸೋಲನ್ನಪ್ಪಿದ್ದರು.

ಮಥುರಾ (ಉತ್ತರಪ್ರದೇಶ)
ಹಾಲಿ ಎಂಪಿ: ಹೇಮಾ ಮಾಲಿನಿ, ಬಿಜೆಪಿ
ಪ್ರಮುಖ ಅಭ್ಯರ್ಥಿಗಳು: ಹೇಮಾಮಾಲಿನಿ(ಬಿಜೆಪಿ), ನರೇಂದ್ರ ಸಿಂಗ್‌ (ಆರ್‌ಎಲ್‌ಡಿ), ಮಹೇಶ್‌ ಪಾಠಕ್‌(ಕಾಂಗ್ರೆಸ್‌)
ಒಟ್ಟು ಮತದಾರರು: 17.99 ಲಕ್ಷ
ಪ್ರಮುಖ ವಿಷಯಗಳು: ಈ ಕ್ಷೇತ್ರದಲ್ಲಿ ರಾಷ್ಟ್ರವಾದಕ್ಕೆ ಹೆಚ್ಚಿನ ಮನ್ನಣೆಯಿದೆ. ಬಾಲಕೋಟ್‌ ದಾಳಿಯ ಬಗ್ಗೆ ಇಲ್ಲಿ ಈಗಲೂ ಜೋರು ಚರ್ಚೆಗಳಾಗುತ್ತವೆ. ಆದರೆ ಇದರ ಜೊತೆಯಲ್ಲೇ, ಕೃಷಿ ಸಮಸ್ಯೆ, ಯಮುನಾ ನದಿಯ ಸ್ವತ್ಛತೆ, ನಿರುದ್ಯೋಗದ ವಿಷಯಗಳೂ ಚರ್ಚೆಯಲ್ಲಿವೆ.

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ)
ಹಾಲಿ ಎಂಪಿ: ಫಾರೂಕ್‌ ಅಬ್ದುಲ್ಲಾ
ಪ್ರಮುಖ ಅಭ್ಯರ್ಥಿಗಳು: ಫಾರೂಕ್‌ ಅಬ್ದುಲ್ಲಾ(ನ್ಯಾಷನಲ್‌ ಕಾನ್ಫರೆನ್ಸ್‌), ಶೇಖ್‌ ಖಾಲಿದ್‌ ಜಹಾಂಗೀರ್‌(ಬಿಜೆಪಿ) ಮತ್ತು ಅಘಾ ಸೈಯ್ಯದ್‌ ಮೋಹ್ಸಿನ್‌(ಪಿಡಿಪಿ)
ಒಟ್ಟು ಮತದಾರರು: 12 ಲಕ್ಷ
ಪ್ರಮುಖ ವಿಷಯ: ಭಾರತ,ಭಾರತೀಯ ಸೇನೆ ಮತ್ತು ಕಾಶ್ಮೀರದ ವಿಷಯವೇ ಮುನ್ನೆಲೆಯಲ್ಲಿದೆ. 2017ರಲ್ಲಿ ಈ ಕ್ಷೇತ್ರದಲ್ಲಿ ತಾರೀಖ್‌ ಅಹ್ಮದ್‌ ರಾಜೀನಾಮೆ ನೀಡಿದ ಮೇಲೆ ಉಪಚುನಾವಣೆ ನಡೆದಿತ್ತು. ಆಗ ಕೇವಲ 7.2 ಪ್ರತಿಶತ ಜನರು ಮತ ನೀಡಿ, ಫಾರೂಕ್‌ ಅಬ್ದುಲ್ಲಾರನ್ನು ಆಯ್ಕೆ

Advertisement

ಹಿಂಜಿಲಿ ವಿಧಾನಸಭಾ ಕ್ಷೇತ್ರ (ಒಡಿಸ್ಸಾ)
ಒಡಿಸ್ಸಾ ಮುಖ್ಯಮಂತ್ರಿ : ನವೀನ್‌ ಪಾಟ್ನಾಯಕ್‌, ಬಿಜೆಡಿ
ಪ್ರಮುಖ ಅಭ್ಯರ್ಥಿಗಳು: ನವೀನ್‌ ಪಟ್ನಾಯಕ್‌ (ಬಿಜೆಡಿ), ಪೀತಾಂಬರ್‌ ಆಚಾರ್ಯ (ಬಿಜೆಪಿ)
ಒಟ್ಟು ಮತದಾರರು: 2.00 ಲಕ್ಷ
ಪ್ರಮುಖ ವಿಷಯ: ಸತತ ನಾಲ್ಕು ಬಾರಿ ಹಿಂಜಿಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು ಗೆದ್ದಿರುವ ನವೀನ್‌ ಪಟ್ನಾಯಕ್‌ ಈ ಬಾರಿ ಈ ಕ್ಷೇತ್ರದ ಜತೆಗೆ ಬಿಜೆಪುರ ಕ್ಷೇತ್ರದಿಂದಲೂ ಕಣಕ್ಕಿಳಿಯುತ್ತಿದ್ದಾರೆ. ಈ ಬಾರಿ ಒಡಿಸ್ಸಾದಲ್ಲಿ ತನ್ನ ಬಲವಾದ ಹೆಜ್ಜೆ ಇರಿಸಬೇಕೆನ್ನುವ ಬಿಜೆಪಿ ಪ್ರಬಲ ಪೈಪೋಟಿ ನೀಡುತ್ತಿದೆ. ಹಿಂದಿನ ಸಲ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳು ಠೇವಣಿ ಕಳಕೊಂಡಿದ್ದರು.

ಶಿವಗಂಗಾ (ತಮಿಳುನಾಡು)
ಹಾಲಿ ಎಂಪಿ: ಪಿಆರ್‌ ಸೆಂಥಿಲ್‌ನಾಥನ್‌ (ಎಐಎಡಿಎಂಕೆ)
ಪ್ರಮುಖ ಅಭ್ಯರ್ಥಿಗಳು: ಕಾರ್ತಿ ಚಿದಂಬರಂ
(ಕಾಂಗ್ರೆಸ್‌), ಎಚ್‌ ರಾಜಾ
ಒಟ್ಟು ಮತದಾರರು: 14 ಲಕ್ಷ
ಪ್ರಮುಖ ವಿಷಯ: ಕೃಷಿ ಸಮಸ್ಯೆ, ಉತ್ತರ ಭಾರತ ಕೆಲಸಗಾರರ ವಲಸೆ, ರೈಸ್‌ ಮಿಲ್‌ಗ‌ಳಲ್ಲಿ ಸ್ಥಳೀಯರಿಗೆ ಕೆಲಸ ಸಿಗುತ್ತಿಲ್ಲ, ಕುಡಿಯುವ ನೀರಿನ ಅಭಾವವಿದೆ ಎನ್ನುವ ವಿಚಾರವೇ ಈಗ ಶಿವಗಂಗಾ ಕ್ಷೇತ್ರದ ಜನರ ಪ್ರಮುಖ ತೊಂದರೆಗಳಾಗಿವೆ.

ಉಧಂಪುರ (ಜಮ್ಮು -ಕಾಶ್ಮೀರ)
ಹಾಲಿ ಸಂಸದ: ಡಾ. ಜಿತೇಂದ್ರ ಸಿಂಗ್‌, ಬಿಜೆಪಿ
ಪ್ರಮುಖ ಅಭ್ಯರ್ಥಿಗಳು: ಡಾ. ಜಿತೇಂದ್ರ ಸಿಂಗ್‌(ಬಿಜೆಪಿ), ವಿಕ್ರಮಾದಿತ್ಯ ಸಿಂಗ್‌(ಕಾಂಗ್ರೆಸ್‌)
ಒಟ್ಟು ಮತದಾರರು: 14 ಲಕ್ಷ
ಪ್ರಮುಖ ವಿಷಯ: ಜಿತೇಂದ್ರ ಸಿಂಗ್‌ ಅವರು ತಮ್ಮ ಅಭಿವೃದ್ಧಿ ರಾಜಕಾರಣಕ್ಕೆ ಓಟು ಕೇಳುತ್ತಿದ್ದಾರೆ. ವಿಕ್ರಮಾದಿತ್ಯ ಅವರಿಗೆ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಪಿಡಿಪಿಯ ಬೆಂಬಲವಿದೆ. ಈ ಕ್ಷೇತ್ರದಲ್ಲಿ ಹಿಂದೂಗಳು ಬಹುಸಂಖ್ಯೆಯಲ್ಲಿದ್ದರೆ, ನಂತರದ ಸ್ಥಾನದಲ್ಲಿ ಮುಸಲ್ಮಾನರು ಮತ್ತು ಸಿಖVರಿದ್ದಾರೆ. ಸಿಖ್ಬರು ಮತ್ತು ಹಿಂದೂಗಳು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ..

97- ಕ್ಷೇತ್ರಗಳು
12- ರಾಜ್ಯಗಳು
01- ಕೇಂದ್ರಾಡಳಿತ ಪ್ರದೇಶ
1,629- ಒಟ್ಟು ಅಭ್ಯರ್ಥಿಗಳು
1,81,525- ಒಟ್ಟು ಮತದಾನ ಕೇಂದ್ರಗಳು
15,79,34,518- ಒಟ್ಟು ಮತದಾರರು
8,02,50,815- ಪುರುಷ ಮತದಾರರು
7,76,62,567- ಮಹಿಳಾ ಮತದಾರರು
11,136- ತೃತೀಯ ಲಿಂಗಿಗಳು

Advertisement

Udayavani is now on Telegram. Click here to join our channel and stay updated with the latest news.

Next